twitter
    For Quick Alerts
    ALLOW NOTIFICATIONS  
    For Daily Alerts

    ಬ್ರಿಟ್ನಿ ಜೊತೆ ಸೋನು ನಿಗಮ್ ಟ್ವಿಟ್ಟರ್ ಹಕ್ಕಿ ಗಾಯನ

    By Mahesh
    |

    Sonu joins hand with Britney
    ಐಶ್ವರ್ಯಾ ಗರ್ಭವತಿ, ಬಿಪಾಶಾ ಜಾನ್ ಬೇಪಟ್ಟಿದ್ದು, ಬಾಲಿವುಡ್ ಚಿತ್ರ ಬಿಡುಗಡೆ, ಆಗೊಮ್ಮೆ ಹೀಗೊಮ್ಮೆ ಸಂದೇಶಾಸ್ತ್ರ ರವಾನೆ ಹೀಗೆ ಸಕಲ ಆಗು ಹೋಗುಗಳನ್ನು ಹೊತ್ತ ಟ್ವಿಟ್ಟರ್ ಹಕ್ಕಿ ಎಲ್ಲ ಬಗೆಯ ಸಂದೇಶಗಳನ್ನು ಅರಗಿಸಿಕೊಳ್ಳುತ್ತದೆ. ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಈಗ ಬಾಲಿವುಡ್ ನ ಗಾಯಕ ಸೋನು ನಿಗಮ್ ಜೊತೆ ಹಾಡಲಿದ್ದಾರೆ. ಈ ಸುದ್ದಿ ಪ್ರಕಟವಾಗಿದ್ದು ಕೂಡಾ ಟ್ವಿಟ್ಟರ್ ನಲ್ಲೇ...

    ಬ್ರಿಟ್ನಿಯ "ಐ ವಾನ್ನಾ ಗೋ" ಎಂಬ ಆಲ್ಬಮ್ ನ ರೀಮಿಕ್ಸ್ ವರ್ಷನ್ ನಲ್ಲಿ ಸೋನು ಹಾಡುತ್ತಿದ್ದಾರೆ. ಈ ಬಗ್ಗೆ ಬ್ರಿಟ್ನಿ ಹೀಗೆ ಟ್ವೀಟ್ ಮಾಡಿದ್ದಾಳೆ. "Watch out Bollywood, it's Britney and Sonu! :)"

    ಇದಕ್ಕೆ ಉತ್ತರಿಸಿರುವ ಸೋನು, “India loves you Britney @britneyspears. Welcome to Bollywood! Am loving the fact that it's OUR Collaboration that marks your first step here. God bless you and more power to Great Music!!! :)" ಎಂದಿದ್ದಾನೆ.

    ಭಾರತೀಯ ಸಂಗೀತದ ರಿಮೀಕ್ಸ್ ವರ್ಷನ್ ಹೊರತಂದಿದ್ದರು. ಗಾಗಾಳ ಬಾರ್ನ್ ದಿಸ್ ವೇ ಅಲ್ಬಮ್ ಯಶಸ್ಸು ಕಂಡಿತ್ತು. ಈಗ ಬ್ರಿಟ್ನಿ ಹಾಗೂ ಸೋನು ಜೋಡಿ ಕ್ಲಿಕ್ ಆದರೆ, ಬ್ರಿಟ್ನಿ ಬಾಲಿವುಡ್ ಗೆ ಎಂಟ್ರಿ ಕೊಡ್ತಾಳೆ ಅಥವಾ ಸೋನು ಇಂಟರ್ ನ್ಯಾಷನಲ್ ಲೆವೆಲ್ ಗೆ ಹೋಗ್ತಾನೆ ಯಾವುದಕ್ಕೂ ಕಾದು ನೋಡೋಣ ಎಂದು ಬಾಲಿವುಡ್ ಮಂದಿ ಸುಮ್ಮನಿದ್ದಾರೆ.

    English summary
    American pop singer Britney Spears seems to be impressed with Bollywood as she joined her hands with eminent singer Sonu Nigam for a song. The report was confirmed by Britney on Twitter.
    Thursday, July 14, 2011, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X