For Quick Alerts
  ALLOW NOTIFICATIONS  
  For Daily Alerts

  ದೂರದರ್ಶನಕ್ಕಾಗಿ ರೆಹಮಾನ್ ರಿಯಾಲಿಟಿ ಷೋ

  By Staff
  |

  ದೇಶದ ಸಂಗೀತ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಖ್ಯಾತ ಸಂಗೀತ ಸಂಯೋಜನಕ ಎ.ಆರ್.ರೆಹಮಾನ್ ಕಂಕಣ ತೊಟ್ಟಿದ್ದಾರೆ. ಡಿಸೆಂಬರ್ ಮೊದಲ ವಾರದಿಂದ ದೂರದರ್ಶನದಲ್ಲಿ ಎ.ಆರ್.ರೆಹಮಾನ್ ರ ರಿಯಾಲಿಟಿ ಷೋ ಪ್ರಸಾರವಾಗಲಿದೆ.

  ದೂರದರ್ಶನದಲ್ಲಿ ಎ.ಆರ್.ರೆಹಮಾನ್ ನಿರ್ವಹಿಸುವ 'The Big Band' ರಿಯಾಲಿಟಿ ಷೋಗಾಗಿ ಈಗಾಗಲೇ ಏಳು ದೇಶಗಳ ವಾದ್ಯವೃಂದಗಳು ಆಯ್ಕೆಯಾಗಿವೆ. ಭಾರತದ ಸಂಗೀತ ಪ್ರತಿಭೆಗಳನ್ನು ಮಾತ್ರ ಈ ರಿಯಾಲಿಟಿ ಷೋಗೆ ಹೆಕ್ಕಿತೆಗೆದಿಲ್ಲ. ಭಾರತ ಉಪಖಂಡಕ್ಕೆ ಸೇರಿದ ನೇಪಾಳ, ಮಲೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಪುರ ಮತ್ತ್ತು ಶ್ರೀಲಂಕಾದ ವಾದ್ಯವೃಂದಗಳು ಈಗಾಗಲೇ ಆಯ್ಕೆಯಾಗಿವೆ.

  'ದಿ ಬಿಗ್ ಬ್ಯಾಂಡ್' ಎಂಬ ಸಂಗೀತ ಆಧಾರಿತ ರಿಯಾಲಿಟಿ ಷೋ ಕಾರ್ಯಕ್ರಮವನ್ನು ಪ್ರಸಿದ್ಧ ಮನರಂಜನೆ ಮತ್ತು ಸಂವಹನ ಸಂಸ್ಥೆ ಫಾತ್ ಫಿಶ್ ನಿರ್ಮಿಸುತ್ತಿದೆ. ''ನಮ್ಮಲ್ಲಿ ನಂಬಲಾಗದಷ್ಟು ಸಂಖ್ಯೆಯ ಪ್ರತಿಭೆಗಳು ಎಲೆಮರೆಯ ಕಾಯಿಗಳಂತಿದ್ದಾರೆ. ಅವರನ್ನು ಬೆಳಕಿಗೆ ತಂದು ಪ್ರೋತ್ಸಾಹಿಸಿ ಬೆನ್ನುತಟ್ಟುವುದೇ ನಮ್ಮ ರಿಯಾಲಿಟಿ ಷೋ ನ ಉದ್ದೇಶ'' ಎನ್ನ್ನುತ್ತಾರೆ ಫಾತ್ ಫಿಶ್ ನ ಅಧ್ಯಕ್ಷ ಆನಂದ್ ಸುರಪುರ್.

  ಗೆದ್ದ ತಂಡ ಫಾತ್ ಫೇರ್ ರೆಕಾರ್ಡಿಂಗ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಕಾಲ ರೆಕಾರ್ಡಿಂಗ್ ಗುತ್ತಿಗೆ ಪಡೆಯುತ್ತದೆ. ಇದರಲ್ಲಿ ಮೂರು ಆಲ್ಬಂ ಹಾಗೂ ಆರು ಸಂಗೀತ ವಿಡಿಯೋಗಳನ್ನು ನಿರ್ವಹಿಸುವ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸ, ಸಂಗೀತ ಕಚೇರಿಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ 10 ದಶಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದು ಸುರಪುರ್ ತಿಳಿಸಿದರು.

  ದೂರದರ್ಶನದಲ್ಲಿ ಬಹಳಷ್ಟು ರಿಯಾಲಿಟಿ ಷೋಗಳನ್ನು ನೋಡಿದ್ದೇವೆ. ಆದರೆ ಈ ಷೋನಲ್ಲಿ ಭಾರತದ ಪ್ರತಿಭೆಗಳಷ್ಟೆ ಅಲ್ಲ ಬೇರೆ ಬೇರೆ ಪ್ರದೇಶಗಳ ಪ್ರತಿಭೆಗಳನ್ನು ಗುರುತಿಸಲು ವೇದಿಕೆಯಾಗಲಿದೆ. ಇಲ್ಲೇ ನಮ್ಮ ಕಾರ್ಯಕ್ರಮ ಭಿನ್ನವಾಗಿರುವುದು. ಎಂದು ರೆಹಮಾನ್ ತಮ್ಮ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಸಂಗೀತ ಆಧಾರಿತ ರಿಯಾಲಿಟಿ ಷೋಗಳಲ್ಲಿ ಏಕಮಾತ್ರ ಧ್ವನಿ ಇರುತ್ತದೆ. ಆದರೆ ಬಿಗ್ ಬ್ಯಾಂಡ್ ಉತ್ತಮ ವಾದ್ಯವೃಂದಗಳನ್ನು ಹೊಂದಿದೆ. ಕಾರ್ಯಕ್ರಮದಲ್ಲಿ ಸ್ಪರ್ದಿಸುವ ವಾದ್ಯವೃಂದಗಳು 2 ರಿಂದ 10 ಸದಸ್ಯರನ್ನು ಹೊಂದಿದ್ದು ಕನಿಷ್ಠ ಓರ್ವ ಪ್ರಧಾನ ಗಾಯಕರಿರುತ್ತಾರೆ. ಖಾಸಗಿ ದೂರದರ್ಶನ ಚಾನೆಲ್ ರಿಯಾಲಿಟಿ ಷೋಗಳ ಭರಟೆಯಲ್ಲಿ ಸರಕಾರಿ ದೂರದರ್ಶನದಲ್ಲಿ ಪ್ರಸಾರ ಮಾಡಲಿರುವ ರೆಹಮಾನ್ ರಿಯಾಲಿಟಿ ಷೋ ಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

  (ದಟ್ಸ್ ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X