ರಾಘವೇಂದ್ರ ರಾಜ್ ಕುಮಾರ್ ಮತ್ತೆ ಹಾಡಲಿದ್ದಾರೆ

By Rajendra

"ಒಲಿದ ಸ್ವರಗಳು ಒಂದಾದರೆ ಬಲು ಇಂಪಾದ ಸಂಗೀತಾ.. ಹು ಹಾಡು ಸೌಮ್ಯಾ" (ಗಜಪತಿ ಗರ್ವಭಂಗ) ಎನ್ನುತ್ತಿದ್ದರೆ ಪ್ರೇಕ್ಷಕರು ಹಾಡಲು ಶುರುವಚ್ಚಿಕೊಳ್ಳುತ್ತಿದ್ದರು. ಆ ರೀತಿಯ ಕೋಮಲ ಕಂಠದ ಗಾಯಕ ರಾಘವೇಂದ್ರ ರಾಜ್ ಕುಮಾರ್. ಅವರ ಕಂಠದಲ್ಲಿ ಏನೋ ಒಂಥರಾ ಆಕರ್ಷಣೆ ಇತ್ತು. ಆದರೂ ಯಾಕೋ ಏನೋ ರಾಘಣ್ಣ ಹೆಚ್ಚಾಗಿ ಹಾಡಲು ಹೋಗಲಿಲ್ಲ.

ಈಗ ಬಹಳ ಸುದೀರ್ಘ ಸಮಯದ ಬಳಿಕ ಮತ್ತೆ ರಾಘವೇಂದ್ರರಾಜ್ ಕುಮಾರ್ ಹೊಸ ಹುರುಪಿನಿಂದ ಹಾಡಲು ಮುಂದಾಗಿದ್ದಾರೆ. "ನಿಜವ ನುಡಿಯಲೆ ನನ್ನಾಣೆ ನಲ್ಲೆ ಪ್ರೀತಿಯ ರಂಗು ಚೆಲ್ಲಿದೆ..."ಎಂದು 'ನಂಜುಂಡಿ ಕಲ್ಯಾಣ' ಚಿತ್ರದಲ್ಲಿ ಹಾಡಿದ್ದ ರಾಘಣ್ಣ ಈಗಪುನೀತ್ ರಾಜ್ ಕುಮಾರ್ 'ಅಣ್ಣಾ ಬಾಂಡ್' ಚಿತ್ರಕ್ಕಾಗಿ ಹಾಡಲಿದ್ದಾರೆ.

ವರನಟ ಡಾ.ರಾಜ್ ಕುಮಾರ್ ಅವರ ಹಾಡುಗಾರಿಕೆಯ ಪ್ರಭಾವ ರಾಘಣ್ಣನ ಮೇಲೆ ಮುಂಚಿನಿಂದಲೂ ಇದೆ. ತಮ್ಮ ಚಿತ್ರಗಳಿಗೆ ತಾವೇ ಹಾಡಿಕೊಳ್ಳುತ್ತಿದ್ದ ರಾಘಣ್ಣ ಕೊನೆಯದಾಗಿ ಹಾಡಿದ ಚಿತ್ರ 'ಸೂತ್ರಧಾರ'. ಈಗ ಮತ್ತೊಮ್ಮೆ ತಮ್ಮ ಕಂಠಸಿರಿಯನ್ನು ಸೊಬಗನ್ನು ಅಭಿಮಾನಿಗಳಿಗೆ ಕರುಣಿಸಿದ್ದಾರೆ.

'ಮೈಲಾರಿ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರು ಶಿವರಾಜ್ ಕುಮಾರ್‌ಗಾಗಿ ಹಾಡಿದ್ದರು. ಈಗ ಪುನೀತ್ ಚಿತ್ರದಲ್ಲಿ ರಾಘಣ್ಣ ಹಾಡುತ್ತಿರುವುದು ವಿಶೇಷ. ಸಾಕಷ್ಟು ಗ್ಯಾಪ್ ಬಳಿಕ ಬರುತ್ತಿರುವ ಅವರ ಧ್ವನಿಯ ಏರಿಳಿತಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Actor Raghavendra Rajkuamar, after starring in lead roles in many Kannada films, he is now actively involved in production is back to singing. Like his father, Raghavendra Rajkumar too sings his own songs in the movies.He has announced that he will be singing for his brother Puneeth Rajakumar in the film 'Anna Bond'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X