ಧ್ವನಿಸುರುಳಿ ವಿಮರ್ಶೆ - ಕೋ.ಕೋ. (ಕೋಳಿ..ಕೋತಿ)

By *ಬಾಲರಾಜ್ ತಂತ್ರಿ
<ul id="pagination-digg"><li class="next"><a href="/music/15-koko-kannada-music-review-aid0189.html">Next »</a></li></ul>

Kannada Movie Ko.Ko
ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಪ್ರಮುಖ ಭೂಮಿಕೆಯಲ್ಲಿರುವ ಕೋ.ಕೋ. ಚಿತ್ರದ ಮೂಲಕ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಮಣಗೋಗುಲ ಮತ್ತೆ ಕನ್ನಡಕ್ಕೆ ಎಂಟ್ರಿ ನೀಡಿದ್ದಾರೆ. ಈ ಹಿಂದೆ ಅವರು ಶಿವರಾಜ್ ಕುಮಾರ್ ಅಭಿನಯದ ಯುವರಾಜ ಚಿತ್ರಕ್ಕೆ ಸಂಗೀತ ನೀಡಿದ್ದರು.

ಭರಣಿ ಮಿನರಲ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಆಲ್ಬಮ್ ಆನಂದ್ ಆಡಿಯೋ ಮೂಲಕ ಬಿಡುಗಡೆ ಗೊಂಡಿದೆ.

1. ಆಕಸ್ಮಿಕ ಗೆಳೆಯನು ಇವನು..
ಸಾಹಿತ್ಯ: ಕವಿರಾಜ್
ಹಾಡಿರುವವರು: ಕುನಾಲ್ ಗಾಂಜಾವಾಲಾ & ಶ್ರೇಯಾ ಘೋಷಾಲ್

ಉತ್ತಮ ಸಾಹಿತ್ಯವಿರುವ ಈ ಹಾಡು ಮೆಲೋಡಿಯಸ್ ಟ್ರ್ಯಾಕ್ ನಲ್ಲಿದೆ, ಕುನಾಲ್ ಅವರ ಕನ್ನಡ ಉಚ್ಚಾರಣೆ ಸ್ವಲ್ಪ ಸುಧಾರಿಸಬೇಕು. ಶ್ರೇಯಾ ಎಂದಿನಂತೆ ಸಲೀಸು ಮತ್ತು ಸೂಪರು. ಹಾಡು ಮತ್ತೆ ಮತ್ತೆ ಕೇಳುವಂತಿದೆ.

2. ಕಿಟ್ಟಿಭಾವ.. ಕಿಟ್ಟಿಭಾವ ಪಪ್ಪಿ ಕೊಡ್ತೀಯಾ..

ಸಾಹಿತ್ಯ: ಕವಿರಾಜ್
ಹಾಡಿರುವವರು: ಗುರುಕಿರಣ್ & ಚೈತ್ರಾ

ಪಬ್ಲಿಕ್ ನಲ್ಲಿ ಪಪ್ಪಿ ಕೇಳಿ ಪ್ರಾಣ ತಿಂತೀಯಾ..ಎನ್ನುವ ಪಪ್ಪಿ ಸಾಹಿತ್ಯವಿರುವ ಈ ಹಾಡಿನ ಟ್ಯೂನ್ ಈ ಹಿಂದೆ ಕನ್ನಡದಲ್ಲಿ ಕೇಳಿದ ಹಾಗಿದೆ. ಫಾಸ್ಟ್ ಟ್ರ್ಯಾಕ್ ನಲ್ಲಿ ಸಾಗುವ ಈ ಹಾಡು ಫುಟ್ ಟ್ರ್ಯಾಪಿಂಗ್ ಮತ್ತು ಚರಣದಲ್ಲಿ ಇಂಪಾದ ಟ್ಯೂನ್ ನಲ್ಲಿ ಸಾಗುತ್ತೆ.

3. ಮೆಲ್ಲನೆ ಕನಸೊಂದು ನೆನಪಿಗೆ ಬಂದಾಗ..

ಸಾಹಿತ್ಯ: ಕವಿರಾಜ್
ಹಾಡಿರುವವರು: ಕಾರ್ತಿಕ್ & ಸುನೀತಾ

ಒಲವಿನ ಹುಡುಗ, ಎದುರು ಬಾ ಬೇಗ...ಆಲ್ಬಮ್ ನಲ್ಲಿರುವ ಹಾಡುಗಳ ಪೈಕಿ ಅತ್ಯುತ್ತಮ ಸಾಹಿತ್ಯವಿರುವ ಹಾಡು. ಸ್ಲೋ ಪಿಚ್ ನಲ್ಲಿ ಸಾಗುವ ಈ ಹಾಡಿಗೆ ಸಂಗೀತ ನಿರ್ದೇಶಕರು ಅತ್ಯುತ್ತಮ ಟ್ಯೂನ್ ನೀಡಿದ್ದಾರೆ. ಹಾಡಿನಲ್ಲಿ ಕಾರ್ತಿಕ್ ಮತ್ತು ಸುನೀತಾ ಅವರ ಸ್ವರ ಬದಲಾವಣೆ ಚೆನ್ನಾಗಿದೆ.

ಆಲ್ಬಮ್ ನ ಉಳಿದ ಹಾಡುಗಳ ಬಗ್ಗೆ..next ಕ್ಲಿಕ್ಕಿಸಿ...

<ul id="pagination-digg"><li class="next"><a href="/music/15-koko-kannada-music-review-aid0189.html">Next »</a></li></ul>

More from Filmibeat

English summary
Kannada movie Ko.Ko has 6 songs. After Shivaraj Kumar's Yuvaraja, music director Ramana Gogula back to Sandalwood with this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X