»   » ಕನ್ನಡ ಕೋಗಿಲೆಗೆ ಮತಹಾಕಲು ಮರೆಯದಿರಿ!

ಕನ್ನಡ ಕೋಗಿಲೆಗೆ ಮತಹಾಕಲು ಮರೆಯದಿರಿ!

Subscribe to Filmibeat Kannada

ಬೆಂಗಳೂರು, ಸೆ. 19 : ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗುವ 'ಅಮುಲ್ ಸ್ಟಾರ್ ವಾಯ್ಸ್ ಆಫ್ ಇಂಡಿಯಾ' ರಿಯಾಲಿಟಿ ಶೋದಲ್ಲಿ ರಾಜ್ಯದ ರಿತೀಶಾ ಪದ್ಮನಾಭ್ ಹಾಡುವ ಅವಕಾಶ ಗಿಟ್ಟಿಸಿದ್ದಾರೆ.

ಪ್ರತಿ ಶುಕ್ರವಾರ ಹಾಗೂ ಶನಿವಾರ ರಾತ್ರಿ 10 ಕ್ಕೆ ಪ್ರಸಾರವಾಗುವ ಈ ಕಾರ್ಯಕ್ರಮ ದೇಶಾದ್ಯಂತ ಜನಪ್ರಿಯವಾಗಿದ್ದು, ಯುವ ಜನರ ಪ್ರತಿಭಾ ಪ್ರದರ್ಶಕ್ಕೆ ವೇದಿಕೆಯಾಗಿದೆ. 17 ವರ್ಷದ ರಿತೀಶಾ ತನ್ನ ಸಿರಿ ಕಂಠ ಪ್ರದರ್ಶಿಸಿದ್ದಾರೆ. ಬೆಂಗಳೂರು ಮತ್ತು ಮುಂಬೈ ನಲ್ಲಿ ನಡೆದಿದ್ದ ಅರ್ಹತಾ ಸುತ್ತಿನ 'ವಾಯ್ಸ್ ಅಫ್ ಕರ್ನಾಟಕ' ಧ್ವನಿ ಪರೀಕ್ಷೆಯಲ್ಲಿ ಗೆಲುವು ಸಾಧಿಸಿರುವ ರಿತೀಶಾ ರಾಷ್ಟ್ರಮಟ್ಟದಲ್ಲಿ 23 ಸ್ಪರ್ಧಿಗಳೊಂದಿಗೆ ಸೆಣಸಲಿದ್ದಾರೆ. ಅಲ್ಲದೇ ಸ್ಪರ್ಧೆಯ ಉನ್ನತ ಆರು ಗಾಯಕ/ಗಾಯಕಿಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

ಹಿನ್ನೆಲೆ ಗಾಯಕರಾದ ಶಾನ್ ನಿರೂಪಕರಾಗಿರುವ ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ,ಸುಖವಿಂದರ್ ಸಿಂಗ್ ಮತ್ತು ಮೋಂಟಿ ಶರ್ಮಾ ತೀರ್ಪುಗಾರರಾಗಿದ್ದಾರೆ. ರಾಷ್ಟ್ರೀಯ ಬಾಲಶ್ರೀ, ಕರ್ನಾಟಕ ರಾಜ್ಯ ಕಲಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿರುವ ರಿತೀಶಾ, ಪ್ರತಿಭಾವಂತೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಾಡುತ್ತಿರುವ ಈಕೆಗೆ ಕನ್ನಡಿಗರು ಮತ ಹಾಕುವ ಮೂಲಕ ಶ್ರೇಷ್ಠ ಗಾಯಕಿಯನ್ನಾಗಿ ಆಯ್ಕೆ ಮಾಡಬಹುದು.

ರಿತೀಶಾ ಪರ ಮತ ಹಾಕಲು ಸಂಪರ್ಕಿಸಬೇಕಾದ ಸಂಖ್ಯೆಗಳು, ಎಸ್ಎಂಎಸ್ : VOI 10 ಎಂದು ಬರೆದು 57827 ಕ್ಕೆ ಕಳಿಸಬಹುದು. ಇಲ್ಲವೇ, ಬಿಎಸ್ ಎನ್ಎಲ್ ದೂರವಾಣಿ ಮೂಲಕ 1862888782719, ಹಾಗೂ ಟಾಟಾ ಇಂಡಿಕಾಂನಿಂದ 1290010 ಮೂಲಕ ಮತ ನೀಡಬಹುದು. ಈ ದೂರವಾಣಿ ಮಾರ್ಗ ಶನಿವಾರ ರಾತ್ರಿ 10 ರಿಂದ ಭಾನುವಾರ ರಾತ್ರಿ 12ರ ವರೆಗೆ ಮುಕ್ತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ http://voiceofindia.indya.com/ ನ್ನು ಸಂಪರ್ಕಿಸಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada