ಮುಂಗಾರು ಮಳೆ ರಿಮೇಕ್ ಹಾಡು ಲೋಕಾರ್ಪಣೆ

By Rajendra

ಯೋಗರಾಜ್ ಭಟ್ಟರ 'ಮುಂಗಾರು ಮಳೆ' ಚಿತ್ರ ಬಿಡುಗಡೆಯಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಳೆ ಸುರಿದಿದೆ. ಮಳೆ ನಿಂತ ನಂತರ ತೊಟ್ಟಿಕ್ಕುವ ಹನಿಗಳು ಎಡಬಿಡದೆ ಕಾಡುತ್ತಲೇಯಿವೆ. ನೀವು ಏನೇ ಅನ್ನಿ, ಆ ಋತುವಿನಲ್ಲಿ ಸುರಿದ ಮಳೆ ಹಾಡುಗಳನ್ನು ಭಗ್ನ ಪ್ರೇಮಿಗಳು ಇಂದಿಗೂ ಅದೇ ವಿಷಾದದಿಂದ, ಅದೇ ದುಖಃದಿಂದ, ಅದೇ ಮಧುರ ಯಾತನೆಯಿಂದ ಚಪ್ಪರಿಸುತ್ತಲೇ ಇದ್ದಾರೆ. ಅದರಲ್ಲೂ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...ಹಾಡಂತೂ ಹಲವರ ಬಾಯಲ್ಲಿ ಹಲವು ತೆರನಾಗಿ ಅ(ಪಾ)ರ್ಥ ಪಡೆದುಕೊಂಡು ಕೃತಾರ್ಥವಾಗಿದೆ. ಕವಿತೆ ಬೆಳೆಯುವುದೇ ಹೀಗಲ್ಲವೇ!

ಈ ಹಾಡನ್ನು ರಿಮೇಕ್ ಮಾಡಿದವರು ಬೆಂಗಳೂರಿನ ಪ್ರಶಾಂತ್ ಇಗ್ನೇಷಿಯಸ್. ಅವರು ಕಳುಹಿಸಿ ಕೊಟ್ಟ್ಟ ಅಣಕು ಗೀತೆಯನ್ನು ಯಥಾವತ್ತಾಗಿ ಇಲ್ಲಿ ದಾಖಲಿಸುತ್ತಿದ್ದೇವೆ. ಮೂಲ ಲೇಖಕರಾದ ಯೋಗರಾಜ್ ಭಟ್ ಅವರೂ ಸಹ ಈ ಮೋಜನ್ನು ಸವಿಯುತ್ತಾರೆ ಎಂಬ ಅಪಾರ ವಿಶ್ವಾಸದೊಂದಿಗೆ-ಸಂಪಾದಕ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಮನೆಯ ಗೋಡೆ ಉರುಳಿದ ಮೇಲೆ
ಸುರಿವ ರಭಸದ ಜಡಿ ಮಳೆಗೆ ನೀರು ತುಂಬಿದೆ
ಯಾವ ಹೊತ್ತಿನಲ್ಲಿ ಯಾವ ರೂಮು ಕೆರೆಯಾಗುವುದೋ
ಯಾವ ಪೈಪು ಕುಡಿಯೊಡೆಯುವುದೋ ತಿಳಿಯದಾಗಿದೆ
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬಾ ಮಳೆಯು ಸುರಿದ ಮುತ್ತಿನ ಗುರುತು
ನಮ್ಮ ರಸ್ತೆ ತುಂಬಾ ಹೊಳೆವ ಕೆಂಪು ಕೆಸರಿನ ಗುರುತು
ಹೆಜ್ಜೆ ಇಟ್ಟರೆ ಜಾರುವ ಸದ್ದು ಕಾಲು ಗಾಯವೋ
ಮನೆಯ ಮುಂದಿನಿಂದ ನೀರು ಚೆಲ್ಲಿ ನಿಂತೆ ನಾನು
ಉಕ್ಕಿ ಉಕ್ಕಿ ಬರುವ ಜಲವು ಏನು ಕೋಡಿಯೋ

ಯಾವ ಕಾರಿನಿಂದ ಯಾರ ಮೇಲೆ ನೀರೆರಗುವುದೋ
ಯಾವ ಹನಿಗಳಿಂದ ಯಾವ ನೆಲವು ಕೆಸರಾಗುವುದೋ
ಯಾವ ಕೆಸರಲ್ಯಾರ ಹೆಸರೋ ಯಾರು ಬರೆದರೋ
ಯಾವ ಕಪ್ಪು ಬಣ್ಣದ ಕೊಡೆಯು ಯಾರ ಕೈಯಿನಲ್ಲರಳುವುದೋ
ಯಾರ ತಲೆಯ ಮೇಲೇರುವುದೋ ಯಾರು ಬಲ್ಲರು

ಒಲವ ಮಳೆಯ ಮಾಮ ನಗುತ್ತಾ ಬಂದ ಮನೆಯಂಗಳಕೆ
ಮಬ್ಬು ಬೆಳಕಿನಲ್ಲಿ ಒಂದು ಕಾಲು ಗುಂಡಿಯ ಒಳಗೆ
ಒಗೆದ ಬಟ್ಟೆಯಲ್ಲಾ ರಾಡಿ ಏನು ಮೋಡಿಯೋ
ದೊಡ್ಡ ಮೋರಿಯಲ್ಲಿ ಕಳೆದು ಹೋಗೋ ದುಃಖವ ನೆನೆದು
ಇನ್ನೂ ಇಲ್ಲೇ ನಿಂತಿದೆ ನೀರು ಏನು ಮಾಡಲಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X