»   » ಜಾತಿ,ಮತ ಮೀರಿದ ಈ ಹಾಡಿಗೆ ಹೆಜ್ಜೆ ಹಾಕದವರುಂಟೇ?

ಜಾತಿ,ಮತ ಮೀರಿದ ಈ ಹಾಡಿಗೆ ಹೆಜ್ಜೆ ಹಾಕದವರುಂಟೇ?

Posted By:
Subscribe to Filmibeat Kannada

ಸತ್ಯ ಹರಿಶ್ಚಂದ್ರ ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..." ಎಂಬ ಗೀತೆ ಕೇಳದವರುಂಟೇ? ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ರಚಿಸಿ, ಗಡುಸಿನ ಕಂಠದ ಘಂಟಸಾಲ ಸಂಗೀತ ಸಂಯೋಜಿಸಿ ಹಾಡಿದ ಹಾಡಿಗೆ ಹೆಜ್ಜೆ ಹಾಕದವರುಂಟೇ? 1965ರಲ್ಲಿ ತೆರೆಕಂಡ ಚಿತ್ರದ ಈ ಹಾಡು ಇಂದಿಗೂ ಯಾವುದೇ ವಾದ್ಯಗೋಷ್ಠಿಯ ಕೊನೆಯ ಹಾಡು!

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ
ಹಹಹಹಾ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹೇ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ
ಕತ್ತ ಕತ್ತಲು ನಿರನಾಮಾ..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹ್ಯ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಸೈವರಿಗೆಲ್ಲಾ ಸಿವದೊಡ್ಡೋನು
ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು
ಹೊ ಹೊ ಹೊಹೊ ಹೊ ಹೊ ಹೊಹೊ
ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾಗ್ತಾರು..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹ್ಯಾ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ಏಯ್..
ಮಸಣದಲ್ಲಿ ಈ ವೀರಬಾಹುವ
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾಗ್ತರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹಹಹಹಹಾ
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..

ರಾಜ್ ಜನ್ಮದಿನದಂದು ಥಿಯೇಟರಲ್ಲಿ ಸತ್ಯ ಹರಿಶ್ಚಂದ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada