ಈ ಸುಮಧುರ ಗೀತೆ ಈಗ ವಿವಾದದ ಕೇಂದ್ರ ಬಿಂದು
ಕನ್ನಡದಲ್ಲಿ ಬರುತ್ತಿರುವ ರೀಮಿಕ್ಸ್ ಹಾಡುಗಳು ಮೂಲ ಹಾಡಿನ ಸೊಗಡು, ಸ್ವಾರಸ್ಯವನ್ನು ಕೆದಡುತ್ತಿವೆ ಎಂಬ ಅಪವಾದಗಳು ಕೇಳಿಬಂದಿವೆ. ರೀಮಿಕ್ಸ್ ಹಾಡುಗಳು ಬೇಕೆ? ಬೇಡವೆ? ಎಂಬ ಪ್ರಶ್ನೆಗಳು ಕನ್ನಡ ಚಿತ್ರೋದ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ. 1968ರಲ್ಲಿ ತೆರೆಕಂಡ 'ಬೇಡಿ ಬಂದವಳು' ಚಿತ್ರದ ಈ ಹಾಡನ್ನು 'ಗುಬ್ಬಿ' ಚಿತ್ರದಲ್ಲಿ ರೀಮಿಕ್ಸ್ ಮಾಡಲಾಗಿದೆ.
ಈ ಸುಮಧರ ಗೀತೆಯನ್ನು ದಿವಂಗತ ಆರ್ ಎನ್ ಜಯಗೋಪಾಲ್ ರಚಿಸಿದ್ದರು. ಈ ಹಾಡು ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲಾ ಅವರ ಸುಮಧುರ ಕಂಠದಿಂದ ಹೊರಹೊಮ್ಮಿತ್ತು. ವಿವಾದ ಕೇಂದ್ರ ಬಿಂದುವಾಗಿರುವ ಹಾಡಿನ ಮೂಲ ರೂಪ ಇಲ್ಲಿದೆ. ಓದಿ, ಹಾಡಿ ಆನಂದಿಸುವಂತವರಾಗಿ.
ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ಅಂದುಗೆಯು ಕಾಲಿನುಂಗುರ
ಅದರ ದನಿ ಎಷ್ಟು ಸುಂದರ
ತರುವು ಲತೆಯು ಸೇರಿದ ಕಥೆಯು
ತರುವು ಲತೆಯು ಸೇರಿದ ಕಥೆಯು
ತನುವ ಬಳಿಸಿ ತೋಳಿನುಂಗುರ
ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ಮಣ್ಣಿನಲ್ಲಿ ಕಂಡ ಉಂಗುರ
ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ
ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆವ ಕುರುಳು ಗುಂಗುರ
ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ಆಗೆ ನಿನ್ನ ಕೈಯ ಸಂಚರ
ಎನ್ನ ಹೃದಯ ಒಂದು ಡಂಗುರ
ನಾನು ನುಡಿಯೆ ಕಿವಿಯಲಿಂಚರ
ನಾನು ನುಡಿಯೆ ಕಿವಿಯಲಿಂಚರ
ಹಣೆಯ ಮೇಲೆ ಬೆವರಿನುಂಗುರ
ನೀರಿನಲ್ಲಿ ಅಲೆಯ ಉಂಗುರ
ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ


Click it and Unblock the Notifications











