twitter
    For Quick Alerts
    ALLOW NOTIFICATIONS  
    For Daily Alerts

    ಎ ಆರ್ ರೆಹಮಾನ್ ಸಂಗೀತಕ್ಕೆ ಎಎಸ್ಐ ವಿರೋಧ

    |

    ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್, ಜಗತ್ಪ್ರಸಿದ್ಧ 'ತಾಜ್ ಮಹಲ್' ಮುಂದೆ ನಡೆಸಲು ಉದ್ದೇಶಿಸಿದ್ದ ಡಾನ್ಸ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿ ತಣ್ಣೀರೆರೆಚಲಾಗಿದೆ. ಕಾರಣ ಇದಕ್ಕೂ ಮೊದಲು ಅಲ್ಲಿ ಚಿತ್ರೀಕರಣ ನಡೆಸಿದ್ದ 'ಮೇರೆ ಬ್ರದರ್ ಕೀ ದುಲ್ಹನ್' ವೇಳೆ ತಾಜ್ ಮಹಲ್ ಸೌಂದರ್ಯಕ್ಕೆ ಗೆ ಧಕ್ಕೆ ತರುವಂತ ಕೆಲಸ ನಡೆದಿದೆ.

    ರೆಹಮಾನ್ ಸಂಗೀತ ನಿರ್ದೇಶನದ 'ಏಕ್ ದೀವಾನಾ ಥಾ' ಚಿತ್ರಕ್ಕಾಗಿ ಅಲ್ಲಿ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲು ಯೋಚಿಸಲಾಗಿತ್ತು. ಆದರೆ 'Archaeological Survey of India (ASI)' ಕಡೆಯಿಂದ ಒಪ್ಪಿಗೆ ದೊರೆಯಲಿಲ್ಲ. ಈ ಮೊದಲು ನಡೆದ ಚಿತ್ರೀಕರಣದಿಂದ ಕೆಟ್ಟ ಅನುಭವಕ್ಕೆ ತುತ್ತಾದ ಅವರು ಅನುಮತಿ ನಿರಾಕರಿಸಿದರು ಎನ್ನಲಾಗಿದೆ.

    ಈಗ ಅದಾಗದಿದ್ದರೂ ನಾಳೆ, ಡಿ. 22 ರಂದು ನಡೆಯಲಿರುವ 'ಆಡಿಯೋ ಬಿಡುಗಡೆ' ಕಾರ್ಯಕ್ರಮ, ತಾಜ್ ಮಹಲ್ ನ ತಾಜ್ ಖೆಮಾ ಪೂರ್ವ ದ್ವಾರದಲ್ಲಿ ನಡೆಯಲಿದೆ. ಗೌತಮ ಮೆನನ್ ನಿರ್ದೇಶನದ ಈ 'ಏಕ್ ದೀವಾನಾ ಥಾ' ಚಿತ್ರಕ್ಕೆ ಜಾವೇದ್ ಅಖ್ತರ್ ಸಾಹಿತ್ಯವಿದೆ. ಪ್ರತೀಕ್ ಬಬ್ಬರ್ ಹಾಗೂ ಆಮಿ ಜಾಕ್ ಸನ್ ಜೋಡಿ ನಟನೆಯ ಈ ಚಿತ್ರದ ಹಾಡುಗಳಿಗೆ ರೆಹಮಾನ್ ಸಂಗೀತ ನೀಡಿದ್ದಾರೆ. ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ. (ಏಜೆನ್ಸೀಸ್)

    English summary
    Music composer AR Rahman has been denied permission to perform near Taj Mahal in Agra. The Oscar award winner musician, who was keen to perform the songs from film Ek Deewana Tha, was denied nod by the Archaeological Survey of India, ASI.
 
    Wednesday, December 21, 2011, 12:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X