»   » ಪಾಪ್ ತಾರೆ ವಿಟ್ನಿ ಹೌಸ್ಟನ್ ನಿಗೂಢ ಸಾವು

ಪಾಪ್ ತಾರೆ ವಿಟ್ನಿ ಹೌಸ್ಟನ್ ನಿಗೂಢ ಸಾವು

Posted By:
Subscribe to Filmibeat Kannada
Whitney Houston Mysterious Death
ಜನಪ್ರಿಯ ಪಾಪ್ ತಾರೆ 48 ವರ್ಷದ ವಿಟ್ನಿ ಹೌಸ್ಟನ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ವಿಟ್ನಿ ಸಾವಿನ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ.

ಗ್ರ್ಯಾಮಿ ಪ್ರಶಸ್ತಿ ಸಮಾರಂಭದ ಖುಷಿಯಲ್ಲಿದ್ದ ಸಂಗೀತ ಪ್ರೇಮಿಗಳಿಗೆ ವಿಟ್ನಿ ಸಾವಿನ ಸುದ್ದಿ ತೀವ್ರ ಆಘಾತ ತಂದಿದೆ.

ಪಾಪ್ ಲೋಕದಲ್ಲಿ ಉತ್ತುಂಗ ಸ್ಥಿತಿ ತಲುಪುತ್ತಿದ್ದ ಹಾಗೆ ವಿಟ್ನಿ, ಮಾದಕ ದ್ರವ್ಯ ದಾಸಿಯಾಗಿಬಿಟ್ಟಳು. ಗಾಯಕ ಬಾಬ್ಬಿ ಬ್ರೌನ್ ಮದುವೆಯಾದ ಮೇಲೂ ತನ್ನ ಉನ್ಮತ್ತ ನಡವಳಿಕೆಯನ್ನು ವಿಟ್ನಿ ಬದಲಿಸಿಕೊಳ್ಳಲಿಲ್ಲ.

ಸಂಗೀತ ಲೋಕವಲ್ಲದೆ ಚಿತ್ರರಂಗದಲ್ಲೂ ಕಾಲಿರಿಸಿದ ವಿಟ್ನಿ, ಬಾಡಿಗಾರ್ಡ್ ಹಾಗೂ ವೈಟಿಂಗ್ ಟು ಎಕ್ಸ್ ಹೇಲ್ ಮುಂತಾದ ಚಿತ್ರಗಳನ್ನು ಅಭಿನಯಿಸಿದ್ದಳು. ಆದರೆ, ಮಾದಕ ದ್ರವ್ಯ ಚಟ ಆಕೆ ವೃತ್ತಿ ಜೀವನಕ್ಕೆ ಮಾರಕವಾಗಿ ಪರಿಣಮಿಸಿತ್ತು.

"The biggest devil is me. I'm either my best friend or my worst enemy." [Read: Complete Biography of Whitney Houston] ಎಂದು 2002ರಲ್ಲಿ ವಿಟ್ನಿ ಹೇಳಿದ್ದು ಇಲ್ಲಿ ಸ್ಮರಣೀಯ

ಮಾದಕ ದ್ರವ್ಯ ಚಟಕ್ಕೆ ವಿಟ್ನಿ ಬಲಿ ಎಂದು ಒಂದು ಸಾಲಿನ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ ಎಂದು ಆಪ್ತರು ಹೇಳುತ್ತಿದ್ದಾರೆ. ಅಭಿಮಾನಿಗಳು ಮಾತ್ರ ವಿಟ್ನಿ ಸಾವಿನ ಆಘಾತದಿಂದ ಇನ್ನೂ ಹೊರಬಿದ್ದಿಲ್ಲ.

English summary
48-year-old Whitney Houston - the popular pop star who created a special niche for herself in the world of music, died in a mysterious way. Reason behind her death is still unknown. The shocking news, which shattered her followers and admirers, came on the night of Grammy Awards on Saturday, Feb 11.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X