»   » ನಿಲ್ಲು ನಿಲ್ಲೆ ಪತಂಗ ಬೇಡ ಬೇಡ ಬೆಂಕಿಯ ಸಂಗ

ನಿಲ್ಲು ನಿಲ್ಲೆ ಪತಂಗ ಬೇಡ ಬೇಡ ಬೆಂಕಿಯ ಸಂಗ

Posted By:
Subscribe to Filmibeat Kannada


ಗಂಡನ ಗೆಳೆಯನೊಂದಿಗೆ ಸಖ್ಯ ಬೆಳೆಸಿದ ನಾಯಕಿ ಪಾತ್ರದಲ್ಲಿ ಜಯಂತಿ ಅಭಿನಯ, ಮತ್ತೆ ಮತ್ತೆ ತಪ್ಪು ಮಾಡುವ ನಾಯಕಿಯ ಮನಸ್ಥಿತಿ ಇವು ಎಡಕಲ್ಲು ಗುಡ್ಡದ ಮೇಲೆ ಚಿತ್ರ ನೋಡಿದ ಎಲ್ಲರನ್ನೂ ನಿರಂತರವಾಗಿ ಕಾಡುತ್ತವೆ. ಆರತಿ, ಚಂದ್ರಶೇಖರ್ ತಾರಾಗಣದ ಈ ಚಿತ್ರದಲ್ಲಿನ ನಿಲ್ಲು ನಿಲ್ಲೆ ಪತಂಗ ಹಾಡು ಅಂದಲ್ಲ, ಇಂದೂ ಜನಪ್ರಿಯ. ಎಸ್.ಜಾನಕಿ ಗಾಯನ, ಎಂ. ರಂಗ ರಾವ್ ಸಂಗೀತ, ವಿಜಯನಾರಸಿಂಹ ಸಾಹಿತ್ಯ ಎಲ್ಲವೂ ಎ-ಕ್ಲಾಸ್.ನಿಲ್ಲೆ ಪತಂಗ
ನಿಲ್ಲೆ ಪತಂಗ
ನಿಲ್ಲು ನಿಲ್ಲೆ ಪತಂಗ
ಬೇಡ ಬೇಡ ಬೆಂಕಿಯ ಸಂಗ
ಪತಂಗ ಪತಂಗ

ಕಾಣದ ಜ್ವಾಲೆ ಕಾಮದ ಲೀಲೆ
ಕಾಣದ ಜ್ವಾಲೆ ಕಾಮದ ಲೀಲೆ
ಕಾಡುತ ಆಡಿರೆ ಕಣ್ಣು ಮುಚ್ಚಾಲೆ
ಕ್ಷಣಿಕದ ಚಪಲಕ್ಕೆ ಬಲಿಯಾಗುವೆಯ
ಕ್ಷಣಿಕದ ಚಪಲಕ್ಕೆ ಬಲಿಯಾಗುವೆಯ
ಶ್ರೀಮತಿ ಎನಿಸಿ ಮತಿ ನೀಗುವೆಯ
ಶ್ರೀಮತಿ ಎನಿಸಿ ಮತಿ ನೀಗುವೆಯ
ಪತಂಗ ಪತಂಗ
ಬೇಡ ಬೇಡ ಬೆಂಕಿಯ ಸಂಗ
ಬೇಡ ಬೇಡ ಬೆಂಕಿಯ ಸಂಗ

ಧರ್ಮದ ಸೇವಕಿ ನೀನಾಗುವೆಯೊ
ನರಕದ ನಾಯಕಿ ನೀನೆನಿಸುವೆಯೊ
ಧರ್ಮದ ಸೇವಕಿ ನೀನಾಗುವೆಯೊ
ನರಕದ ನಾಯಕಿ ನೀನೆನಿಸುವೆಯೊ
ಕಾರ್ಕೋಟಕ ವಿಷ ನೀ ಭರಿಸುವೆಯೊ
ಕಾರ್ಕೋಟಕ ವಿಷ ನೀ ಭರಿಸುವೆಯೊ
ಅಮೃತ ವಾಹಿನಿ ನೀನಾಗುವೆಯೊ
ಅಮೃತ ವಾಹಿನಿ ನೀನಾಗುವೆಯೊ
ಪತಂಗ ಪತಂಗ

ವಿಲಾಸದ ಸುಳಿಗೆ ಸಿಲುಕದೆ ಬಾ
ವಿಶಾದದ ತೂಕಕೆ ಜಾರದೆ ಬಾ ಬಾ
ವಿವೇಕದ ಗಡಿಯ ಮೀರದೆ ಬಾ ಬಾ
ವಿವಾಹ ಜೀವನ ಪೂಜೆಗೆ ಬಾ
ವಿವಾಹ ಜೀವನ ಪೂಜೆಗೆ ಬಾ ಬಾ
ನಿಲ್ಲು ನಿಲ್ಲೆ ಪತಂಗ..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada