»   » ನಮ್ಮೂರು ಮೈಸೂರು ನಿಮ್ಮೂರು ಯಾವೂರು?ಯಾವೂರ್ರೀ?

ನಮ್ಮೂರು ಮೈಸೂರು ನಿಮ್ಮೂರು ಯಾವೂರು?ಯಾವೂರ್ರೀ?

Subscribe to Filmibeat Kannada


'ಪ್ರೀತಿ ಮಾಡು ತಮಾಷೆ ನೋಡು'ಚಿತ್ರದ ಈ ಹಾಡು, ನಲ್ಲನಲ್ಲೆಯರ ಲಲ್ಲೆ ಮಾತು. ಸರಸದ ಹಾಡಿನಲ್ಲಿ ಮೈಸೂರು ಸೇರಿದಂತೆ ಕರ್ನಾಟಕವನ್ನು ಚಿ.ಉದಯಶಂಕರ್ ಬಣ್ಣಿಸಿದ ಪರಿ, ನಿಜಕ್ಕೂ ಸೊಗಸು. 1979ರಲ್ಲಿ ತೆರೆಕಂಡ ಈ ಚಿತ್ರಕ್ಕೆ ರಾಜನ್ ಮತ್ತು ನಾಗೇಂದ್ರ ಸಂಗೀತ ನೀಡಿದ್ದಾರೆ. ನಾಡಹಬ್ಬದ ನೆಪದಲ್ಲಿ ಓದಿಕೊಳ್ಳಿ.. ಹಾಡಲು ಬಂದರೆ ಹಾಡಿಕೊಳ್ಳಿ..

ನಮ್ಮೂರು ಮೈಸೂರು, ನಿಮ್ಮೂರು ಯಾವೂರು
ನಮ್ಮೂರು ಮೈಸೂರು, ನಿಮ್ಮೂರು ಯಾವೂರು
ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಜೊತೆಯಲಿ ಬಂದರೆ ಇಲ್ಲವೆ ತೊಂದರೆ ನನ್ನಾಣೆ
ಜೊತೆಯಲಿ ಬಂದರೆ ಇಲ್ಲವೆ ತೊಂದರೆ ನಿನ್ನಾಣೆ, ಕೇಳು ಹೆಣ್ಣೆ
ಎಲ್ಲಿಂದ ಬಂದೆ ಹೇಳೆ ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ

ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು
ಕುಳ್ಳನ ಆಸರೆ ಬಯಸಿದೆ ಬಾ ದೊರೆ ನಂಬುವೆಯಾ
ಕುಳ್ಳನ ಆಸರೆ ಬಯಸಿದೆ ಬಾ ದೊರೆ ನಂಬುವೆಯಾ, ನನ್ನ ನೀನು
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು

ಚಾಮುಂಡಿ ಬೆಟ್ಟಾವ ಹತ್ತಿಸುವೆ ಬಾರೆ
ಕಾವೇರಿ ನದಿಯಾಗೆ ಈಜಿಸುವೆ ಬಾರೆ
ಚಾಮುಂಡಿ ಕಾವೇರಿ ಕಂಡಿರುವೆ ನಾನು
ಬೇಲೂರ ಗುಡಿಯನ್ನ ತೋರುವೆಯಾ ನೀನು?
ಬೇಲೂರು ಒಂದೆ ಏಕೆ, ಕೊಲ್ಲೂರ ಬಿಟ್ಟೆ ಏಕೆ
ಕನ್ನಡ ನಾಡ ಚಿನ್ನದ ನಾಡ ಸುತ್ತಿಸಿ ಬರುವೆ ನಿನ್ನನ್ನು
ನಮ್ಮೂರು ಮೈಸೂರು, ನಿಮ್ಮೂರು ಯಾವೂರು
ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು

ಮಾರುದ್ದ ಮಾತೋನೆ ಮೆಚ್ಚಿದೆ ನಿನ್ನನ್ನು,
ಚೋಟುದ್ದ ನಿಂತೋನೆ ಒಪ್ಪಿದೆ ನಿನ್ನನ್ನು
ಹೂವಂತ ಮೊಗದೋಳೆ ಮೆಚ್ಚಿದೆ ನಿನ್ನನ್ನು
ಹಾವಂತ ಜೆಡೆಯೋಳೆ ಒಪ್ಪಿದೆ ನಿನ್ನನ್ನು
ನಿನ್ನಾಟ ಬಲ್ಲೆ ನಾನು, ಕಿಲಾಡಿ ಕುಳ್ಳ ನೀನು
ತುಂಟನ ಹಾಗೆ ತಂಟೆಯ ಮಾಡಿ ಕೆರಳಿಸ ಬೇಡ ನನ್ನನ್ನು
ನಮ್ಮೂರು ಮೈಸೂರು, ನಿಮ್ಮೂರು ಯಾವೂರು
ನಿಮ್ಮೂರೆ ನಮ್ಮೂರು, ನೀವೀಗ ನಮ್ಮೋರು
ಎಲ್ಲಿಂದ ಬಂದೆ ಹೇಳು ಜಾಣೆ
ನಿನ್ನಂಥ ಚೆಲುವೆ ಎಲ್ಲೂ ಕಾಣೆ
ಎಲ್ಲಿಂದ ಬಂದರೇನು ನಾನು
ನಿಮ್ಮವಳೆ ಆದ ಮೇಲೆ ಇನ್ನೇನು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada