»   » ಷರೀಫಜ್ಜನ ಸೋರುತಿಹುದು ಮನೆಯ ಮಾಳಿಗಿ

ಷರೀಫಜ್ಜನ ಸೋರುತಿಹುದು ಮನೆಯ ಮಾಳಿಗಿ

Subscribe to Filmibeat Kannada

"ಷರೀಫರ ಪದಗಳೇ ಹಾಗೆ ಎಲ್ಲರ ಮನೆಸೂರೆ ಮಾಡಿಬಿಡುತ್ತದೆ. ನಾನು ಚಿಕ್ಕಂದಿನಿಂದಲೂ ಅವರ ತತ್ತ್ವಪದಗಳನ್ನು ಕೇಳುತ್ತಾ, ಹಾಡುತ್ತಾ ಆನಂದಪಡುತ್ತಿದೆ. ಅವರ ಪದಗಳನ್ನು ಹಾಡುವಾಗ ಆಗುವ ಸಂತೋಷವೇ ಬೇರೆ" ಎಂದು ಇತ್ತೀಚೆಗೆ ಸೈಕೋ ಚಿತ್ರದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹೇಳುತ್ತಿದ್ದರು. ಧಾರವಾಡ ಭಾಷೆಯ ದೇಸಿ ಸೊಗಡಿನಲ್ಲಿ ಮೂಡಿದ ಹಾವೇರಿಯ ಷರೀಫಜ್ಜನ ಪದಗಳು ಅಂದಿನಿಂದ ಇಂದಿನವರೆಗೂ ಹಾಗೂ ಮುಂದೆಯೂ ಕೂಡ ಪ್ರಸ್ತುತವಾಗಿರಬಲ್ಲದು.

ಸಂದರ್ಭೋಚಿತವಾಗಿಪದ ಹೆಣೆಯುತ್ತಿದ್ದ ಷರೀಫರು, ಜನರ ಕಷ್ಟ ಕಾರ್ಪರ್ಣ್ಯಗಳಿಗೆ , ಅಜ್ಞಾನಕ್ಕೆ ಕನ್ನಡಿ ಹಿಡಿಯುತ್ತಿದ್ದರು. 1990 ರಲ್ಲಿ ಸಂತ ಶಿಶುನಾಳ ಷರೀಫ್ ಚಿತ್ರ ಬಿಡುಗಡೆಯಾಗಿ, ಯಶಸ್ಸು ಗಳಿಸಿತು. ಆ ಚಿತ್ರವನ್ನು ಟಿ.ಎಸ್. ನಾಗಾಭರಣ ನಿರ್ದೇಶಿಸಿದ್ದರು. ಸಿ.ಅಶ್ವಥ್ ಅವರ ಸಂಗೀತ ಹಾಗೂ ಗಾಯನವಿರುವ 'ಸೋರುತಿಹುದು ಮನೆಯ ಮಾಳಿಗಿ..' ಹಾಡು ಇಂದಿನ ಪರಿಸ್ಥಿತಿಗೆ ಹೊಂದುವಂತೆ ಇರುವುದು ಮಾತ್ರ ಸತ್ಯ.


ಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಗಾಯನ: ಸಿ.ಅಶ್ವಥ್
ರಾಕ್ ಶೈಲಿಯಲ್ಲಿ : ರಘು ದೀಕ್ಷಿತ್

ಏ... ರೇ ರೇ ರೆ ರೆ ರಾ.... ಏ...
ಸೋರುತಿಹುದು ಮನೆಯ ಮಾಳಿಗೀ..
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಸೋರುತಿಹುದು ಮನೆಯ ಮಾಳಿಗಿ
ದಾರುಗಟ್ಟಿ ಮಾಳ್ಪರಿಲ್ಲಾ
ಕಾಳಕತ್ತಲೆ ಒಳಗೆ ನಾನ್
ನೆಲಕೇರಿ ಮೆಟ್ಟಲಾರೆ
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಕಡಲಿ
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಕಡಲಿ
ಹರಕು ಚಪ್ಪರ ಕೇರು ಗಿಂಡಿ
ಮೇಲಕ್ಕೇ..ರಿ ಮೆಟ್ಟಲಾರೆ

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂತ ಶಿಶುನಾಳದೀಶತಾನು
ರೆ ರೇ............ ಏ.................
ರೇ...............ಏ... ಹೇ............
ಎಂತ ಶಿಶುನಾಳದೀಶತಾನು
ನಿಂತು ಪೊರೆವನು ಎಂದು ನಂಬಿದೆ

ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗೀ..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada