For Quick Alerts
  ALLOW NOTIFICATIONS  
  For Daily Alerts

  ಅಂತರ್ಜಾಲಕ್ಕೆ ಲಗ್ಗೆ ಹಾಕಿದ ಸಂಗೀತಾ ಹಾಡುಗಳು

  By Rajendra
  |

  ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅಧಿಕೃತವಾಗಿ ಕ್ಯಾಸೆಟ್ಟುಗಳನ್ನು ತಯಾರಿಸಿ ಬಿಡುಗಡೆ ಮಾಡಿದ 'ಸಂಗೀತಾ' ಸಂಸ್ಥೆ ಇದೀಗ ಆನ್‌ಲೈನ್‌ಗೆ ಸೇರ್ಪಡೆಯಾಗಿದೆ. ಇನ್ನು ಮುಂದೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಿಂದ ನಿಮಗಿಷ್ಟವಾದ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

  ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ, ಶರೀಫರ ಹಾಡುಗಳು, ಸುಪ್ರಭಾತ, ಸ್ತೋತ್ರಗಳು, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಹರಿಕಥೆ, ಯಕ್ಷಗಾನ, ಚಲನಚಿತ್ರ ಗೀತೆ ಹೀಗೆ ಮುಂತಾದ ವಿಭಾಗಗಳಲ್ಲಿ ಹಾಡುಗಳು ಲಭ್ಯ.

  ಇನ್ನು ಮುಂದೆ ಸಂಗೀತ ಪ್ರೇಮಿಗಳು ತಮಗಿಷ್ಟವಾದ ಹಾಡುಗಳನ್ನು/ಕಾರ್ಯಕ್ರಮಗಳನ್ನು ನೇರವಾಗಿ ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಧ್ವನಿಸಂಗ್ರಹಗಳನ್ನು ಅಧಿಕೃತ ತಾಣ www.sangeethamusic.com ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಂಗೀಕೃತ ಒಪ್ಪಂದ ತಾಣ www.muzigles.com ಮತ್ತು www.flipkart.com ಇಲ್ಲಿಂದಲೂ ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. (ಒನ್‌ಇಂಡಿಯಾ ಕನ್ನಡ)

  English summary
  Sangeetah master recording company, the FIRST LICENSED COMPANY to manufacture pre recorded audio cassettes in South- India is now becomes online. Bazans, light music, devotional, drama, film songs and many more categories are available at www.sangeethamusic.com.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X