»   » ಹಾಡು ಹಳೆಯದಾದರೇನು ಭಾವ ನವ ನವೀನ!

ಹಾಡು ಹಳೆಯದಾದರೇನು ಭಾವ ನವ ನವೀನ!

Subscribe to Filmibeat Kannada

ಕನ್ನಡ ಚಿತ್ರರಂಗದ ಬೇರುಗಳು ಬಲಿಷ್ಠವಾಗಿವೆ. ಹಾಗಾಗಿಯೇ ಹೊಸ ಕನಸುಗಳನ್ನು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಮಾಪಕ, ನಿರ್ದೇಶಕರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಕನ್ನಡ ಚಿತ್ರೋದ್ಯಮ ವೇದಿಕೆ ಒದಗಿಸುತ್ತದೆ. ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಅತ್ಯಂತ ಚಟುವಟಿಕೆಯಿಂದ ಇರಲು ಇದೂ ಒಂದು ಕಾರಣ. 'ಬಾ ಬೇಗ ಚಂದ ಮಾಮ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾಡುತ್ತಾ ಹೀಗೆಂದರು ಹಂಸಲೇಖಾ. ಬಿ.ಆರ್.ಪಂತುಲು ಅವರ 'ರತ್ನಗಿರಿಯ ರಹಸ್ಯ' ಚಿತ್ರದ ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ... ಹಾಡಿನ ಚರಣ ಈ ಚಿತ್ರಕ್ಕೆ ಸ್ಪೂರ್ತಿಎಂದರು.

ಹೆಚ್ಚೂ ಕಡಿಮೆ ಇದೇ ರೀತಿಯ ಅಭಿಪ್ರಾಯ ಡಾ.ವಿಷ್ಣುವರ್ಧನ್‌ರ ಮನದಾಳದಿಂದಲೂ ಹೊರಹೊಮ್ಮಿದವು.ಶತಕ ಬಾರಿಸುವುದಕ್ಕಿಂತ ಪಂದ್ಯದ ಗೆಲ್ಲುವುದು ಮುಖ್ಯ.ನಿಮ್ಮ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಬಿ.ಎಚ್.ಮುರಳಿ ಈ ಹಿಂದೆ ಡಬ್ಬಿಂಗ್ ಕಲಾವಿದಹಾಗೂ ಹಾಡುಗಾರರಾಗಿದ್ದವರು. ಈಗ ತಮ್ಮ ಪ್ರಥಮ ಪ್ರಯತ್ನದಲ್ಲಿ ಬಾ ಬೇಗ ಚಂದ ಮಾಮದ ನಿರ್ದೇಶನ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.ಅವರ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ವಿಷ್ಣು ಬಾ ಬೇಗ ಚಂದ ಮಾಮ ಚಿತ್ರತಂಡಕ್ಕೆ ಹಾರೈಸಿದರು.

ಬೆಂಗಳೂರಿನ ರಿಜಾಯ್ಸ್ ಆಡಿಟೋರಿಯಂನಲ್ಲಿ 'ಬಾ ಬೇ ಚಂ ಮಾ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ನಟಿ ಸುಧಾರಾಣಿ, ನಿರ್ದೇಶಕ ಬಿ.ಎಚ್.ಮುರಳಿ, ಪೂಜಾ ಗಾಂಧಿ, ರಾಜಕಾರಣಿಗಳಾದ ಸಲೀಂ ಅಹ್ಮದ್ ಮತ್ತು ಆರ್.ವಿ.ಹರೀಶ್, ಹರ್ಷಪ್ಪ ರೆಡ್ಡಿ, ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ಬಾ ಬೇಗ ಚಂದ ಮಾಮದ ನಾಯಕ ದೀಪಕ್, ನಿರ್ಮಾಪಕ ಕುಮಾರಸ್ವಾಮಿ ಇನ್ನಿತರರು ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

'ಅಮರ ಮಧುರ ಪ್ರೇಮ' ಹೆಸರಿನ ಚಿತ್ರ 1982ರಲ್ಲಿ ತೆರೆಕಂಡಿತ್ತು. ಸುರೇಶ್ ಹೆಬ್ಳೀಕರ್ ಹಾಗೂ ಶೋಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಪಿ.ಆರ್.ರಾಮದಾಸ್ ನಾಯ್ಡು ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ರತ್ನಗಿರಿ ರಹಸ್ಯ ಚಿತ್ರದ ಅಮರ ಮಧುರ ಗೀತೆ ಇಷ್ಟಿಲ್ಲಾ ಸಿನೆಮಾ ಶೀರ್ಷಿಕೆಗಳಿಗೆ ಸ್ಫೂರ್ತಿಯಾಗುತ್ತಿರಬೇಕಾದರೆ, ನಮ್ಮ ಇಂದಿನ ನಿರ್ದೇಶಕ, ನಿರ್ಮಾಪಕರು ಅರ್ಥವಿಲ್ಲದ ಶೀರ್ಷಿಕೆಗಳನ್ನು ಯಾಕಾದರೂ ಇಡುತ್ತಿದ್ದಾರೋ ಅರ್ಥವಾಗುತ್ತಿಲ್ಲ!

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada