'ವೈ ದಿಸ್ ಕೊಲವೆರಿ ಡಿ' ಹಾಡಿಗೆ ಕಾಪಿರೈಟ್ ಸಮಸ್ಯೆ
'ವೈ ದಿಸ್ ಕೊಲವೆರಿ ಡಿ' ಹಾಡಿನ ಮೂಲಕ ಯುವ ಜನತೆಯನ್ನು ಸೆಳೆದ ಧನುಷ್‌ಗೆ ಈಗ ಹೊಸ ತಲೆನೋವು ಎದುರಾಗಿದೆ. ಈ ಹಾಡಿನ ಕಾಪಿರೈಟ್ ತನಗೆ ಬೇಕು ಎಂದು ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಪೈಪೋಟಿಗೆ ಬಿದ್ದಿದ್ದಾರೆ. ಈ ಹಾಡಿನ ಹಿಂದಿ ರೈಟ್ಸ್‌ಗಾಗಿ ಶಾರುಖ್ ಈಗಾಗಲೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.
ಆದರೆ ಅಷ್ಟರಲ್ಲಾಗಲೆ ಅಕ್ಷಯ್ ಕುಮಾರ್ ಹಾಡಿನ ರೈಟ್ಸ್ ಬಗ್ಗೆ ರಜನಿ ಜತೆ ಮಾತುಕತೆ ನಡೆಸಿ ಹೊರಬಂದಿದ್ದರು. ರಜನಿ ಇಬ್ಬರಿಗೂ ಏನು ಹೇಳಿದ್ದಾರೆಂದರೆ, ಆ ಹಾಡಿನಲ್ಲಾಗಲಿ ಅಥವಾ ಚಿತ್ರದಲ್ಲಾಗಲಿ ನನ್ನ ಪಾತ್ರವೇನೂ ಇಲ್ಲ. ದಯವಿಟ್ಟು ನೀವು ಧನುಷ್‌ರನ್ನೇ ಸಂಪರ್ಕಿಸಿ ಎಂದಿದ್ದಾರೆ.
ಈಗ ಧನುಷ್‌ಗೆ ಆ ಹಾಡಿನ ರೈಟ್ಸ್ ಯಾರಿಗೆ ಕೊಡಬೇಕು ಎಂಬ ಬಗ್ಗೆ ಪೀಕಲಾಟ ಶುರುವಾಗಿದೆ. ಏತನ್ಯಧ್ಯೆ ಧನುಷ್‌ಗೆ ಮತ್ತೊಂದು ತಲೆನೋವು ಎದುರಾಗಿದೆ. ಸಲ್ಮಾನ್ ಖಾನ್ ಕೂಡ 'ಕೊಲವೆರಿ ಡಿ' ರೈಟ್ಸ್‌ಗೆ ಮುಂದಾಗಿದ್ದಾರೆ ಎಂಬುದು.
ಈ ಹಾಡು ತಮ್ಮ ಮುಂದಿನ ಚಿತ್ರ '3'ಗಾಗಿ ಹಾಡಿದ್ದೇನೆ. ಹಾಗಾಗಿ ಯಾರು 3 ಚಿತ್ರದ ರೈಟ್ಸ್ ತೆಗೆದುಕೊಳ್ಳುತ್ತಾರೋ ಅವರಿಗೆ ಈ ಹಾಡಿನ ರೈಟ್ಸ್ ಕೂಡ ಸಲ್ಲುತ್ತದೆ ಎಂದು ಧನುಷ್ ಸ್ಪಷ್ಟವಾಗಿ ಮೂವರಿಗೂ ಸಂದೇಶ ರವಾನಿಸಿದ್ದಾರಂತೆ. ಹಾಗಾಗಿ ಚಿತ್ರದ ರೈಟ್ಸ್ ಯಾರಿಗೆ ಹೋಗುತ್ತದೋ ಕಾದು ನೋಡೋಣ. (ಎಜೆನ್ಸೀಸ್)


Click it and Unblock the Notifications











