twitter
    For Quick Alerts
    ALLOW NOTIFICATIONS  
    For Daily Alerts

    ಯೋಗರಾಜ್ ಭಟ್ ಪಂಚರಂಗಿ ಧ್ವನಿಸುರುಳಿ ವಿಮರ್ಶೆ

    By Rajendra
    |

    ಯೋಗರಾಜಭಟ್ ನಿರ್ದೇಶನ ಮತ್ತು ನಿರ್ಮಾಣದ ಈ ಚಿತ್ರದ ಒಂದು ಹಾಡನ್ನು ಕ್ಯಾಸೆಟ್ ಬಿಡುಗಡೆಗೆ ಮುಂಚೆನೇ ಟಿವಿವಾಹಿನಿ ಮತ್ತು ಎಫ್ ಎಮ್ ರೇಡಿಯೊಗಳಿಗೆ ನೀಡಿ ಹೊಸಬಗೆಯ ಪ್ರೊಮೋಷನ್ ಗೆ ಭಟ್ರು ನಾಂದಿ ಹಾಡಿದ್ದಾರೆ. ಇತ್ತೀಚಿಗೆ ಬಂದ ಭಟ್ರ ಮೂರು ಹಿಟ್ ಚಿತ್ರಗಳಲ್ಲಿ ಹಾಡುಗಳ ಪಾತ್ರ ಬಹು ಮುಖ್ಯ. ಸುಶ್ರಾವ್ಯ ಟ್ಯೂನ್, ಉತ್ತಮ ಸಂಗೀತ ಮತ್ತು ಇವತ್ತಿನ ಟ್ರೆಂಡ್ ಗೆ ತಕ್ಕಂತೆ ಸಾಹಿತ್ಯಕ್ಕೆ ಒತ್ತು ನೀಡುವ ಭಟ್, ಚಿತ್ರವನ್ನು ಅರ್ಧ ಹಾಡಿನಲ್ಲೇ ಹಿಟ್ ಮಾಡಿಸುತ್ತಿದ್ದಾರೆಂದರೆ ತಪ್ಪಾಗಲಾರದು.

    * ಬಾಲರಾಜ್ ತಂತ್ರಿ ಕೆ

    1. ಲೈಫ್ ಇಷ್ಟೇನೆ: ಇವತ್ತಿನ ಲೈಫ್ ಸ್ಟೈಲ್ ಬಗ್ಗೆ, ಕಾಲೇಜು ಹುಡುಗ್ರು, ಮೊಬೈಲ್ ಗೀಳು, ಭವಿಷ್ಯದ ಬಗ್ಗೆ ಸಾಹಿತ್ಯವಿರುವ ಹಾಡು. ಹಿಂದಿನ ಜನ್ಮದ ರಹಸ್ಯ ತಿಳ್ಕೋ... ಮುಂದಿನ ಜನ್ಮದ ಭವಿಷ್ಯ ತಿಳ್ಕೋ...ಈಗಿನ ಜನ್ಮ ಹಾಳಾಗೊಗ್ಲಿ ಲೈಫು ಇಷ್ಟೇನೆ.. ಮುಂತಾದ ಸಾಲುಗಳಿರುವ ಈ ಸಖತ್ ಹಾಡಿಗೆ ಭಟ್ರ ಸಾಹಿತ್ಯವಿದೆ. ಈ ಹಾಡುನ್ನು ಟಿವಿವಾಹಿನಿ ಮತ್ತು ಎಫ್ ಎಮ್ ರೇಡಿಯೊಗಳಲ್ಲಿ ನೀವು ಆಲಿಸಿ/ನೋಡಿರಬಹುದು. ನಮ್ಮ ಹಾಡನ್ನು ಕೇಳಲೇ.. ಬೇಡಿ ಎಂದು ಸಾಹಿತ್ಯವಿದ್ದರೂ ಹಾಡು ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.

    2. ಉಡಿಸುವೆ ಬೆಳಕಿನ ಸೀರೆಯ: ಜಯಂತ್ ಕಾಯ್ಕಿಣಿ ಉಪಮೇಯ, ಉಪಮಾನ ಮತ್ತು ಸಾಧಾರಣ ಧರ್ಮದ ಮೂಲಕ ಕಟ್ಟಿರುವ ಈ ಅಲಂಕಾರಿಕ ಹಾಡನ್ನು ಸೋನು ನಿಗಂ ಹಾಡಿದ್ದಾರೆ. ಹಾಡಿನ ಟ್ಯೂನ್ ಇಂಪಾಗಿದೆ. ಆದರೆ ಇಷ್ಟೊಂದು ಕನ್ನಡದಲ್ಲಿ ಹಾಡಿದ್ದರೂ ಅದೇಕೋ ಸೋನು ಉಚ್ಚಾರ ಸ್ಪಷ್ಟವಾಗಿಲ್ಲ. ಸಾಹಿತ್ಯ ಗುಳುಂ ಮಾಡಿ ಹಾಡಿದಂತಿದೆ. ಕನ್ನಡದಲ್ಲಿ ಮತ್ತೆ ಮತ್ತೆ ಅವಕಾಶ ಬರುತ್ತಿದ್ದರೂ ಉಚ್ಚಾರ ಸ್ಪಷ್ಟನೆಗೆ ಸೋನು 'ಮನಸಾರೆ' ಪ್ರಯತ್ನಿಸ ಬಹುದಿತ್ತು.

    3. ಹುಡುಗರು ಬೇಕು: ಶ್ರೇಯಾ ಘೋಷಾಲ್ ಮತ್ತು ಚೇತನ್ ಸೋಸ್ಕಾ ಹಾಡಿರುವ ಈ ಹಾಡಿಗೆ ಭಟ್ಟರು ಹುಡುಗರನ್ನು ಚೇಡಿಸುವ, ಕಾಡಿಸುವ, ಪೀಡಿಸುವ, ವಿಚಾರಕ್ಕೆ ಹಚ್ಚುವ ಸಾಹಿತ್ಯವಿದೆ. ಸಂಗೀತ ನಿರ್ದೇಶಕರು ಈ ಹಾಡಿಗೆ ಬಳಸಿದ ಟ್ಯೂನ್ ಬಗ್ಗೆ ಹೆಚ್ಚಿನ ಉತ್ಪ್ರೇಕ್ಷೆ ಅಗತ್ಯವಿಲ್ಲ. ಹಾಡು ... ಅಷ್ಟಕಷ್ಟೇನೆ....

    4. ಅರೆರೆರೇ ಪಂಚರಂಗಿ: ಚೇತನ್ ಸೋಸ್ಕಾ, ಅನುರಾಧ ಭಟ್, ಬಂಟಿ, ಅಕ್ಷತಾ ರಾಮನಾಥ್, ಕೇಶವಪ್ರಸಾದ್ ಹಾಡಿರುವ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ನೀಡಿದ್ದಾರೆ. ಸಾಹಿತ್ಯ ಚೆನ್ನಾಗಿರುವ ಈ ಸಾಂಗ್ ಈಸ್ ಆವರೇಜ್.

    5. ನಿನ್ನಯ ನಲುಮೆಯ: ಮನೋಮೂರ್ತಿ ಸಂಗೀತ ನೀಡಿರುವ ಯಾವುದೇ ಚಿತ್ರವಿರಲಿ, ಅದರ ಎರಡು ಹಾಡುಗಳು ಜನರ ಬಾಯಲ್ಲಿ ಗುನುಗುವುದು ಗ್ಯಾರಂಟಿ. ಕಾಯ್ಕಿಣಿ ಸಾಹಿತ್ಯವಿರುವ ಈ ಹಾಡು ಶ್ರೇಯಾ ಘೋಷಾಲ್ ಕಂಠಸಿರಿಯಿಂದ ಹೊರಹೊಮ್ಮಿದೆ. ಉತ್ತಮ ಸಾಹಿತ್ಯ ನೀಡುವ ಮೂಲಕ ಕಾಯ್ಕಿಣಿ ತಮ್ಮ ಬತ್ತಳಿಕೆಯಿಂದ ಸಾಹಿತ್ಯದ "ಮುಂಗಾರುಮಳೆ" ಸುರಿಸಿದ್ದಾರೆ. ಮೂಲ ಹಿಂದಿ ಗಾಯಕಿಯಾಗಿದ್ದರೂ ಶ್ರೇಯಾ ಕನ್ನಡ ಉಚ್ಚಾರಣೆ ಮೆಚ್ಚುವಂತದ್ದು. ಹಾಡು ಚೆನ್ನಾಗಿದೆ.

    6. ಪಂಚರಂಗಿ ಹಾಡುಗಳು: ಹೇಮಂತ್, ಯೋಗರಾಜ್ ಭಟ್ ಹಾಡಿರುವ (ಅಥವಾ ಮಾತಾಡಿರುವ) ಈ ಹಾಡಿಗೆ ಭಟ್ರು ಸಾಹಿತ್ಯ ನೀಡಿದ್ದಾರೆ. ಕಾಲೇಜ್ ಹುಡುಗರು, ಹುಡುಗಿಯರು, ಪರೀಕ್ಷೆ, ಡೋನೇಷನ್ ಸುತ್ತ ಸಾಹಿತ್ಯವಿರುವ ಹಾಡು. ಈ ಹಾಡಿನಲ್ಲಿ ಭಟ್ರು ಮನೋಮೂರ್ತಿಗೆ ಟ್ಯೂನ್ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಕೆಲಸಕೊಟ್ಟಿಲ್ಲ.ಒಟ್ಟಿನಲ್ಲಿ ಮೂರು ಹಾಡುಗಳು ಇಂಪಾಗಿದ್ದು. ಈ ಮೇಲೆ ಹೇಳಿದಂತೆ ಮೊದಲ ಹಾಡು ಹಿಟ್ ಆಗುವುದರಲ್ಲಿ ಸಂಶಯ ಬೇಡ.

    Monday, August 16, 2010, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X