ರಾಜ್ ಧ್ವನಿಸುರುಳಿ ಬಿಡುಗಡೆಗೆ ದುಬೈ ವೇದಿಕೆ

ದುಬೈನಲ್ಲಿ ಸುಮಾರು 50 ಸಾವಿರದಷ್ಟು ಕನ್ನಡಿಗರಿದ್ದಾರೆ. ಎಲ್ಲರನ್ನೂ ಒಂದೇವೇದಿಕೆಯಲ್ಲಿ ತರವುದು ಕಷ್ಟವಾದರೂ ಎಷ್ಟು ಸಾಧ್ಯವೊ ಅಷ್ಟು ಮಂದಿಯನ್ನು ಒಂದೆಡೆ ಸೇರಿಸೋಣ ಎಂಬುದು ನಿರ್ಮಾಪಕರ ಉದ್ದೇಶ.ಅಂದು ಧ್ವನಿಸುರಳಿ ಬಿಡುಗಡೆ ನಂತರ ಸುಮಾರು 3ತಾಸಿನ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕನ್ನಡ ಚಿತ್ರರಂಗದ ಬಹಳಷ್ಟು ನಟ, ನಟಿಯರು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲೊಳ್ಳಲಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ನಾಯಕ ನಟ ಪುನೀತ್ ರಾಜಕುಮಾರ್ ಮತ್ತು ನಿರ್ದೇಶಕ ಪ್ರೇಮ್ ಮೇಲೆ ಪ್ರೇಕ್ಷಕರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಇನ್ನೂ 3 ಹಾಡುಗಳ ಚಿತ್ರೀಕರಣ ಕಾರ್ಯ ಮುಗಿದಿಲ್ಲ. 2009ರ ಮಾರ್ಚ್ ತಿಂಗಳಲ್ಲಿ 'ರಾಜ್' ಚಿತ್ರ ತೆರೆಕಾಣುವ ಸಾಧ್ಯತೆಗಳಿವೆ. ಚಿತ್ರಕ್ಕೆ 7 ರಿಂದ 8 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಬಾಲಿವುಡ್ ನಟಿ ನಿಶಾ ಕೊಠಾರಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ.
(ದಟ್ಸ್ ಕನ್ನಡಚಿತ್ರವಾರ್ತೆ)


Click it and Unblock the Notifications











