»   »  ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಸಿನಿ ಸಮಯ!

ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಸಿನಿ ಸಮಯ!

By: *ಜಯಂತಿ
Subscribe to Filmibeat Kannada
Cine time for Kannada poet Subraya Chokkadi
ಕವಿಗಳತ್ತ ಈಗ ಸಿನಿಮಾ ಚಿತ್ತ. ಜಯಂತ ಕಾಯ್ಕಿಣಿ ಆಯಿತು. ಬಿ.ಆರ್.ಲಕ್ಷ್ನಣ ರಾವ್ ಮಳೆಗೀತೆಯನ್ನು ರಮೇಶ್ ಎಳೆತಂದದ್ದೂ ಆಯಿತು. ಈಗ ಸುಬ್ರಾಯ ಚೊಕ್ಕಾಡಿಯವರಿಗೆ ಸಿನಿ ಟೈಮ್. ಅವರು ಸಮಾಗಮ ಚಿತ್ರಕ್ಕೆ ಎರಡು ಗೀತೆಗಳನ್ನು ಒದಗಿಸಿದ್ದಾರೆ. ಒಂದು: ಈಗಾಗಲೇ ಜನಪ್ರಿಯವಾಗಿರುವ ಮುನಿಸು ತರವೆ ಮುಗುದೆ ಭಾವಗೀತೆ. ಅಶ್ವಥ್ ಹಾಕಿರುವ ಟ್ಯೂನನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇನ್ನೊಂದು 'ಓ ನನ್ನ ಪ್ರೀತಿಯ ಗೆಳೆಯಾ.' ಚಿತ್ರಾ ಇದಕ್ಕೆ ದನಿಯಾಗಿದ್ದಾರೆ.

ನಿರ್ಮಾಪಕ ಅಂದಾನಿಗೌಡರು ಚೊಕ್ಕಾಡಿಯವರಿಗೆ ಫೋನ್ ಮಾಡಿ, ಅವರ ಹಳೆಯ ಹಾಡನ್ನು ತೆಗೆದುಕೊಳ್ಳಲು ಮೊದಲು ಅನುಮತಿ ಕೋರಿದ್ದಾರೆ. ಆಮೇಲೆ ಇನ್ನೂ ಎರಡು ಹಾಡು ಬರೆದುಕೊಡಿ ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ಎರಡನೇ ಕೋರಿಕೆ ಚೊಕ್ಕಾಡಿಯವರಿಗೆ ಒಂದಿಷ್ಟು ಕಷ್ಟ ಕೊಟ್ಟಿದೆ. ಯುವ ಸಂಗೀತ ನಿರ್ದೇಶಕ ಕಿರಣ್ ಹಾಕಿದ ಫಾಸ್ಟ್ ನಂಬರ್ಗೆ ಪದಗಳನ್ನು ಇಡುವ ವಿಫಲ ಪ್ರಯತ್ನವಕ್ಕೂ ಚೊಕ್ಕಾಡಿ ಕೈಹಾಕಿದ್ದಾರೆ. ಯಾವಾಗ ಅದು ಸಾಧ್ಯವಾಗಲಿಲ್ಲವೋ ಸುಮ್ಮನಾಗಿ, ಮಧುರವಾದ ಟ್ಯೂನಿಗೆ ಮಾತ್ರ ಹಾಡು ಬರೆದುಕೊಟ್ಟಿದ್ದಾರೆ. ಅವರಿಗೆ ಬೆಂಗಳೂರಿನಲ್ಲಿ ಚಿತ್ರತಂಡ ಸನ್ಮಾನ ಮಾಡಿದ್ದು ವಿಶೇಷ.

ಚೊಕ್ಕಾಡಿ ಆಡಿದ ಮಾತು ಅರ್ಥಪೂರ್ಣವಾಗಿತ್ತು
ಕಾವ್ಯ ಏಕಾಂತ. ಸಿನಿಮಾ ಕಾವ್ಯ ಲೋಕಾಂತ. ಟ್ಯೂನ್‌ಗಳಿಗೆ ಹಾಡು ಬರೆಯುವುದು ನನಗೆ ಹೊಸತೇನೂ ಅಲ್ಲ. ಅಶ್ವಥ್ ಪೇಪರ್ ಮೇಲೆ ಲಲಲಲ ಎಂದಷ್ಟೇ ಬರೆದ ರಾಗಗಳಿಗೂ ಸಾಹಿತ್ಯ ಮಾಡಿಕೊಟ್ಟಿದ್ದೇನೆ. ಆದರೆ, ಸಿನಿಮಾಗೆ ಬರೆಯುವುದು ಅಂದೊಡನೆ ಒಂಥರಾ ಆಯಿತು. ಇದು ನನ್ನ ಆಳದಿಂದ ಬಂದ ಸಾಹಿತ್ಯ ಅಂತ ಎದೆಯುಬ್ಬಿಸಿ ಹೇಳಲಾರೆ. ಚೊಕ್ಕಾಡಿಯಲ್ಲಿ ನನಗೆ ತೋಚಿದ್ದನ್ನು ಬರೆದುಕೊಂಡು ಇದ್ದೆ. ಈಗ ಸಿನಿಮಾಗೆ ಇವರು ಪ್ರೀತಿಯಿಂದ ಎಳೆತಂದಿದ್ದಾರೆ. ಈ ಸನ್ಮಾನ ಕೂಡ ನನಗೆ ಅನಿರೀಕ್ಷಿತ.

ಸಂಗೀತ ನಿರ್ದೇಶಕರಿಗೆ ಲಹರಿ ವೇಲು ಛೀಮಾರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada