»   » ಒಲವೆ ಜೀವನ ಸಾಕ್ಷಾತ್ಕಾರ, ಮರೆಯದ ಮಮಕಾರ

ಒಲವೆ ಜೀವನ ಸಾಕ್ಷಾತ್ಕಾರ, ಮರೆಯದ ಮಮಕಾರ

Subscribe to Filmibeat Kannada

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಪ್ಪು-ಬಿಳುಪು ಚಿತ್ರ 'ಸಾಕ್ಷಾತ್ಕಾರ' ಬಿಡುಗಡೆಯಾಗಿದ್ದು 1971ರಲ್ಲಿ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಸುಂದರ ಪರಿಸರದಲ್ಲಿ 'ಒಲವೆ ಜೀವನ ಸಾಕ್ಷಾತ್ಕಾರ...' ಹಾಡನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿತ್ತು. ಹೃದಯಕ್ಕೆ ಮಧುರವಾದ ಈ ಹಾಡು ಇನ್ನೂ ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ ಎಂದರೆ ರಾಜ್‌ಕುಮಾರ್ ಹಾಗೂ ಜಮುನಾರ ನಟನೆ, ಎಂ.ರಂಗರಾವ್ ಸಂಗೀತ, ಪಿ.ಸುಶೀಲ ಅವರ ಹಿನ್ನಲೆ ಗಾಯನ, ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ಸಾಹಿತ್ಯ ... ಕಾರಣ. ಬಾಕ್ಸಾಫೀಸಿನಲ್ಲಿ ಸೋತ ಜನಮನದಲ್ಲಿ ಗೆದ್ದ ಚಿತ್ರ. ಮತ್ತೊಮ್ಮೆ ದಟ್ಸ್‌ಕನ್ನಡದಲ್ಲಿ!


ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲು
ದುಂಬಿಯ ಹಾಡಿನ ಝೇಂಕಾರದಲ್ಲು
ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತುಂಬಿದೆ ಒಲವಿನ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ವಸಂತ ಕೋಗಿಲೆ ಪಂಚ ಮನೋಹರ
ಗಾಂಧಾರ ಭಾಷೆಯ ಹಕ್ಕಿಗಳಿಂಚರ
ಈ ಮಲೆನಾಡಿನ ಭೂರಮ್ಯ ಶೃಂಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೆ ಹೃದಯಕೆ ಮಧುರ
ಒಲವೆ ದೈವದ ಸಾಕ್ಷಾತ್ಕಾರ

ಒಲವೆ ಜೀವನ ಸಾಕ್ಷಾತ್ಕಾರ
ಒಲವೆ ಮರೆಯದ ಮಮಕಾರ
ಒಲವೆ ಮರೆಯದ ಮಮಕಾರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada