For Quick Alerts
  ALLOW NOTIFICATIONS  
  For Daily Alerts

  ಗಾಳಿ ಪಟ : ಒಂದು ರೊಮ್ಯಾಂಟಿಕ್ ಲವ್ ಸಾಂಗ್!

  By Staff
  |

  ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
  ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
  ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
  ಇನ್ನೆಲ್ಲಿ ನನಗೆ ಉಳಿಗಾಲ ||ಮಿಂಚಾಗಿ||

  ನಾ ನಿನ್ನ ಕನಸಿಗೆ ಚಂದಾದಾರನು
  ಚಂದಾ ಬಾಕಿ ನೀಡಲು ಬಂದೇ ಬರುವೆನು
  ನಾ ನೇರ ಹೃದಯದ ವರದಿಗಾರನು
  ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನು
  ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
  ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು ||ಮಿಂಚಾಗಿ||

  ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
  ಕನ್ನ ಕೊರೆದು ದೋಚಿ ಕೊಂಡ ನೆನಪುಗಳಿಗೆ ಪಾಲುದಾರ
  ನನ್ನ ಈ ವೇದನೆ ನಿನಗೆ ನಾ ನೀಡೆನು
  ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು ||ಮಿಂಚಾಗಿ||

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X