twitter
    For Quick Alerts
    ALLOW NOTIFICATIONS  
    For Daily Alerts

    ಗಾಯಕಿ ಆಶಾ ಭೋಸ್ಲೆಗೆ ಗಿನ್ನಿಸ್ ದಾಖಲೆ ಗೌರವ

    |

    Asha Bhosle
    ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದಾರೆ. ಅತಿ ಹೆಚ್ಚಿನ ಸಿಂಗಲ್ ಸ್ಟುಡಿಯೋ ರೆಕಾರ್ಡಿಂಗ್ ಮಾಡಿದ್ದಕ್ಕಾಗಿ ಗಾಯಕಿ ಆಶಾ ಭೋಸ್ಲೆ ನಿನ್ನೆ ಗುರುವಾರ (20-10-2011) ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ಈಗಾಗಲೇ ಭಾರತದ 20 ಭಾಷೆಗಳಲ್ಲಿ ಹಾಡಿ ಅಂತರಾಷ್ಟ್ರೀಯ ಜನಮನ್ನಣೆ ಗಳಿಸಿರುವ ಗಾಯಕಿ.

    ಇದೀಗ 11,000 ಸೋಲೋ, ಡ್ಯುಯಟ್ ಹಾಗೂ ಕೋರಸ್ ಹಾಡುಗಳಿಂದ ಗಿನ್ನಿಸ್ ಗೌರವಕ್ಕೆ ಪಾತ್ರರಾಗಿರುವ ಆಶಾಗೆ 78 ವರ್ಷ ವಯಸ್ಸು. ಈಗಲೂ ಸುಶ್ರಾವ್ಯವಾಗಿ ಹಾಡುವ ಈ ಗಾಯಕಿ 1947 ರಿಂಗ ಗಾನಸುಧೆ ಹರಿಸಲು ಪ್ರಾರಂಭಿಸಿದ್ದಾರೆ. ಸಾಕಷ್ಟು ಜನಪ್ರಿಯ ಗೀತೆಗೆ ಧ್ವನಿಯಾಗಿರುವ ಆಶಾ, 'ಧಮ್ ಮಾರೋ ಧಮ್' ಹಾಗೂ 'ಪಿಯಾ ತು ಅಬ್ ತೊ ಆಜಾ' ಮುಂತಾದ ಹಾಡುಗಳಿಂದ ಚಿರಪರಿಚಿತರು.

    ಸರಿಯಾದ ದಾಖಲೆಗಳನ್ನು ಗಿನ್ನಿಸ್ ವರ್ಡ್ ರೆಕಾರ್ಡ್ ಗೆ ನೀಡಿ ತಮಗೆ ಈ ಗೌರವ ಸಿಗುವಂತೆ ಮಾಡಿದ ವಿಶ್ವಾಸ್ ನೆರೂರ್ ಕರ್ ಅವರಿಗೆ ಕೃತಜ್ಞತೆ ಅರ್ಪಿಸಿದ ಈ ಗಾಯಕಿ ತಮ್ಮ ಅಭಿಮಾನಿಗಳಿಗೆ "ನನ್ನ ಸಂಗೀತ, ಹಾಡುಗಳನ್ನು ಪ್ರೀತಿಸುವ ಎಲ್ಲರಿಗೂ ನಾನು ಚಿರಋಣಿ. ಈ ಪ್ರೀತಿ ಹೀಗೇ ನಿರಂತರವಾಗಿರಲಿ" ಎಂದಿರುವ ಆಶಾ ಬರಲಿರುವ ಅವರ ನಟನೆಯ ಹಿಂದಿ ಸಿನಿಮಾ 'ಮಾಯೀ' ಕೂಡ ನಿಮಗಿಷ್ಟವಾಗಬಹುದು ಎಂದಿದ್ದಾರೆ.

    English summary
    Singing legend Asha Bhosle entered the Guinness World Records Thursday for the most single studio recordings. The 78-year-old has reportedly recorded up to 11,000 solos, duets and chorus-backed songs in over 20 Indian languages since 1947.
 
    Friday, October 21, 2011, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X