ಊಟಿಯ ಥಂಡಿಗೆ ಮನಸೋತ ನಾರಿ ರಮ್ಯಾ
ನನ್ನ ವೃತ್ತಿ ಜೀವನದಲ್ಲಿ ಅತ್ಯಂತ ಕಠಿಣ ಚಿತ್ರ ಸಂಜು ವೆಡ್ಸ್ ಗೀತಾ. ಈ ಚಿತ್ರದ ಚಿತ್ರೀಕರಣ ಕೂಡ ಮರೆಯಲಾಗದ ಅನುಭವಗಳನ್ನು ಉಳಿಸಿದೆ. ಹಾಗಂತ ಚಿತ್ರದ ವರ್ಣರಂಜಿತ ಧ್ವನಿಸುರುಳಿ ಬಿಡುಗಡೆ (ನ.17) ಸಮಾರಂಭದಲ್ಲಿ ಲಕ್ಕಿ ಸ್ಟಾರ್ ರಮ್ಯಾ ಹೇಳುತ್ತಿದ್ದರೆ ಸಮಾರಂಭದಲ್ಲಿ ಕ್ಷಣಕಾಲ ಮೌನ ಆವರಿಸಿತ್ತು.
ಭಾವನಾತ್ಮಕವಾಗಿ ಈ ಚಿತ್ರ ನನ್ನನ್ನು ಸಾಕಷ್ಟು ಕಾಡಿದೆ. ಊಟಿಯಲ್ಲಿ ಕೃತಕ ಮಳೆಗೆ ಬದಲಾಗಿ ನಿಸರ್ಗ ಸಹಜ ಮಳೆಯಲ್ಲಿ ಚಿತ್ರೀಕರಿಸಿದ್ದು ಅದ್ಭುತವಾಗಿತ್ತು. ಊಟಿಯ ಥಂಡಿ ಹವಾಗೆ ಕ್ಲೀನ್ ಬೌಲ್ಡ್ ಆಗಿದ್ದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಶ್ರೀನಗರ ಕಿಟ್ಟಿ ಅವರ ಪಾತ್ರ ಸಹ ಅಷ್ಟೇ ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು. ಆದರೆ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರೇ ನಾಪತ್ತೆಯಾಗಿದ್ದರು. ಯಾಕೆ ಎಂಬುದು ಗೊತ್ತಾಗಲಿಲ್ಲ. ಉಳಿದಂತೆ
ಪುನೀತ್ ರಾಜ್ ಕುಮಾರ್, ಯೋಗೇಶ್, ಯೋಗರಾಜ್ ಭಟ್, ಸೂಒರಿ, ದಿನೇಶ್ ಗಾಂಧಿ, ಪ್ರೀತಂ ಗುಬ್ಬಿ ಉಪಸ್ಥಿತರಿದ್ದರು. ಸಂಜು ವೆಡ್ಸ್ ಗೀತಾ ಚಿತ್ರದ ಛಾಯಾಗ್ರಾಹಕ ಸತ್ಯ ಹೆಗಡೆ ಹಾಗೂ ರಂಗಾಯಣ ರಘು, ಸಾಧುಕೋಕಿಲ ಹಾಜರಿದ್ದರು.
ಈ ಚಿತ್ರಕ್ಕೆ ನಾಗಶೇಖರ್ ಆಕ್ಷನ್, ಕಟ್ ಹೇಳಿದ್ದಾರೆ. ಅವರ ಮಾತೂ ಅಷ್ಟೇ ಊಟಿಯ ಥಂಡಿ ಥಂಡಿ ಹವಾ ಕಡೆಗೇ ಹೊರಳಿತು. ಊಟಿಯ ಥಂಡಿ ವಾತಾವರಣಕ್ಕೆ ರಮ್ಯಾ ಹೊಂದಿಕೊಂಡಷ್ಟು ಸಲೀಸಾಗಿ ಶ್ರೀನಗರ ಕಿಟ್ಟಿ ಹೊಂದಿಕೊಳ್ಳಲಿಲ್ಲ ಸಾರ ಅವರ ಮಾತುಗಳಲ್ಲಿ ಧ್ವನಿಸಿದವು.


Click it and Unblock the Notifications











