twitter
    For Quick Alerts
    ALLOW NOTIFICATIONS  
    For Daily Alerts

    ಫೀವರ್ ಗೆ ಹಿಂದಿ ಜ್ವರ, ಬಿಗ್ ಎಫ್ ಎಂನಿಂದ ಬಿಗ್ ಮೋಸ!

    By * ಅಮರನಾಥ್ ಶಿವಶಂಕರ್ , ಬೆಂಗಳೂರು
    |

    Big FM Channel plays Hindi songs
    ಅನ್ನ ಕೊಟ್ಟ ಮನೆಗೆ ಕನ್ನ ಹಾಕೋದು, ಉಪ್ಪು ತಿಂದ ಮನೆಗೆ ಎರಡು ಬಗೆಯೋದು, ಹತ್ತಿದ ಏಣಿಯನ್ನ ಒದೆಯೋದು ಅಂತೆಲ್ಲ ಅರ್ಥವತ್ತಾದ ಗಾದೆಗಳನ್ನ ನಾವ್ ಕೇಳಿದ್ದೀವಿ. ಅದನ್ನ ಕಾರ್ಯರೂಪಕ್ಕೆ ತರ್ತಾ ಇರೋವ್ರು ಬೆಂಗಳೂರಿನಲ್ಲಿರೋ ಕೆಲವು ಖಾಸಗೀ ಎಫ್.ಎಂ ವಾಹಿನಿಗಳು.

    ಏನಿದ್ರ ಹಿನ್ನಲೆ - ಬೆಂಗಳೂರಿನಲ್ಲಿ ಸುಮಾರು 5-6 ವರ್ಷಗಳ ಹಿಂದೆ ಖಾಸಗೀ ಎಫ್.ಎಂ ವಾಹಿನಿಗಳು ಬರಕ್ಕೆ ಶುರು ಆಯಿತು. ಶುರು ಆದ ದಿನಗಳಲ್ಲಿ ಕೇವಲ ಹಿಂದಿ ಹಾಡುಗಳನ ಪ್ರಸಾರ ಮಾಡಿಕೊಂಡು ವಾರದಲ್ಲಿ 2-4 ಘಂಟೆಗಳ ಕಾಲ ಮಾತ್ರ ಕನ್ನಡ ಹಾಡುಗಳನ್ನ ಪ್ರಸಾರ ಮಾಡೋ ಪ್ರಕ್ರಿಯೆ ಇತ್ತು.

    ಆದ್ರೆ ಕೇಳುಗ ಮಹಾಪ್ರಭು ಇವರ ಹಿಂದಿ ಹಾಡಿಗೆ ಕಿವಿಗೊಡಲೇ ಇಲ್ಲ. ಅಲ್ಲ ಸ್ವಾಮೀ 80% ಗಿಂತಾ ಹೆಚ್ಚು ಕನ್ನಡಿಗರು ವಾಸ ಇರೋ ಬೆಂಗಳೂರ್ನಲ್ಲಿ ಹಿಂದಿ ಹಾಡುಗಳನ್ನ ಹಾಕಿದ್ರೆ ಕೇಳುಗರ ಸಂಖ್ಯೆ ಜಾಸ್ತಿ ಹೆಂಗಿರಕ್ಕೆ ಸಾಧ್ಯ. ಶುರು ಆದ ವಾಹಿನಿಗಳು ಟುಸ್ಸ್ ಪಟಾಕಿ ಆಗ್ತಿದ್ದಂತೆ ಬುದ್ದಿ ಕಲೆತುಕೊಂಡರು. ಒಬ್ಬೊಬ್ಬ್ರಾಗೆ ಹಿಂದಿ ಹಾಡುಗಳನ ನಿಲ್ಲಿಸಿ ಕನ್ನಡ ಹಾಡುಗಳನ ಪ್ರಸಾರ ಮಾಡಕ್ಕೆ ಶುರು ಮಾಡಿದ್ರು. ಇದ್ದಕ್ಕಿದ್ದಂಗೆ ವ್ಯಾಪಾರ ಕುದುರಿಕೊಂಡ ಖುಷಿ ಎಲ್ಲ ವಾಹಿನಿಯವರ್ಗೂ ಇತ್ತು. [RAM Rating]
    ನಲ್ಲಿ ಕನ್ನಡ ಹಾಡುಗಳನ್ನ ಹಾಕ್ತಿದ್ದ ವಾಹಿನಿಗಳದ್ದೇ ಕಾರುಬಾರು ನಡೀತಿತ್ತು. ಕನ್ನಡ ಹಾಡುಗಳ ಪ್ರಸಾರ ಮಾಡ್ತಾ ಇದ್ದ ವಾಹಿನಿಗಳು ಮಾರುಕಟ್ಟೆಯಲ್ಲಿ ಸುಮಾರು 80% ಅಷ್ಟು ತಮ್ಮ ಹಿಡಿತವನ್ನ ಸಾಧಿಸಿದರು. ಒಟ್ಟ್ನಲ್ಲಿ ಕನ್ನಡಿಗರ ಆಶಿರ್ವಾದ, ಕೃಪೆ ಇವರುಗಳ ಮೇಲಿತ್ತು.

    ಈಗೇನು ಸಮಸ್ಯೆ - ಕನ್ನಡ ಹಾಡುಗಳನ್ನೇ ಪ್ರಸಾರ ಮಾಡಿಕೊಂಡು ತಮ್ಮ ಪ್ರಾಬಲ್ಯ ಸಾಧಿಸಿಕೊಂಡು ಬಂದ 92.7 ಬಿಗ್ ಎಫ್.ಎಂ ಮತ್ತೆ ಫೀವರ್ 104 ಎಫ್.ಎಂ ವಾಹಿನಿಗಳು ಮತ್ತೆ ಹಿಂದಿ ಹಾಡುಗಳನ್ನ ಪ್ರಸಾರ ಮಾಡಕ್ಕೆ ಶುರು ಮಾಡಿದ್ದಾರೆ. ಕನ್ನಡ ಹಾಡುಗಳನ್ನ ಹಾಕಿ ಗೆದ್ದ ಇವರುಗಳು ಈಗ ಕನ್ನಡಿಗರಿಗೆ ಬೇಕಿಲ್ಲದ, ಹಿಂದೊಮ್ಮೆ ಕನ್ನಡಿಗರು ಸಾರಾಸಗಟಾಗಿ ತಿರಸ್ಕರಿಸಿದ್ದ ಹಿಂದಿ ಹಾಡುಗಳ್ನ ಮತ್ತೆ ಹಾಕ್ತಿದ್ದಾರೆ.

    ಕನ್ನಡಿಗರಿಂದ ಇವರಿಗೆ ಬಂದ ಲಾಭವನ್ನು ಮರೆತು ಈ ರೀತಿಯ ಧೋರಣೆ ತಾಳಿರೋದು ವಿಪರ್ಯಾಸವೇ ಸರಿ. ಇದರ ಪರಿಣಾಮ ಏನ್ ಆಗತ್ತೆ ಅನ್ನೋದು ಇವರಿಗೆ ಅರ್ಥವಾದಂತಿಲ್ಲ. ಈ ವಿಷಯವಾಗಿ ಒಂದಂಶ ಹೇಳಲೇ ಬೇಕು ಅಂದ್ರೆ, ಕೇವಲ ಹಿಂದಿ ಹಾಡುಗಳನ್ನ ಪ್ರಸಾರ ಮಾಡ್ತಾ ಇರೋ ಒಂದು ಖಾಸಗೀ ಎಫ್.ಎಂ ವಾಹಿನಿಗೆ ಕೇಳುಗರ ಸಂಖ್ಯೆ ಇರೋದು ಕೇವಲ 9% ಅಷ್ಟೇ.

    ಬಿಗ್ ಎಫ್.ಎಂ ಮತ್ತೆ ಫೀವರ್ ಎಫ್.ಎಂ ವಾಹಿನಿಗಳು ತಮ್ಮ ತಪ್ಪುಗಳನ್ನ ತಿದ್ದಿಕೊಂಡು ಮತ್ತೆ 100% ಕನ್ನಡ ಹಾಡುಗಳನ ಪ್ರಸಾರ ಮಾಡಿದ್ರೆ ವ್ಯವಹಾರದಲ್ಲಿ ಉಳೀತಾರೆ. ಇಲ್ಲಾಂದ್ರೆ ಅಳೀತಾರೆ ಅಷ್ಟೇ.

    ಸ್ವಾಭಿಮಾನಿ ಕನ್ನಡಿಗರಾಗಿ ನಾವೇನ್ ಮಾಡಬೇಕು- ಕನ್ನಡ ವಿರೋಧಿ ಧೋರಣೆ ತೋರಿಸ್ತಾ ಇರೋ ಈ ಎಫ್.ಎಂ ವಾಹಿನಿಗಳನ್ನ ನಾವು ಬಹಿಷ್ಕರಿಸಬೇಕು. ಅಪ್ಪಿ ತಪ್ಪಿ ಕೂಡ ಫೀವರ್ ಮತ್ತೆ ಬಿಗ್ ಎಫ್.ಎಂ ವಾಹಿನಿಗಳನ್ನ ಟ್ಯೂನ್ ಮಾಡಬಾರದು. ಕನ್ನಡ ಹಾಡುಗಳನ್ನ ಪ್ರಸಾರ ಮಾಡ್ತಾರೋ, ಕೇವಲ ಅಂತಹ ವಾಹಿನಿಗಳನ್ನ ನಮ್ಮ ಮೊಬೈಲ್ ರೇಡಿಯೋ ದಲ್ಲಿ, ಮನೆಯಲ್ಲಿ, ನಮ್ಮ ಕಾರುಗಳಲ್ಲಿ ಮುಂತಾದೆಡೆ ಹಾಕಬೇಕು. ಕೇಳುಗರ ಸಂಖ್ಯೆ ಕಡಿಮೆ ಆದ್ರೆ ತಾವಾಗೆ ತಪ್ಪನ್ನರಿತ್ಕೊಂಡು ತಿದ್ದಿಕೊಳ್ತಾರೆ.

    English summary
    Fever FM with average market shares of 8.7 per cent and 8 per cent, now started to play non Kannada songs specially Hindi songs. Earlier, FM channel owed to play on Kannada songs but failed. BIG 92.7 FM also following Fever and showing non Kannadiga attitude.
    Wednesday, June 20, 2012, 17:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X