twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಯೋಧರಿಗೆ ಗೀತ ನಮನ: 14 ಭಾಷೆಯಲ್ಲಿ, 100 ಗಾಯಕರಿಂದ ದಾಖಲೆಯ ಹಾಡು

    |

    ದೇಶಾದ್ಯಂತ ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಕ್ಷೇತ್ರದ ಯೋಧರು ಮತ್ತು ಪಿಎಂ ಕೇರ್ಸ್ ಗೆ ದೇಣಿಗೆ ನೀಡುವುದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ದೇಶದ 100 ಗಾಯಕರು 'ಒಂದು ದೇಶ ಒಂದು ಧ್ವನಿ' ಎಂಬ ಗೀತೆಯನ್ನು ಸಮರ್ಪಿಸುತ್ತಿದ್ದಾರೆ.

    ಭಾರತದ ಖ್ಯಾತ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಆಶೀರ್ವಾದದಲ್ಲಿ ದೇಶದ 14 ಭಾಷೆಗಳಲ್ಲಿ 100 ಗಾಯಕರು ಈ ಹಾಡನ್ನು ಹಾಡಿದ್ದಾರೆ. ಇಷ್ಟು ಸಂಖ್ಯೆಯ ಗಾಯಕರು ಒಂದು ಹಾಡು ಹಾಡು ಮೂಲಕ ದಾಖಲೆ ನಿರ್ಮಿಸಿದ್ದಾರೆ. ಭಾರತೀಯ ಗಾಯಕರ ಹಕ್ಕುಗಳ ಸಂಘ (Indian Singers Rights Association (ISRA))ದ ಸದಸ್ಯರಾಗಿರುವ 100 ಗಾಯಕರು ದೇಶದ ವೈದ್ಯಕೀಯ ಸಿಬ್ಬಂದಿಗೆ ಈ ಹಾಡನ್ನು ಸಮರ್ಪಣೆ ಮಾಡಲಿದ್ದಾರೆ. ಮುಂದೆ ಓದಿ..

    ಆಶಾ ಭೋಸ್ಲೆ ಪ್ರತಿಕ್ರಿಯೆ

    ಆಶಾ ಭೋಸ್ಲೆ ಪ್ರತಿಕ್ರಿಯೆ

    ಈ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು, "ಗಾಯಕರು ಕಲಾವಿದರಾಗಿದ್ದು, ಅವರು ಯಾವಾಗಲೂ ಸಂಗೀತದ ಹಲವಾರು ಮಾರ್ಗಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಕೋರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಈ ಸಂದರ್ಭದಲ್ಲಿ ISRAಯಿಂದ 100 ಗಾಯಕರು ದೇಶಕ್ಕೆ ಪ್ರೀತಿ ಮತ್ತು ಒಂದು ಧ್ವನಿಯಾಗಿ ಈ ಹಾಡನ್ನು ಸಮರ್ಪಣೆ ಮಾಡಲು ನಿರ್ಧರಿಸಿದ್ದೇವೆ'' ಎಂದಿದ್ದಾರೆ.

    ಮೇ 3ಕ್ಕೆ ಹಾಡು ದೇಶಕ್ಕೆ ಸಮರ್ಪಣೆ

    ಮೇ 3ಕ್ಕೆ ಹಾಡು ದೇಶಕ್ಕೆ ಸಮರ್ಪಣೆ

    "ನಮ್ಮೆಲ್ಲರ ನೆಚ್ಚಿನ ಗಾಯಕಿ ಲತಾ ಮಂಗೇಶ್ಕರ್ ಅವರು ISRA ಪರವಾಗಿ ಈ ಗೀತೆಯನ್ನು ಮೇ 3 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ'' ಎಂದು ಆಶಾ ಭೋಸ್ಲೆ ತಿಳಿಸಿದರು. ಹಿಂದಿ, ಬೆಂಗಾಲಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಭೋಜ್ಪುರಿ, ಅಸ್ಸಾಮೀಸ್, ಕಾಶ್ಮೀರಿ, ಸಿಂಧಿ, ರಾಜಸ್ಥಾನಿ, ಒಡಿಯಾ ಭಾಷೆಗಳಲ್ಲಿ ಈ ಹಾಡನ್ನು ಹಾಡಲಾಗಿದೆ.

    ಎಸ್ ಪಿ ಬಿ, ಸೋನು ನಿಗಂ, ಶಂಕರ್ ಮಹದೇವನ್ ಸಹ ಹಾಡಿದ್ದಾರೆ

    ಎಸ್ ಪಿ ಬಿ, ಸೋನು ನಿಗಂ, ಶಂಕರ್ ಮಹದೇವನ್ ಸಹ ಹಾಡಿದ್ದಾರೆ

    ಒಂದು ಕಾಳಜಿಗಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಲಾವಿದರು ಸೇರಿರುವುದು ಇದೇ ಮೊದಲಾಗಿದೆ. ಆಶಾ ಭೋಸ್ಲೆ, ಅನೂಪ್‍ಜಲೋಟಾ, ಅಲ್ಕಾ ಯಾಗ್ನಿಕ್, ಹರಿಹರನ್, ಕೈಲಾಶ್ ಖೇರ್, ಪಂಕಜ್ ಉಧಾಸ್, ಕವಿತಾ ಕೃಷ್ಣಮೂರ್ತಿ, ಕುಮಾರ್ ಸಾನು, ಎಸ್.ಪಿ.ಬಾಲಸುಬ್ರಮಣ್ಯಂ, ಶಾನ್, ಸೋನು ನಿಗಂ, ಸುಧೇಶ್ ಭೋಸ್ಲೆ, ಸುರೇಶ್ ವಾಡ್ಕರ್, ಉದಿತ್ ನಾರಾಯಣ, ಶಂಕರ್ ಮಹದೇವನ್ ಸೇರಿದಂತೆ 100 ಗಾಯಕರು ಧ್ವನಿ ನೀಡಿದ್ದಾರೆ.

    ಸೋನು ನಿಗಂ, ಶ್ರೀನಿವಾಸ್, ಸಂಜಯ್ ಕನಸಿನ ಕೂಸು

    ಸೋನು ನಿಗಂ, ಶ್ರೀನಿವಾಸ್, ಸಂಜಯ್ ಕನಸಿನ ಕೂಸು

    ಈ ಗೀತೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಂ, ಶ್ರೀನಿವಾಸ್ ಮತ್ತು ಸಂಜಯ್ ತಂಡನ್ ಅವರ ಕನಸಿನ ಕೂಸಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನು ನಿಗಂ "ದೇಶಾದ್ಯಂತ ನಡೆಯುತ್ತಿರುವ ಹೋರಾಟ ಮತ್ತು ಸರ್ಕಾರ ಹಾಗೂ ವೈದ್ಯಕೀಯ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ಸಲ್ಲಿಸುವ ಒಂದು ಅದ್ಭುತವಾದ ಗೌರವ ಇದಾಗಿದೆ. ಭಾರತದ ವಿವಿಧ ಭಾಗಗಳ 100 ಗಾಯಕರು ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ" ಎಂದಿದ್ದಾರೆ.

    English summary
    100 Famous singers singing for anthem dedicated to corona warriors. 100 Singers join to sing in 14 langguages.
    Friday, May 1, 2020, 13:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X