»   » ಪೈ ವೈಸ್ ರಾಯ್ ನಲ್ಲಿ ಶಿವಮಣಿ ಝೇಂಕಾರ

ಪೈ ವೈಸ್ ರಾಯ್ ನಲ್ಲಿ ಶಿವಮಣಿ ಝೇಂಕಾರ

Subscribe to Filmibeat Kannada

ಬೆಂಗಳೂರು ಮೂಲದ ಪೈ ಗ್ರೂಪ್ ಸಂಸ್ಥೆ ನಿರ್ಮಿಸುತ್ತಿರುವ 'ಶಿವಮಣಿ'ಚಿತ್ರದ ಧ್ವನಿಸುರುಳಿ ಹಾಗೂ ಸಿಡಿಗಳು ನವೆಂಬರ್ 13ರಂದು ನಗರದಜಯನಗರ 3ನೇ ಬ್ಲಾಕ್ ನ ಪೈ ವೈಸ್ ರಾಯ್ ನಲ್ಲಿ ಬಿಡುಗಡೆಯಾಗಲಿವೆ.'ದಂಡಂ ದಶ ಗುಣಂ' ಎಂಬುದು ಚಿತ್ರದ ಉಪಶೀರ್ಷಿಕೆ.

ಎಸ್.ಕೆ.ಅಮರನಾಥ್ ನಿರ್ದೇಶನದಚೊಚ್ಚಲ ಚಿತ್ರ ಶಿವಮಣಿ. ಶ್ರೀ ಮುರಳಿ ಹಾಗೂ ಶರ್ಮಿಳಾ ಮಾಂಡ್ರೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಮೇಶ್ ಭಟ್, ವಿನಯಪ್ರಕಾಶ್, ಶೋಭರಾಜ್, ಅವಿನಾಶ್ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಶಿವಮಣಿ ಚಿತ್ರದ ಧ್ವನಿ ಸುರುಳಿಯನ್ನು ಸ್ವರ್ಣ ಆಡಿಯೋ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಎಸ್ ಜೆಪಿ ಕ್ರಿಯೇನ್ಸ್ ಬ್ಯಾನರಿನಡಿ ಜಗನ್ನಾಥ್ ಪೈ ಹಾಗೂ ಅಜಯ್ ಪೈ ಈ ಚಿತ್ರವನ್ನು ನಿರ್ಮಿಸಿದ್ದಾರೆ.
(ದಟ್ಸ್ ಕನ್ನಡಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada