»   » ರಂಗಾದ ಕೆನ್ನೆಯ ತುಂಬ ಆ ಸಂಜೆ ಓಕುಳಿ

ರಂಗಾದ ಕೆನ್ನೆಯ ತುಂಬ ಆ ಸಂಜೆ ಓಕುಳಿ

Posted By:
Subscribe to Filmibeat Kannada

ವಿಷ್ಣುವರ್ಧನ್ ಸುಹಾಸಿನಿ ಅಭಿನಯದ 1984 ರಲ್ಲಿ ಬಿಡುಗಡೆಯಾದ 'ಬಂಧನ' ಚಿತ್ರದ 'ಬಣ್ಣ ನನ್ನ ಒಲವಿನ ಬಣ್ಣ...' ಹಾಡು ಕೇಳಿದರೆ ಕೆನ್ನೆ ತುಂಬ ಸಂಜೆ ಓಕುಳಿ, ನೂರಾರು ಆಸೆಗಳ ಚಿಲುಮೆಯ ಬಣ್ಣಗಳು ಜೊತೆಗೆ ನೂರೊಂದು ಬಣ್ಣದ ಕನಸುಗಳನ್ನು ಬಿತ್ತುತ್ತದೆ! ಉಲ್ಲಾಸ ಉಕ್ಕಿಸುವ ಈ ರೊಮ್ಯಾಂಟಿಕ್ ಗೀತೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ಜೀವ ತುಂಬಿದ್ದರು. ಈ ಚಿತ್ರ ಪ್ರೇಕ್ಷಕರ ಮನದಲ್ಲಿ ಇಂದಿಗೂ ಹಸಿರಾಗಿದೆ ಎಂದರೆ ಚಿ.ಉದಯಶಂಕರ್ ಸಾಹಿತ್ಯ ,ಪಿ.ರಂಗರಾವ್ ಸಂಗೀತ ಸಹ ಕಾರಣ. ಶುಕ್ರವಾರ (ಮಾ.21) ಹೋಳಿ ಹಬ್ಬ.ಈ ಸಂದರ್ಭಕ್ಕಾಗಿ ದಟ್ಸ್‌ಕನ್ನಡ ಓದುಗರಿಗೋಸ್ಕರ ಒಲವು ತುಂಬಿದ ಬಣ್ಣದ ಹಾಡು.

ಬಣ್ಣ
ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ ||

ನೀ ನಕ್ಕರೆ ಹಸಿರು
ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ
ಬಣ್ಣ ಬಣ್ಣ
ಬಣ್ಣ ಬಣ್ಣ ||

ಬಣ್ಣ
ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ ||

ನೀ ನಕ್ಕರೆ ಹಸಿರು
ಉಲ್ಲಾಸದ ಉಸಿರು
ನೂರಾಸೆಯ ಚಿಲುಮೆಯ ಬಣ್ಣ
ಬಣ್ಣ ಬಣ್ಣ
ಬಣ್ಣ ಬಣ್ಣ ||

ನಾ ದಿರ್ ದಿರ್ ತೋಂ ದಿರ್ ದಿರ್ ದಿರ್ ದಿರ್ ದ ತೋಂ ನಾ ದಿರ್ ದಿರ್ ತೋಂ ದಿರ್ ದಿರ್ ದಿರ್ ದಿರ್ ದ ತೋಂ ....

ಈ ನೀಲಿ ಮೋಹಕ ಕಣ್ಣ
ಚೆಲುವಲ್ಲಿ ಬಾನಿನ ಬಣ್ಣ
ರಂಗಾದ ಕೆನ್ನೆಯ ತುಂಬ
ಆ ಸಂಜೆ ಓಕುಳಿ ಬಣ್ಣ |

ನೀ ತಂದೆ ಬಾಳಲಿ ಇಂದು
ನೂರೊಂದು ಕನಸಿನ ಬಣ್ಣ
ಮನಸೆಂಬ ತೋಟದಲ್ಲಿ
ಹೊಸ ಪ್ರೇಮ ಹೂವಿನ ಬಣ್ಣ |

ಬಾನಿನಿಂದ ಜಾರಿ ಬಂದ ಕಾಮನಬಿಲ್ಲು
ಒಲವೆಂಬ ರಂಗವಲ್ಲಿ ಹಾಕಿದೆ ಇಂದು
ನಿನ್ನ ತುಂಟ ನೋಟದಲ್ಲಿ ಮಿಂಚಿನ ಬಣ್ಣ
ಏನು ಮೋಡಿ ಮಾಡಿ ಇಂದು ಕಾಡಿದೆ ಎನ್ನ
ಬಣ್ಣ ಬಣ್ಣ ಬಣ್ಣ ||


ಬಣ್ಣ
ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ |

ಸ್ವರ......

ಕರಿ ಮೊಡಕಿಂತ ಸೊಗಸು
ಮುಂಗುರಳ ಮೋಹಕ ಬಣ್ಣ
ಬಿಳಿ ಗಂಧಕಿಂತ ಚೆಲುವು
ನಿನ್ನೊಡಲ ಕಾಂತಿಯ ಬಣ್ಣ |

ನೊರೆ ಹಾಲಿಗಿಂತ ಬಿಳುಪು
ಈ ನಿನ್ನ ಮನಸಿನ ಬಣ್ಣ
ಮುಂಜಾನೆ ಮಂಜಿನ ಹಾಗೆ
ತಂಪಾದ ಮಾತಿನ ಬಣ್ಣ |

ನೀಲಿ ಕಡಲಂತೆ ನಿನ್ನ ಪ್ರೀತಿ ಆಳವು
ಮುತ್ತು ರತ್ನ ಪಚ್ಚೆಯಂತೆ ನಿನ್ನ ಸ್ನೇಹವು
ಚೈತ್ರ ತಂದ ಚಿಗುರಿನಂತೆ ನಿನ್ನ ಪ್ರೇಮವು
ಕಾಲದಲ್ಲಿ ಮಾಸದಂತ ಗಟ್ಟಿ ಬಣ್ಣವು
ಬಣ್ಣ ಬಣ್ಣ ಬಣ್ಣ ||

ಬಣ್ಣ
ನನ್ನ ಒಲವಿನ ಬಣ್ಣ
ನನ್ನ ಬದುಕಿನ ಬಣ್ಣ
ನನ್ನ ಬದುಕಿನ ಬಣ್ಣ |

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada