ಸಾಹಸಸಿಂಹ ವಿಷ್ಣುವರ್ಧನ್ ಬರ್ತ್‌ಡೇ ಸ್ಪೆಷಲ್
ಇದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರ್ತ್‌ಡೇ ಸ್ಪೆಷಲ್ ಕಾರ್ಯಕ್ರಮ. ಖ್ಯಾತ ಹಿನ್ನೆಲೆ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಗುರುಕಿರಣ್ ಅವರು 'ಸಂಗೀತ ಸುಧೆ' ಹರಿಸಲಿದ್ದಾರೆ. ಸ್ಥಳ ಕೋರಮಂಗಲ ಒಳಾಂಗಣ ಕ್ರೀಡಾಂಗಣ. ಸಮಯ ಶನಿವಾರ (ಸೆ.17) ಸಂಜೆ 6 ಗಂಟೆಗೆ ಸರಿಯಾಗಿ. ಪ್ರವೇಶ ಉಚಿತ.
ಈ ವಿಶೇಷ ಕಾರ್ಯಕ್ರಮವನ್ನು ವಿಭಾ ಚಾರಿಟೇಬಲ್ ಟ್ರಸ್ಟ್ ಮತ್ತು ವಾರ್ತಾ ಇಲಾಖೆ ಅವರ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ಅವರ 61ನೇ ಹುಟ್ಟುಹಬ್ಬದ ಪ್ರಯುಕ್ತ ಸಂಗೀತ ಸುಧೆ ಸವಿಯಬಹುದು.
ಸಾಹಸಸಿಂಹ ವಿಷ್ಣುವರ್ಧನ್ ಅವರ ಅತಿಹೆಚ್ಚು ಚಿತ್ರಗಳಲ್ಲಿ ಹಾಡಿದ ಖ್ಯಾತಿ ಎಸ್ಪಿಬಿಗೆ ಸಲ್ಲುತ್ತದೆ. ಬನ್ನಿ ನಿಮ್ಮ ನೆಚ್ಚಿನ ನಟನಿಗೆ ಅಭಿಮಾನದ ಹೂಮಳೆಗರೆಯಿರಿ. ಹಾಗೆಯೇ ಸೆ.18ರಂದು ಜಯನಗರ ಟಿ ಬ್ಲಾಕ್‌ನ ವಿಷ್ಣು ನಿವಾಸದ ಮುಂದಿನ ಪಾರ್ಕ್‌ಗೆ 'ಸಾಹಸಸಿಂಹ ಡಾ.ವಿಷ್ಣುವರ್ಧನ್ ವಿಶ್ರಾಂತಿ ವನ' ಎಂದು ನಾಮಕರಣ ಮಾಡಲಾಗುತ್ತದೆ.
ಇದಾದ ಬಳಿಕ ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ.ವಿಷ್ಣು ಅವರ ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳಿಂದ ಸ್ವಯಂಪ್ರೇರಿತ ರಕ್ತದಾನ ನಡೆಯಲಿದೆ. ಅಭಿಮಾನಿಗಳೊಂದಿಗೆ ವಿಭಾ ಟ್ರಸ್ಟ್ ಕೈಜೋಡಿಸಲಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











