»   » ಜೀವನದಲ್ಲಿ ನಪಾಸಾಗ ಬೇಡಿ ಎನ್ನುವ ಚಿತ್ರ

ಜೀವನದಲ್ಲಿ ನಪಾಸಾಗ ಬೇಡಿ ಎನ್ನುವ ಚಿತ್ರ

Posted By:
Subscribe to Filmibeat Kannada
35/100 movie team
35/100, ಈ ಸಂಖ್ಯಾವಿಶೇಷ ಯಾವುದೋ ಅಂಕಪಟ್ಟಿಗೆ ಸಂಬಂಧಿಸಿದ್ದಲ್ಲ. ಕನ್ನಡ ಚಿತ್ರವೊಂದರ ಹೆಸರು. ಮೊನ್ನೆ ನಡೆದ ಸೀಡಿ ಹಾಗೂ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಭರ್ತಿ ಜನ. ಹಾಜರಾತಿ ಮಟ್ಟಿಗೆ ಫಸ್ಟ್‌ಕ್ಲಾಸ್ ಕಾರ್ಯಕ್ರಮವದು.

ದೀಪಕ್ 35/100 ನಿರ್ದೇಶಕ. 'ಶೀರ್ಷಿಕೆಯಲ್ಲಿ ಜಸ್ಟ್ ಪಾಸ್ ಅನ್ನುವ ಅರ್ಥವಿದ್ದರೂ ನಾವು ರ್‍ಯಾಂಕ್ ನಿರೀಕ್ಷಿಸುತ್ತಿದ್ದೇವೆ. ನಾವೆಲ್ಲ ಮೂವತ್ತೈದರ ಆಸುಪಾಸಿನ ಹುಡುಗರು. ಅಲ್ಲದೆ ಪರೀಕ್ಷೆ ಬರೆಯುವಾಗ ಗಮನವೆಲ್ಲ ಮೂವತ್ತೈದು ಅಂಕಗಳ ಮೇಲೆಯೇ ಇರ್ತಿತ್ತು. ಪಾಸ್ ಮಾರ್ಕ್ ಖಚಿತವಾದ ಮೇಲೆ ನಿರಾಳವಾಗಿ ಪರೀಕ್ಷಾ ಕೊಠಡಿಯಿಂದ ಎದ್ದು ಬರ್ತಿದ್ದೆ" ಎಂದು ದೀಪಕ್ ತಮ್ಮ ಫಲಿತಾಂಶ ಮೀಮಾಂಸೆ ಮಂಡಿಸಿದರು. ನಿರ್ಮಾಪಕ ಯಶವಂತ್ ಕೂಡ ಶೀರ್ಷಿಕೆ ಮೆಚ್ಚಿಕೊಂಡರು. ಎಲ್ಲರಿಗೂ ಸಿನಿಮಾ ಪಾಸಾಗುವ ವಿಶ್ವಾಸ.

ಚಿತ್ರದ ಸಂಗೀತ ಪ್ರಣವ್ ಅವರದ್ದು. ಸಿನಿಮಾದಲ್ಲಿ ಏಳು ಹಾಡುಗಳಿವೆಯಂತೆ. ಮೆಲೋಡಿ, ಹುಚ್ಚುಖೋಡಿ ಎರಡೂ ರೀತಿಯ ಹಾಡುಗಳಿವೆಯಂತೆ. ಸ್ವರೂಪ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

ಶ್ವೇತಾ ಮೂರ್ತಿ 35/100 ರ ನಾಯಕಿ. ಗುಳಿಕೆನ್ನೆಯ ಈ ಚೆಲುವೆಗೆ ತನ್ನ ನಟನೆಯ ಸಿನಿಮಾ ಡಿಸ್ಟಿಂಕ್ಷನ್‌ನ್ಲಲಿ ಪಾಸಾಗಲಿ ಎನ್ನುವ ಹಂಬಲ. ತಮ್ಮದು ಲವಲವಿಕೆಯ ಪಾತ್ರ ಎಂದು ಶ್ವೇತಾ ಬಣ್ಣಿಸಿ ಕೆನ್ನೆಯಲ್ಲಿ ಗುಳಿ ಆಳವಾಗಿಸಿಕೊಂಡರು. ಹಾಂ, ಮೂವರು ನಾಯಕರು ಸಿನಿಮಾದಲ್ಲಿದ್ದಾರೆ. ಅವರಲ್ಲೊಬ್ಬರು ವಿಕ್ರಂ ಜೋಷಿ. ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಷಿ ಇದ್ದಾರಲ್ಲ, ಅವರ ಪುತ್ರ. ಇಂಗ್ಲೆಂಡ್‌ನಲ್ಲಿ ಕಾಲೂರಿರುವ ವಿಕ್ರಂಗೆ ಕನ್ನಡ ಗಂಟಲಲ್ಲಿ ಸಲೀಸಾಗಿ ಇಳಿಯುತ್ತದೆ. ಅವರು ಕೂಡ ರ್‍ಯಾಂಕ್ ನಿರೀಕ್ಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಇನ್ನೊಬ್ಬ ನಾಯಕ ಮನೋಜವ. ಎಫ್.ಎಂ.104ರಲ್ಲಿ ಆರ್‌ಜೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada