ಏರುತ್ತಿದೆ ಇಳಯರಾಜ ಸಂಗೀತ ಜ್ವರ!

ಒಂದು ಸಣ್ಣ ವಿರಾಮದ ನಂತರ ಮತ್ತೆ ಇಳಯರಾಜರ ಸಂಗೀತ ಕನ್ನಡದಲ್ಲಿ ರಿಂಗಣಿಸಲಿದೆ. 'ಆ ದಿನಗಳು' ಯಶಸ್ಸಿನ ನಂತರ ಅವರನ್ನು ಸಾಕಷ್ಟು ನಿರ್ಮಾಪಕರು ಹುಡುಕಿಕೊಂಡು ಬಂದಿದ್ದಾರೆ. ಹಾಗಾಗಿ ಇಳಯರಾಜ ಅವರಿಗೆ ಈಗ ಕೈತುಂಬ ಕೆಲಸ. ಭಾಗ್ಯದ ಬಳೆಗಾರ, ನನ್ನವನು,ಸರಿಗಮ ಮತ್ತು ಪ್ರೇಮ್ ಕಹಾನಿ ಚಿತ್ರಗಳ ಸಂಗೀತ ಸಂಯೋಜನೆಯಲ್ಲಿ ಈಗವರು ಮಗ್ನ. ಕನ್ನಡ ಚಿತ್ರರಂಗದಲ್ಲಿ ಇಳಯರಾಜ ಸಂಗೀತ ಜ್ವರ ಏರುತ್ತಿರುವುದು ಮನೋಮೂರ್ತಿ ಸಂಗೀತ ತಾಳ ತಪ್ಪುತ್ತಿರುವುದು ದುರಂತ ಅನ್ನಿಸುವುದಿಲ್ಲವೆ?
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











