twitter
    For Quick Alerts
    ALLOW NOTIFICATIONS  
    For Daily Alerts

    ಈ ಮಣ್ಣು ನಮ್ಮದು ಈ ಗಾಳಿ ನಮ್ಮದು ಜನಪ್ರಿಯ ಗೀತೆ

    By Rajendra
    |

    Lyricist RN Jayagopal
    ಖ್ಯಾತ ಸಾಹಿತಿ ದಿ.ಆರ್ ಎನ್ ಜಯಗೋಪಾಲ್ ಅವರು ರಚಿಸಿದ ಈ ಜನಪ್ರಿಯ ನಾಡಗೀತೆ, ನಮ್ಮೊಳಗಿನ ನಾಡಪ್ರೇಮವನ್ನು ಎಚ್ಚರಿಸುತ್ತದೆ. ಆಕಾಶವಾಣಿಯ ಮೂಲಕ ದಶಕಗಳ ಕಾಲ ಈ ಗೀತೆ ಕನ್ನಡಿಗರ ಮನೆಮನಗಳಲ್ಲಿ ಪುಳಕ ತಂದಿದೆ.

    ಮದರಾಸಿನಲ್ಲಿ ನೆಲೆಸಿದ್ದ ಕನ್ನಡ ಚಲನಚಿತ್ರ ಕಲಾವಿದರೆಲ್ಲಾ ಸೇರಿ ಮದರಾಸ್ ಕನ್ನಡ ಸಂಘವನ್ನು ಸ್ಥಾಪಿಸಿ ಆ ಮೂಲಕ ಕನ್ನಡದ ಚಟುವಟಿಕೆಗಳನ್ನು ಮದರಾಸಿನ ಆಕಾಶವಾಣಿ ಕೇಂದ್ರ ಮೂಲಕ ಬಿತ್ತರಿಸುತ್ತಿದ್ದರು. ಆಗ ರಚನೆಯಾದ ಈ ಹಾಡಿಗೆ ಧ್ವನಿಸಂಯೋಜಿಸಿದವರು ಮದರಾಸ್ ಆರ್ಕೆಸ್ಟ್ರಾ ತಂಡದವರು ಎಂಬುದು ವಿಶೇಷ.

    ಈ ಮಣ್ಣು ನಮ್ಮದು
    ಈ ಗಾಳಿ ನಮ್ಮದು
    ಕಲಕಲನೆ ಹರಿಯುತಿಹ ನೀರು ನಮ್ಮದು
    ಕಣಕಣದಲು ಭಾರತೀಯ ರಕ್ತ ನಮ್ಮದು

    ನಮ್ಮ ಕಾಯ್ವ ಹಿಮಾಲಯವು ತಂದೆ ಸಮಾನ
    ಗಂಗೆ ತುಂಗೆ ಕಾವೇರಿಯು ತಾಯಿ ಸಮಾನ
    ಈ ದೇಶದ ಜನರೆಲ್ಲರೂ ಸೋದರ ಸಮಾನ,
    ಈ ನಾಡಿನ ಹೃದಯವದು ದೈವ ಸನ್ನಿಧಾನ

    ಅಜಂತ ಎಲ್ಲೋರ ಹಳೆಬೀಡು ಬೇಲೂರು
    ಶಿಲೆಗಳಿವು ಕಲೆಯ ಆಗರ
    ಹಿಂದು, ಬುದ್ಧ, ಜೈನ, ಕ್ರೈಸ್ತ, ಮುಸಲ್ಮಾನ
    ಧರ್ಮಗಳ ಮಹಾಸಾಗರ

    ನಡೆದು ಹೋದ ಚರಿತೆಯು ನಾಳೆ ಎನುವ ಕವಿತೆಯು
    ಈ ನಾಡ ಮಣ್ಣಲಿದೆ ಜೀವನ ಸಾರ/ ಜೀವನ ಸಾರ
    ಹ್ಞೂ..ಹ್ಞೂ...ಹ್ಞೂ...ಹ್ಞೂ...

    ತಂಗಾಳಿಗೆ ತಲೆದೂಗುವ ಪೈರಿನ ಹಾಡು
    ಆ ಹಾಡಿಗೆ ತಾಳ ಕೊಡುವ ಯಂತ್ರದ ಜಾಡು
    ವಿಜ್ಞಾನವು ಅಜ್ಞಾನವ ಗೆಲ್ಲುವ ಹಾಡು
    ಹೊಸ ಭಾರತ ನಿರ್ಮಾಣವು ಸಾಗಿದೆ ನೋಡು
    (* ಸಂಗ್ರಹ: ಡಾ.ಪಂಚಾಕ್ಷರಯ್ಯ, ಹಿರೇಮಠ್, ಸಂಗೀತ ಶಿಕ್ಷಕರು)

    English summary
    "Ee Mannu Nammdu...Ee Gaali Nammadu..." lyrics by R N Jayagopal, in the Kannada film industry who wrote over 12000 film songs. The song became popular and is considers as state anthem.
    Wednesday, December 14, 2011, 12:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X