»   » ಮಾಯವಾಗಿದೆ ಮನಸು ಹಾಗೆ ಸುಮ್ಮನೆ

ಮಾಯವಾಗಿದೆ ಮನಸು ಹಾಗೆ ಸುಮ್ಮನೆ

Subscribe to Filmibeat Kannada
lyricist jayanth
ದೂರದರ್ಶನ, ಎಫ್ ಎಂ ರೇಡಿಯೊ,ಶಾಲಾ ಕಾಲೇಜು, ಉದ್ಯಾನವನ ಹೀಗೆ ಎಲ್ಲೆ ಹೋದರೂ 'ಮಾಯವಾಗಿದೆ ಮನಸು ಹಾಗೆ ಸುಮ್ಮನೆ' ಎಂದು ಕೇಳುತ್ತದೆ! ಚಿತ್ರದ ಈ ಹಾಡು ಅಷ್ಟೊಂದು ಜನಪ್ರಿಯವಾಗಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ, ಮನೋಮೂರ್ತಿ ಸಂಗೀತದ ಮೋಡಿ ಮನಸ್ಸನ್ನು ಮತ್ತೆಲ್ಲಿಗೋ ಕೊಂಡೊಯ್ಯುತ್ತದೆ. ಪುಳಕಗೊಳಿಸುವ ಈ ಹಾಡು ದಟ್ಸ್ ಕನ್ನಡ ಓದುಗರಿಗಾಗಿ.


ಮಾಯವಾಗಿದೆ ಮನಸು ಹಾಗೆ ಸುಮ್ಮನೆ
ಗಾಯವ ಮಾಡಿದೆ ಕನಸು ಹಾಗೆ ಸುಮ್ಮನೆ
ಮೋಹದಲ್ಲಿ ಬೀಳುವ, ಮಧುರವಾದ ಭಾವನೆ
ಈಗ ತಾನೇ ಬಂದಿದೆ ನೀಡದೆ ಸೂಚನೆ

ತುಂಬಿ ಹೋಯಿತೀಗಲೇ ನನ್ನ ದಿನಚರಿ
ಎಲ್ಲ ಪುಟದಲು ಅವಳದೇ ವೈಖರಿ
ಅವಳ ನಿಲುವುಗನ್ನಡಿ ಪುಣ್ಯ ಮಾಡಿದೆ
ರೂಪ ತಾಳಿ ನಿಂತಿದೆ ನನ್ನದೇ ಕಲ್ಪನೆ
ಮಾಯವಾಗಿದೆ..

ನನ್ನ ಹಾಡಿನಲ್ಲಿದೆ ಅವಳ ಸಂಗತಿ
ಜಾಹೀರಾಗಲಿ ಜೀವದ ಮಾಹಿತಿ
ಎಲ್ಲೇ ಹೊರಟು ನಿಂತರೂ ಅಲ್ಲೇ ತಲುಪುವೆ
ಜಾಸ್ತಿ ಹೇಳಲಾರೆನು ಖಾಸಗಿ ಯೋಚನೆ
ಮಾಯವಾಗಿದೆ..

(ದಟ್ಸ್ ಕನ್ನಡ ಚಿತ್ರವಾರ್ತೆ)

ಓಡಿ ಬಂದೆನು ನಿನ್ನ ನೋಡಲು ಹಾಡಿನ ಸಾಹಿತ್ಯ

ಚಿತ್ರೀಕರಣ ಮುಗಿಸಿದ ಪ್ರೀತಂರ ಹಾಗೆ ಸುಮ್ಮನೆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada