ಯೋಗರಾಜ್ ಭಟ್ಟರೆ ಬೇರೆ ಅವರ ಸ್ಟೈಲೇ ಬೇರೆ
ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರ ಕಾರ್ಯವೈಖರಿಯೇ ಒಂಥರಾ ಡಿಫರೆಂಟ್. ಅವರ ಮೊದಲ ನಿರ್ದೇಶನದ ಚಿತ್ರ 'ಮಣಿ' ಮತ್ತು ನಂತರದ 'ರಂಗ ಎಸ್ಎಸ್ಎಲ್ ಸಿ' ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನು ಸದ್ದು ಮಾಡಿಲ್ಲದಿದ್ದರೂ ಉತ್ತಮ ಪ್ರಶಂಸೆಗೆ ಒಳಗಾಗಿತ್ತು. ನಂತರ ಇವರ ನಿರ್ದೇಶನದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಬಗ್ಗೆ ಮತ್ತೆ ವಿವರಿಸಬೇಕಾಗಿಲ್ಲ.
ಯೋಗರಾಜ್ ಭಟ್ ಅವರ ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ 'ಪಂಚರಂಗಿ'. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಹೂರ್ತ ಆಗಸ್ಟ್ 20ರ ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು. ಧ್ವನಿಸುರುಳಿ ಬಿಡುಗಡೆಯಾಗುವ ಮುಂಚೆಯೇ ಭಟ್ರು ಚಿತ್ರದ ಒಂದು ಹಾಡನ್ನು ಎಫ್ ಎಂ ರೇಡಿಯೋ ಮತ್ತು ಟಿವಿ ವಾಹಿನಿಗಳಿಗೆ ನೀಡಿರುವುದು ಇವರ ಹೊಸ ಕಾರ್ಯತಂತ್ರ.
"ಲೈಫ್ ಇಷ್ಟೇನೆ..." ಎನ್ನುವ ಹಾಡು ಈಗ ಪ್ರಸಾರಗೊಳ್ಳುತ್ತಿದೆ. ವಿಶೇಷ ಏನೆಂದರೆ ಈ ಹಾಡು ಈಗಾಗಲೇ ಜನಪ್ರಿಯಗೊಂಡಿದೆ. ದಿಗಂತ್, ನಿಧಿ ಸುಬ್ಬಯ್ಯ, ಅನಂತನಾಗ್ ಮತ್ತು ಪ್ರಿಯಾಂಕ ಉಪೇಂದ್ರ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಯೋಗರಾಜ್ ಭಟ್ಟರ ಲೇಖನಿಯಿಂದ ಇಂಥಾ ಹಾಡೇ!
ಈ ಹಾಡಿನ ಸಾಹಿತ್ಯ ಮೆಚ್ಚುವಂತಿದ್ದು ಹಾಡನ್ನು ವೀಕ್ಷಿಸಿದರೆ ಚಿತ್ರದ ತಾಂತ್ರಿಕತೆಯಲ್ಲಿ ಭಟ್ರು ರಾಜಿ ಮಾಡಿಕೊಂಡಿಲ್ಲ ಎನ್ನಬಹುದು.ಒಟ್ಟಿನಲ್ಲಿ ಹೊಸ ಪ್ರಯತ್ನ ಮಾಡುತ್ತಿರುವ ಪ್ರತಿಭಾನ್ವಿತ ನಿರ್ದೇಶಕರಾದ ಯೋಗರಾಜ್ ಭಟ್ ಅವರ ಈ ಚಿತ್ರ ಯಶಸ್ವಿಯಾಗಲಿ ಎನ್ನುವುದು ಚಿತ್ರರಸಿಕರ ಆಶಯ.


Click it and Unblock the Notifications











