twitter
    For Quick Alerts
    ALLOW NOTIFICATIONS  
    For Daily Alerts

    ಜೋಗಯ್ಯ ಹಾಡುಗಳು ಒಂದಕ್ಕಿಂತ ಒಂದು ಸೂಪರ್

    By * ಬಾಲರಾಜ್ ತಂತ್ರಿ
    |

    ಶಿವಣ್ಣ ಅಭಿನಯದ ಪ್ರೇಮ್ ನಿರ್ದೇಶನದ 100ನೇ ಚಿತ್ರ ಜೋಗಯ್ಯ. ಚಿತ್ರದ ಆಡಿಯೋ ಬಿಡುಗಡೆಗೊಂಡಿದ್ದು ಆಲ್ಬಮ್ ನಲ್ಲಿ ಒಟ್ಟು ಎಂಟು ಹಾಡುಗಳಿವೆ. ಎಲ್ಲಾ ಎಂಟು ಹಾಡುಗಳು ವಿಭಿನ್ನ ರೀತಿಯಲ್ಲಿದ್ದು ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸಲು ಸಂಗೀತ ನಿರ್ದೇಶಕ ಹರಿಕೃಷ್ಣ ಉತ್ತಮ ಟ್ಯೂನ್ ನೀಡುವ ಪ್ರಯತ್ನ ಮಾಡಿದ್ದಾರೆ ಅದರಲ್ಲಿ ಯಶಸ್ಸು ಪಡೆದುಕೊಂದಿದ್ದಾರೆನ್ನಬಹುದು.

    ಚಿತ್ರದ ಎಲ್ಲಾ ಹಾಡಿಗೆ ಪ್ರೇಮ್ ಸಾಹಿತ್ಯ ನೀಡಿರುವುದು ವಿಶೇಷ. ಬಹಳ ಜಾಗರೂಕತೆಯಿಂದ ಪ್ರೇಮ್ ಟ್ಯೂನ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದರೆ
    ಅತಿಶಯೋಕ್ತಿಯಾಗಲಾರದು.

    1. ಏ ಕುರಿನಾ, ಕೋಳಿನಾ ಸೋಮವಾರ ಶನಿವಾರ ಕುಯ್ಯುವಂಗಿಲ್ಲ ...ಆಲ್ಬಂನ ಮೊದಲ ಹಾಡು. ಗ್ರಾಮೀಣ ಭಾಷಿಗರು ಬಳಸುವ ಪದವನ್ನು ಪ್ರೇಮ್ ಇಲ್ಲಿ ಹಾಡಿನ ಮೂಲಕ ಬಳಸಿದ್ದಾರೆ. ಫಾಸ್ಟ್ ಬೀಟ್ ನಲ್ಲಿರುವ ಹಾಡಿಗೆ ಪಾಶ್ಚಿಮಾತ್ಯ ರೀತಿಯ ಮ್ಯೂಸಿಕ್ ಟಚ್ ನೀಡಿರುವುದು ವಿಶೇಷ. ವಿಜಯ್ ಪ್ರಕಾಶ್, ಕೈಲಾಶ್ ಖೇರ್ ಮತ್ತು ಶ್ರೇಯಾ ಘೋಶಾಲ್ ಕಂಠ ಸಿರಿಯಲ್ಲಿ ಬಂದ ಈ ಹಾಡು ಒಂದು ಒಳ್ಳೆ ಟಪಾಂಗುಚಿ ಹಾಡಿನ ಸಾಲಿಗೆ ಸೇರುವುದರಲ್ಲಿ ಸಂಶಯವಿಲ್ಲ.

    2. ಹರಹರ ಶಂಕರ ಶಂಭೋ ಮಾಹಾದೇವ್...ಜೋಗಿ...ಜೋಗಿ...ಜೋಗಿ .. .- ವಿಶಿಷ್ಟ ಮತ್ತು ಕುತೂಹಲಭರಿವಾಗಿರುವ ಹಾಡಿನ ಸಾಹಿತ್ಯ. ನಾಗಾ ಸಾಧುಗಳು ಮತ್ತು ಅಘೋರಿಗಳು ಶಿವನನ್ನು ಆರಾಧಿಸುವ ರೀತಿಯಲ್ಲಿ ಬರೆದ ಸಾಹಿತ್ಯದಂತಿದೆ. ಇಂತಹ ಹಾಡನ್ನು ನಾನು ಬಿಟ್ಟರೆ ಬೇರೆ ಯಾರೂ ಹಾಡಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಶಂಕರ್ ಮಹಾದೇವನ್ ಹಾಡಿದ್ದಾರೆ. ಹಾಡಿನ ಮಧ್ಯೆ ಅವರು ನೀಡುವ ಮಾಡ್ಯುಲೇಶನ್ ಸುಪರ್ಬ್.

    3. ಐ ಲವ್ ಯು, ಕೆಂಪೇ ಗೌಡ ಊರಲ್ಲಿ... ಪ್ರಿಯಾ ಹಿಮೇಶ್ ಜೊತೆ ಉಪೇಂದ್ರ ಈ ಹಾಡನ್ನು ಹಾಡಿರುವುದು ವಿಶೇಷ. ತಗಲಾಕೊಂಡೆ ನಾನು.. ಬೀದಿ ಬಸವಣ್ಣನ ಕೈಯಲ್ಲಿ, ಕೋಮಾ...ಕೋಮಾ... ಮುಂತಾದ ಸಾಹಿತ್ಯ ಶಿವಣ್ಣ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ. ಪ್ರಶ್ನೋತ್ತರ ರೀತಿಯಲ್ಲಿರುವ ಸಾಗುವ ಹಾಡಿಗೆ ಶಿವಣ್ಣ ಹಳೆ ಚಿತ್ರದ ಟ್ಯೂನ್ ಅನ್ನು ಕೆಲವೊಂದು ಕಡೆ ಬಳಸಿಕೊಳ್ಳಲಾಗಿದೆ (ಗಾಜನೂರಿನ ಗಂಡು, ಜನುಮದ ಜೋಡಿ).

    4. ಬಾರಯ್ಯಾ ಬಾ ಜೋಗಯ್ಯ...ದೂರದಿಂದ ನೋಡ್ತಾರೋ ...ಕಣ್ಣ ನೀರ - ಮದರ್ ಸೆಂಟಿಮೆಂಟ್ ಹಾಡು. ಸಂಗಡಿಗರೊಂದಿಗೆ ಶ್ರೇಯಾ ಘೋಷಾಲ್ ಹಾಡಿರುವ ಈ ಹಾಡು ಮೆಲೋಡಿಯಸ್. ಬೋಲೇನಾಥ್..ಬೋಲೇನಾಥ್ ಎಂದು ಹೈ ಪಿಚ್ ನಲ್ಲಿ ಸಾಗಿ ಒಮ್ಮೆಲೇ ಇಂಪಾದ ಟ್ಯೂನ್ ನತ್ತ ಹೊರಳುತ್ತದೆ. ಶ್ರೇಯಾ ಕನ್ನಡ ಸ್ವರ ಉಚ್ಚಾರಣೆ ಬಗ್ಗೆ ಕೆಮ್ಮುವಂಗಿಲ್ಲ.

    5. ಯಾರೂ ಕಾಣದೂರು ... ಯಾರೂ ಎಲ್ಲಾ ದೂರು ಅಲ್ಲಿ ನಾನೇ ನಾನೇ ಕಡೆ ಉಸಿರು ಇರುವ ತನಕ ಜೋಗಿ - ಚಿತ್ರದಲ್ಲಿ ನಾಯಕಿ ಹೀರೋ ಮೇಲಿನ ಪ್ರೇಮ ನಿವೇದಿಸುವ ಹಾಗೂ ನಾಯಕ ನ ಅಸಹಾಯಕತೆ ಹಾಡಿನಲ್ಲಿ ವ್ಯಕ್ತವಾಗಿದೆ. ಶ್ರೇಯಾ ಮತ್ತೋ ಸೋನು ನಿಗಮ್ ಹಾಡಿರುವ ಈ ಹಾಡು ಕಿವಿಗೆ ಇಂಪು, ಮನಸಿಗೆ ಮುದ ನೀಡುತ್ತೆ. ಹಾಡಿನಲ್ಲಿ ಬರುವ ಕೆಲವೊಂದು ಟ್ಯೂನ್ ಯಶಸ್ವಿ ಹಿಂದಿ ಚಿತ್ರವೊಂದರ ಹಾಡಿನ ಗುಂಗಿನಲ್ಲಿದೆ.

    6. ಹೆತ್ತವಳಲ್ಲ ಅವಳು ನಿನಗೆ ಯಾರೋ ಜೋಗಿ... ಸೋನು ನಿಗಮ್ ಸಂಗಡಿಗರೊಂದಿಗೆ ಹಾಡಿರುವ ಹಾಡು ಜೋಗಿ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ಹಾಡಿನ ರೀತಿಯಲ್ಲಿದೆ. ಸೋನು ನಿಗಮ್ ಅವರ ಧ್ವನಿ ಹಾಡಿಗೆ ಉತ್ತಮವಾಗಿ ಹೊಂದಾಣಿಕೆಯಾಗಿದೆ.

    7. ಓಡಲೇ.. ನಾನು ನೀನು ನಿಲ್ಲಂಗಿಲ್ಲ. ಜೋಗಿ ಬಂದ ನಿಲ್ಲಂಗಿಲ್ಲ - ಹಾಡಿನ ಮಧ್ಯೆ ಪಡ್ಡೆಗಳಿಗೆ ಪುಷ್ಕಳ ಡೈಲಾಗ್ ಗಳು ಉ.ದಾ. ನಾಮ ಹಾಕೊಂಡು
    ತಿರುಪತಿಗೆ ಹೊಂಟಾ... ಸಿಂಪಲ್ ಆಗಿ ಹೇಳು ಊರು ಬಿಡ್ತಾ ಇದ್ದೀನಂತ. ಫಾಸ್ಟ್ ಟ್ರ್ಯಾಕ್ ಹಾಡಿನಲ್ಲಿ ಸಾಗುವ ಈ ಹಾಡನ್ನು ಪ್ರೇಮ್ ಮತ್ತು ಶ್ರೇಯಾ
    ಘೋಶಾಲ್ ಹಾಡಿದ್ದಾರೆ. ಪ್ರೇಮ್ ಗಡಸು ಧ್ವನಿ ಹಾಡಿಗೆ ಸರಿಯಾಗಿ ಒಪ್ಪುತ್ತೆ.

    8. ಮದರ್ ಥೀಮ್ - ಜೋಗಿ ಚಿತ್ರದ ಸೂಪರ್ ಹಿಟ್ ಹಾಡು ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನ್ನು ಹಾಡಿನ ಇನ್ಸ್ಟ್ರುಮೆಂಟಲ್...ಒಟ್ಟಾರೆ ಚಿತ್ರದ ಹಾಡಿನ ಬಗ್ಗೆ ಹೇಳುವುದಾದರೆ ಪ್ರೇಮ್ ನಲ್ಲಿರುವ ಸಾಹಿತ್ಯದ ಪ್ರತಿಭೆಗೊಂದು ಶಹಬ್ಬಾಸ್. ಆಲ್ಬಮ್ ನಲ್ಲಿ ವೈವಿಧ್ಯತೆ ಇದೆ.

    ಹರಿಕೃಷ್ಣ ಮತ್ತೆ ಸ್ಯಾಂಡಲ್ ವುಡ್‌ನ ನಂಬರ್ 1 ಸಂಗೀತ ನಿರ್ದೇಶಕ ತಾನೆಂದು ನಿರೂಪಿಸಿದ್ದಾರೆ. ಯಾವುದೇ ಮುಲಾಜಿಲ್ಲದೆ ಆಲ್ಬಮ್ ಖರೀದಿಸಬಹುದು. ವಿಜಯ್ ಪ್ರಕಾಶ್ ಮತ್ತು ಉಪೇಂದ್ರ ಬಿಟ್ಟರೆ ಕನ್ನಡಿಗರಿಗೆ ಆಲ್ಬಮ್ ನಲ್ಲಿ ಸ್ಥಾನವಿಲ್ಲ ಎನ್ನುವುದೊಂದೇ ಕೊರಗು.

    English summary
    Here is the music review of latest Kannada album Jogayya. Lyrics by Prem, Music by V.Harikrishna and singers Shankar Mahadeven,Shreya Goshal, Prem, Upendra, PriyaHimesh. The songs are amazing with excellent beat, u feel like dancing and dancing.
    Saturday, May 21, 2011, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X