ಜೋಗಯ್ಯ ಒಂದೇ ಗಂಟೆಯಲ್ಲಿ ಒಂದು ಲಕ್ಷ ಸೀಡಿ ಸೇಲ್
ಬಹುನಿರೀಕ್ಷಿತ 'ಜೋಗಯ್ಯ' ಚಿತ್ರದ ಆಡಿಯೋ ಗುರುವಾರ (ಮೇ.19) ಮಾರುಕಟ್ಟೆಗೆ ವಿಭಿನ್ನವಾಗಿ ಬಿಡುಗಡೆ ಮಾಡಲಾಯಿತು. ಚಿತ್ರದ ನಾಯಕ ನಟ ಹ್ಯಾಟ್ರಿಕ್ ಹೀರೋ ಸೀಡಿಯೊಂದನ್ನು ಖರೀದಿಸುವ ಮೂಲಕ 'ಜೋಗಯ್ಯ' ಆಡಿಯೋ ಮಾರುಕಟ್ಟೆಗೆ ಲಗ್ಗೆ ಹಾಕಿತು. ಅಭಿಮಾನಿಗಳು ಮುಗಿಬಿದ್ದು ಸೀಡಿ ಖರೀದಿಸಿದ್ದಾರೆ.
ಸಾಮಾನ್ಯವಾಗಿ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸಿಕ್ಕಾಪಟ್ಟೆ ಖರ್ಚು ಮಾಡುವ ಪ್ರೇಮ್, ಜೋಗಯ್ಯನಿಗೆ ಮಾತ್ರ ಸರಳ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಜಯನಗರದ Calypso audio shopನಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ Temptations audio shopನಲ್ಲಿ ಚಿತ್ರದ ನಿರ್ಮಾಪಕಿ ರಕ್ಷಿತಾ ಆಡಿಯೋಗಳನ್ನು ಖರೀದಿಸಿ ಜೋಗಯ್ಯ ಆಡಿಯೋಗೆ ಅಧಿಕೃತವಾಗಿ ಬಿಡುಗಡೆ ಭಾಗ್ಯ ಕಲ್ಪಿಸಿದರು.
'ಜೋಗಯ್ಯ' ಆಡಿಯೋ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಬಿಸಿ ಬಿಸಿ ಬೋಂಡಾ ಬಜ್ಜಿಗಳಂತೆ ಮುಗಿಬಿದ್ದು ಖರೀದಿಸಿದ್ದಾಗಿ ಪ್ರೇಮ್ ತಿಳಿಸಿದ್ದಾರೆ. ಆಡಿಯೋ ಬಿಡುಗಡೆಯಾಗಿ ಕೇವಲ ಒಂದು ಗಂಟೆಯಲ್ಲೇ ಒಂದು ಲಕ್ಷ ಸೀಡಿಗಳು ಬಿಕರಿಯಾಗಿವೆ. ಸಂಜೆ ವೇಳೆ ಮೂರು ಲಕ್ಷ ಸೀಡಿ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಪ್ರೇಮ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಅವರು ಮಾತನಾಡುತ್ತಾ, ಯಾರ‌್ಯಾರು ಹಾಡುಗಳನ್ನು ಇಷ್ಟಪಡುತ್ತಾರೋ ಅವರಿಗೆಲ್ಲಾ ಹಬ್ಬ ಎಂದು ಹೇಳಬಹುದು ಎಂದು 'ಜೋಗಯ್ಯ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿ ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಜೋಗಯ್ಯ ಚಿತ್ರದ ಹಾಡುಗಳಿಗೆ ಕೇಳುಗರು ಇನ್ನಷ್ಟೆ ಪ್ರತಿಕ್ರಿಯಿಸಬೇಕಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











