For Quick Alerts
  ALLOW NOTIFICATIONS  
  For Daily Alerts

  ಕೆ ಜೆ ಯೇಸುದಾಸ್‌ಗೆ ಚೊಚ್ಚಲ ಹರಿವರಸನಂ ಪ್ರಶಸ್ತಿ

  By Rajendra
  |

  ಶ್ರೀಮಂತ ಕಂಠದ ಗಾಯಕ ಕೆ ಜೆ ಯೇಸುದಾಸ್ ಅವರನ್ನು ತಿರುವಾಂಕೂರು ದೇವಸ್ಥಾನ ಮಂಡಳಿ (ಟಿಡಿಬಿ) ಹರಿವರಸನಂ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಟಿಡಿಬಿ ನೀಡುತ್ತಿರುವ ಚೊಚ್ಚಲ ಪ್ರಶಸ್ತಿ ಇದಾಗಿದೆ. ಶರಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಸೇರಿದಂತೆ ದಕ್ಷಿಣ ಕೇರಳದ ಪ್ರಮುಖ ದೇವಸ್ಥಾನಗಳ ನಿರ್ವಹಣೆಯ ಜವಾಬ್ದಾರಿಯನ್ನು ಟಿಡಿಬಿ ಹೊತ್ತಿದೆ.

  ಯೇಸುದಾಸ್ ಅವರ ಸಮರ್ಪಣಾ ಭಾವ, ಸಂಗೀತ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನದಲ್ಲಿಟ್ಟುಕೊಂಡಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎಂದು ಟಿಡಿಬಿ ತಿಳಿಸಿದೆ. ಪ್ರಶಸ್ತಿಯು ರು.50,000 ನಗದು ಬಹುಮಾನ ಸೇರಿದಂತೆ ಪ್ರಶಸ್ತಿ ಫಲಕ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಏಪ್ರಿಲ್ ಮಾಹೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

  ಸ್ವತಃ ಅಯ್ಯಪ್ಪಸ್ವಾಮಿಯ ಪರಮ ಭಕ್ತರಾದ ಯೇಸುದಾಸ್ ಹಲವಾರು ಭಕ್ತಿ ಪ್ರಧಾನ ಗೀತೆಗಳನ್ನು ಹಾಡಿದ್ದಾರೆ. ಅವುಗಳಲ್ಲಿ ಎತ್ತರದ ಧ್ವನಿಯಲ್ಲಿ ಸುಶ್ರಾವ್ಯವಾಗಿ ಹಾಡಿರುವ 'ಹರಿವರಾಸನಂ' ಹಾಡಂತೂ ಜನಪ್ರಿಯತೆಯ ತುತ್ತತುದಿಯಲ್ಲಿದೆ.ಕನ್ನಡ ಸೇರಿದಂತೆ ಮಲೆಯಾಳಂ, ತಮಿಳು,ತೆಲುಗು ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಸಾವಿರಾರು ಹಾಡುಗಳನ್ನು ಯೇಸುದಾಸ್ ಹಾಡಿದ್ದಾರೆ.

  ಮನೆಯೇ ಮಂತ್ರಾಲಯ ಮನಸೇ ದೇವಾಲಯ (ಮನೆಯೇ ಮಂತ್ರಾಲಯ), ಟು ಟು ಟು ಬೇಡಪ್ಪ, ಓಡಿ ಬಂದು ನನ್ನ ಸಂಗ ಕಟ್ಟಪ್ಪ (ಪ್ರೇಮಮಯಿ), ಪ್ರೇಮ ಲೊಕದಿಂದ ಬಂದ ಪ್ರೇಮದ ಸಂದೇಶ (ಪ್ರೇಮಲೋಕ), ಯಾರೇ ನೀನು ಚೆಲುವೆ, ನಿನ್ನಷ್ಟಕ್ಕೆ ನೀನೆ ಏಕೆ ನಗುವೆ (ನಾನು ನನ್ನ ಹೆಂಡ್ತಿ), ಶಾರದೆ, ದಯೆ ತೋರಿದೆ (ಮಲಯಮಾರುತ)...ಹೀಗೆ ಯೇಸುದಾಸ್ ಹಾಡಿದ ಅದೆಷ್ಟೋ ಹಾಡುಗಳನ್ನು ಉದಹರಿಸಬಹುದು. (ಒನ್‍ಇಂಡಿಯಾ ಕನ್ನಡ)

  English summary
  KJ Yesudas has been chosen for the first Harivarasanam award of the Travancore Devaswom Board (TDB). The TDB is the statutory body that manages major temples in South Kerala, including the famed Sabarimala hill temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X