ಪಂಚರಂಗಿ ಹಾಡುಗಳು ನಕಲುಗಳು

ಏನ್ಮಾಡೋದು ಜನಾ ಕೂಡಾ ಹಳಸಿದ ಅನ್ನದ ಬದಲು ಒಗ್ಗರಣೆ ಇಲ್ಲದ ಚಿತ್ರಾನ್ನವನ್ನೆ ತಿನ್ನುತ್ತಾ ಅಹ್ಹಾ ಅಹ್ಹಾ ಎಂಥಾ ಚಿತ್ರ ಎಂಥಾ ಪ್ರಯೋಗ ಎಂದೆಲ್ಲಾ ಮೆಚ್ಚುಗೆ ಸೂಸಿದ್ದಾರೆ. ಚಿತ್ರ ಕೂಡಾ ಹಿಟ್ ಆಗುತ್ತೆ ಬಿಡಿ. ಕಥೆ ಯಾರಿಗೆ ಬೇಕು ಮನರಂಜನೆ ಮುಖ್ಯ. ಇಂಟರ್ ನೆಟ್ ನ ಈಗಾಗಲೇ ಹರಿದಾಡಿರುವ ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರದ ಬಹು ಜನಪ್ರಿಯ ಗೀತೆಯ ನಕಲು ಸಾಹಿತ್ಯವನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಇದನ್ನು ಬರೆದವರು ಯಾರು ಎಂದು ಇನ್ನು ತಿಳಿದಿಲ್ಲ. ಸಿಕ್ಕಾಗ ಅವರ ಬೈ ಲೇನ್ ಹಾಕಲಾಗುವುದು.
ಆ ಗಡಿ ಬಿಡಿ ಗಜಿ ಬಿಜಿ ಓ ಓ ಓ
ಈ ಲೈಫ್ ಇಷ್ಟೇನೆ...
ಬೆಳಿಗ್ಗೆ ಎದ್ದು ಸ್ನಾನ ಮಾಡ್ಕೊಂಡ್
ಅರ್ಧಂಬರ್ಧ ಇಸ್ತ್ರಿ ಹಾಕ್ಕೊಂಡ್
ಕಷ್ಟಪಟ್ಟು ಆಫೀಸ್ ಸೇರೋ
ಲೈಫ್ ಇಷ್ಟೇನೆ...
ಕ್ಯಾಂಟೀನ್ ಹೋದ್ರೂ ಹುಡ್ಗೀರ್ ನೋಟ
ಸೀಟ್ ಗೆ ಬಂದ್ರೂ ಮ್ಯಾನೇಜರ್ ಕಾಟ
ಕದ್ದು ಮುಚ್ಚಿ youtube ನೋಡೋ
ಲೈಫ್ ಇಷ್ಟೇನೆ...
ಆಫೀಸ್ ನಲ್ಲಿ ಒತ್ಲಾ ಹೊಡೆದು
ಮೀಟಿಂಗ್ ನಲ್ಲಿ ಭಾಶ್ಣ ಬಿಗ್ದು
ಮ್ಯಾನೇಜರ್ ಕಣ್ಣಿಗೆ ಮಣ್ಣು ಹಾಕೋ
ಲೈಫ್ ಇಷ್ಟೇನೆ...
ಮ್ಯಾಂವ್ ಮ್ಯಾಂ ಮ್ಯಾಂವ್ ಮ್ಯಾವ್ ಮ್ಯಾಂವ್
ನಾನು ತುಂಬಾ ಒಳ್ಳೆಯವನು
ಸ್ವಲ್ಪ ಹಂಗೆನೆ
ಕೆಲ್ಸಾ ಮಾಡಿ ಬದುಕೋ ಲೈಫ್
ಸ್ವಲ್ಪ ಕಷ್ಟಾನೆ !!
ಹರುಕು ಮುರುಕು ಹಾಸಿಗೆ ಚಾಚಿ
ನಾತ ಹೊಡೆಯೋ ರಗ್ಗು ಬಾಚಿ
ತಣ್ಣಗೆ ಗಾಳೀಲಿ ಬೆಚ್ಚಗೆ ಮಲಗೊ
ಲೈಫ್ ಇಷ್ಟೇನೆ....
ಅಂತೂ ಇಂತು ದಿನಗಳು ಕಳೆದು
ವೀಕೆಂಡ್ ಬಂದ್ರೆ ninety ಹೊಡೆದು
ಮಲ್ಯ ಸಾಹೇಬ್ರಗೆ ಸಲಾಮು ಹಾಕೋ
ಲೈಫ್ ಇಷ್ಟೇನೆ....
ಹೇಳೋರು ಕೇಳೋರು ಯಾರು ಇಲ್ಲ
ಪ್ರಾಯ ಹೋದ್ರೂ partner ಇಲ್ಲ
ನನ್ನೀ ಜೀವಕೆ ನಾನೇ ಎಲ್ಲ
ಲೈಫ್ ಇಷ್ಟೇನೆ....
ಪಾಂವ್ ಪ ಪಾವ್ ಪಾಂವ್ ಪಾಂವ್
ನಾವು ಎಲ್ಲ ಬ್ಯಾಚುಲರ್ಸ್..
ಸ್ವಲ್ಪ ಹಂಗೆನೆ
ತಂದೆ ತಾಯಿ ಬಿಟ್ಟು ಬದುಕೋ
ಈ ಲೈಫ್ ಇಷ್ಟೇನೆ.....
ಈ ಲೈಫ್ ಇಷ್ಟೇನೆ.....
ಈ ಲೈಫ್ ಇಷ್ಟೇನೆ.....
ಸ್ಕ್ರಿಪ್ಟ್ ಸ್ಟೋರಿ ಯಾರಿಗೆ ಬೇಕು
ಎರಡೂವರೆ ಗಂಟೆ ಬೊಂಬಡ ಬಾರ್ಸು
ಟೈಮ್ ಪಾಸ್ ಸಿನಿಮಾ ಹಿಟ್ಟು
ಫಿಲ್ಸ್ಮ್ಸ್ ಮ್ ಇಷ್ಟ್ಣೆ
ಪಂಚರಂಗಿ ಪೊಂ ಪೊಂ


Click it and Unblock the Notifications











