ಹಳ್ಳಿಮೇಷ್ಟ್ರು ಚಿತ್ರದ ಜನಪ್ರಿಯ ಗೀತೆ
ರವಿಚಂದ್ರನ್ ಚಿತ್ರಗಳ ಪ್ಲಸ್ ಪಾಯಿಂಟ್ ಎಂದರೆ, ವೈಭವ ಹಾಗೂ ಸುಮಧುರ ಗೀತೆಗಳು. ರವಿ ಚಿತ್ರದ ಹಲವು ಗೀತೆಗಳು ಸೂಪರ್ ಹಿಟ್ ಆಗಿವೆ.ಅವುಗಳಲ್ಲಿ 1992ರಲ್ಲಿ ತೆರೆಕಂಡ ಹಳ್ಳಿ ಮೇಸ್ಟ್ರು ಚಿತ್ರವೂ ಒಂದು. ಹಂಸಲೇಖ ಸಂಗೀತ ನೀಡಿರುವ ಈ ಗೀತೆಯನ್ನು ಎಸ್ಪಿಬಿ ಮತ್ತು ಎಸ್ ಜಾನಕಿ ಸುಮಧುರವಾಗಿ ಹಾಡಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದಾರೆ.
ಎಸ್.ಜಾನಕಿ: ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ ಸ್ಲೇಟು ಬಳಪ ತನ್ನಿ
ಅ ಆ
ಎಸ್.ಜಾನಕಿ: ಅ ಆ
ಎಸ್.ಪಿ.ಬಿ: ಇ ಈ
ಎಸ್.ಜಾನಕಿ: ಇ ಈ
ಎಸ್.ಪಿ.ಬಿ: ಉ ಊ
ಎಸ್.ಜಾನಕಿ: ಉ ಊ
ಎಸ್.ಪಿ.ಬಿ: ಋ ೠ
ಎಸ್.ಜಾನಕಿ: ಋ ೠ
ಎಸ್.ಪಿ.ಬಿ: ಎ ಏ ಐ
ಎಸ್.ಜಾನಕಿ: ಒ ಓ ಔ
ಎಸ್.ಪಿ.ಬಿ: ಅಮ್..ಮ್
ಎಸ್.ಜಾನಕಿ: ಅಹ್ಹಾ
ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ ಸ್ಲೇಟು ಬಳಪ ತನ್ನಿ
ಮೊದಲು ತಿದ್ದಬೇಕು ಅಕ್ಷರ ತಲೆಗೆ ಹೋಗಬೇಕು
ವಿಷಯ ಕೇಳಬೇಕು ಎಲ್ಲವ ಅರೆದು ಕುಡಿಯಬೇಕು
ಎಸ್.ಜಾನಕಿ: ಅರೆದು ಕುಡಿಯಲೇನು ಈಗಲೆ ನಿಮ್ಮ ರೂಪವನ್ನೂ
ಮಾತು ಸಾಲದೀಗ ತಿಳಿಸಲು ನನ್ನ ಆಸೆಯನ್ನೂ
ಎಸ್.ಪಿ.ಬಿ: ಸಮಯ ಇರುವಾಗ ಚಿಂತೆ ಯಾಕೀಗ
ಎಸ್.ಜಾನಕಿ: ದಾನ ಸಿಗುವಾಗ ಎಲ್ಲಾ ಬೇಕೀಗ
ಎಸ್.ಪಿ.ಬಿ: ಅ ಗೆ
ಎಸ್.ಜಾನಕಿ: ಅಮ್ಮಾ
ಎಸ್.ಪಿ.ಬಿ: ಆ ಗೆ
ಎಸ್.ಜಾನಕಿ: ಆಸೇ
ಎಸ್.ಪಿ.ಬಿ: ಇ ಗೆ
ಎಸ್.ಜಾನಕಿ: ಇಡ್ಲಿ
ಎಸ್.ಪಿ.ಬಿ: ಈ ಗೆ
ಎಸ್.ಜಾನಕಿ: ಈಟಿ
ಎಸ್.ಪಿ.ಬಿ: ಏ ಏ ಐ
ಎಸ್.ಜಾನಕಿ: ಒ ಓ ಔ
ಎಸ್.ಪಿ.ಬಿ: ಅಮ್..ಮ್
ಎಸ್.ಜಾನಕಿ: ಅಹ್ಹಾ
ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಎಸ್.ಜಾನಕಿ: ಆ
ಎಸ್.ಪಿ.ಬಿ: ಸ್ಲೇಟು ಬಳಪ ತನ್ನಿ
ಎಸ್.ಪಿ.ಬಿ: ತುಂಬ ಕಲಿತುಕೊಂಡ್ರಿ ಇಂದಿನ ಮೊದಲ ಪಾಠದಲ್ಲೆ
ತುಂಬ ತಿಳಿದುಕೊಂಡ್ರಿ ಗುರುವಿಗೂ ಮಿಂಚಿ ಹೋದಿರಿಲ್ಲೀ
ಎಸ್.ಜಾನಕಿ: ಏಯ್ ಪಾಠ ಸಾಕು ಇನ್ನು ಬೆಚ್ಚನೆ ಆಟ ಸ್ವಲ್ಪ ಕಲಿಸೀ
ಪ್ರೇಮದಾಟದಲ್ಲಿ ಮೊದಲನೆ ಹೆಜ್ಜೆ ಹೇಗೆ ತಿಳಿಸೀ
ಎಸ್.ಪಿ.ಬಿ: ಕಲಿತು ಜಯಗಳಿಸಿ ನನ್ನ ಹೆಸರುಳಿಸಿ
ಎಸ್.ಜಾನಕಿ: ಗುರುವೆ ದಯವಿರಿಸಿ ನನ್ನ ಬೆವರೊರಿಸಿ
ಎಸ್.ಪಿ.ಬಿ: ಅ ಆ
ಎಸ್.ಜಾನಕಿ: ಅ ಅಹ್ಹಾ
ಎಸ್.ಪಿ.ಬಿ: ಇ ಈ
ಎಸ್.ಜಾನಕಿ: ಇ ಈ
ಎಸ್.ಪಿ.ಬಿ: ಉ ಊ
ಎಸ್.ಜಾನಕಿ: ಉಹು ಹೂಂ
ಎಸ್.ಪಿ.ಬಿ: ಋ ೠ
ಎಸ್.ಜಾನಕಿ: ಋ ೠ
ಎಸ್.ಪಿ.ಬಿ: ಏ ಏ ಐ
ಎಸ್.ಜಾನಕಿ: ಅಹ್ ಅಹ ಅ
ಎಸ್.ಪಿ.ಬಿ: ಅಮ್..ಮ್
ಎಸ್.ಜಾನಕಿ: ಅಹ್ಹಾ..ಆ
ಎಸ್.ಜಾನಕಿ: ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್
ಎಸ್.ಜಾನಕಿ: ಹ
ಎಸ್.ಪಿ.ಬಿ: ಸ್ಲೇಟು ಬಳಪ ತನ್ನಿ
ಎಸ್.ಜಾನಕಿ: ಏಯ್


Click it and Unblock the Notifications











