ಏನು ಮಾಡೋದು ಒಂಟಿ ಹೂವೊಂದು ರೋಡಲ್ಲಿ ಸಿಕ್ತು!
ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ತಮ್ಮ 'ಪರಮಾತ್ಮ' ಚಿತ್ರಕ್ಕಾಗಿ ಬರೆದ ಈ ಹಾಡು ಈಗ ಸೂಪರ್ ಹಿಟ್. ಕಾಲೇಜು ಹುಡುಗ ಹುಡುಗಿಯರಿಂದ ಹಿಡಿದು 'ಮದ್ಯ' ವಯಸ್ಕರತನಕ ಬಾತ್ ರೂಮಲ್ಲಿ ಗುನುಗುವಂತೆ ಮಾಡಿರುವ ಹಾಡಿದು. ಭಟ್ಟರ ಸಾಹಿತ್ಯದೊಂದಿಗೆ ಹಾಲು ಜೇನಿನಂತೆ ವಿ ಹರಿಕೃಷ್ಣ ಸಂಗೀತ ಬೆರೆತುಹೋಗಿದೆ. ಟಿಪ್ಪು ಅವರ ಕಂಠಸಿರಿಯಲ್ಲಿ ಹೊಮ್ಮಿದ ಹಾಡಿನ ಚರಣಗಳು ಇಲ್ಲಿವೆ.
ಏ ಬಿ ಸಿ ಡಿ ನಾ...ಆಲೂ ಗಡ್ಡೇನಾ...ಗೋಡೆ ಹಲ್ಲಿನಾ...ಯಾವಾನಿಗ್ ತೊತ್ತು?
ಏನು ಮಾಡೋದು.. ಒಂಟಿ ಹೂವೊಂದು ರೋಡಲ್ಲಿ ಸಿಕ್ತು
ಏನು ಹೇಳೋದು... ಇಂಥಾ ಟೈಮಲ್ಲಿ...ಯಾವನಿಗ್ ಗೊತ್ತು..ಯಾವನಿಗ್ ಗೊತ್ತು
ಎದೆಯೆಂಬ ಖಾಲಿ ಡಬ್ಬಕ್ಕೆ ಒಂದು ಸಣ್ಣ ಕಲ್ಲು ಬಿದ್ದಂಗಾಯ್ತು
ಡಬ್ಬ ಯಾತಕ್ಕೆ ಸೌಂಡು ಮಾಡುತ್ತೋ...ಯಾವನಿಗ್ ಗೊತ್ತು...ಯಾವನಿಗ್ ಗೊತ್ತು
ಇವಳು ಸಿಕ್ತಾಳಾ... ಕೈ ಕೊಡ್ತಾಳಾ... ಯಾವನಿಗ್ ಗೊತ್ತು... ಯಾವನಿಗ್ ಗೊತ್ತು
ಅದು ಯಾವ್ದೋ ಒಂಟಿ ಹಕ್ಕಿ ಸದ್ದನ್ನ
ಕೇಳುತ್ತ ಮಲಕ್ಕೊಂಡಿದ್ದೆ ಮಧ್ಯಾಹ್ನ
ಕಾಲ್ ಕೇಜಿ ಪ್ರೀತಿಗೊಂದು ಪದ್ಯಾನಾ
ಬರೆದಿಟ್ಟು ಕೆರೆದುಕೊಂಡೆ ಗಡ್ಡಾನಾ
ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ
ಖಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರೀ
ಹೃದಯದ ಮೇಲೆ ಹೈಹೀಲ್ಡು ಹಾಕಿ
ರಾಜಕುಮಾರಿ ನಿಂತಂಗಾಯ್ತು
ಇಂಥಾ ಟೈಮಲ್ಲಿ ಹಾಡು ಬೇಕಿತ್ತಾ...ಯಾವನಿಗ್ ಗೊತ್ತು...ಯಾವನಿಗ್ ಗೊತ್ತು
ದೇವದಾಸನು ಎಣ್ಣೆ ಬಿಟ್ಟಿದ್ನಾ... ಯಾವನಿಗ್ ಗೊತ್ತು... ಯಾವನಿಗ್ ಗೊತ್ತು
ಕನಸ್ಸಲ್ಲಿ ಯಾಕೊ ಯಾವ್ದೂ ಸಾಲಲ್ಲ
ಮೋಡಾನ ಮುದ್ದು ಮಾಡೋಕಾಗಲ್ಲ
ಚಿಟ್ಟೆಗೆ ಚೆಡ್ಡಿ ಹಾಕೋಕಾಗ್ಲಿಲ್ಲ
ನಿಮ್ಗೆ ಗೊತ್ತಲ್ವಾ ನಾನು ಮುಠಾಳಾ
ಮತ್ತೆ ಮತ್ತೆ ಬಂತು ಎದೆಯಲ್ಲೊಂದು ಲಹರಿ
ತುಂಬಾ ಒಳ್ಳೆ ಕನ್ನಡ ಮಾತಾಡ್ಬಿಟ್ಟೆ ಕಣ್ರೇ
ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು
ಇವಳ ಮೂತೀಲೆ ಇರಬೋದಿತ್ತು
ನನ್ನ ಆಸೆಗೂ ಮೀನಿಂಗ್ ಇರಬೋದಾ...ಯಾವನಿಗ್ ಗೊತ್ತು...ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರೂ ತಿಂಡಿ ಸಿಗಬೋದಾ...ಯಾವನಿಗ್ ಗೊತ್ತು...ಯಾವನಿಗ್ ಗೊತ್ತು


Click it and Unblock the Notifications











