ರಮ್ಯಾ ಸಖತ್ ಗರಮ್ ಆಗಲು ಕಾರಣವೇನು ಗೊತ್ತೇ?

ನಾನೂ ಒಬ್ಬಳು ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಸಹಾಯ ಮಾಡುವುದು ಒಳ್ಳೆಯದು ಎಂದು ಅನ್ನಿಸಿತು. ಹಾಗಾಗಿ ಯೋಚನೆ ಮಾಡಿ ನಂತರ ಹೇಳುವೆ ಅಂದಿದ್ದು ತಪ್ಪಾ? ಹಾಡಿಗೆ ಕುಣಿಯುತ್ತೇನೆ ಎಂದು ಹೇಳಿರಲೇ ಇಲ್ಲ. ಅವರ ಕರಾರಿಗೆ ಸಹಿ ಮಾಡಿರಲಿಲ್ಲ. ಸಂಭಾವನೆ ಬಗ್ಗೆ ಮಾತನಾಡಿರಲಿಲ್ಲ.
ಪೋರ್ಚುಗಲ್ ಪ್ರವಾಸ ಮುಗಿಸಿ ಬಂದ ನಂತರ ಮಾತಾಡೋಣ ಎಂದು ಹೇಳಿದ್ದೆ. ಆದರೆ ಈಗ ನೋಡಿದರೆ ನಾನು ಹಾಡಿನಲ್ಲಿ ಕುಣಿಯಲು ಒಪ್ಪಕೊಂಡಿದ್ದೇನೆ ಎಂಬ ವರದಿ ಇದೆ. ಕೋಪ ಬರದೇ ಇರುತ್ತದೆಯೇ? ಇಲ್ಲಿ ಪ್ರೊಫಶನಲಿಸಂ ಅಂದ್ರೆ ಏನು ಅಂತ ಗೊತ್ತಿಲ್ಲವಾ? ಏಕೆ ಹೀಗೆ ಎಂದು ಮುಖ ಕೆಂಪಗೆ ಮಾಡಿಕೊಂಡರು ರಮ್ಯಾ.
ಜಾನಿ ಮೇರಾ ನಾಮ್ ಚಿತ್ರದ 'ಊರಿಗೊಬ್ಳೆ ಪದ್ಮಾವತಿ' ಹಾಡಿನಲ್ಲಿ ಕುಣಿದ ನಂತರ ಬಹಳಷ್ಟು ನಿರ್ಮಾಪಕರು ರಮ್ಯಾರನ್ನು ಐಟಂ ಸಾಂಗ್ ನಲ್ಲಿ ಕುಣಿಸಬೇಕೆಂದು ಕನಸು ಕಂಡಿದ್ದಾರೆ. ಆದರೆ ಐಟಂ ಸಾಂಗ್ ನಲ್ಲಿ ಕುಣಿಯುವ ಅಗತ್ಯ ನನಗಿಲ್ಲ.
ನನಗೆ ನಾಯಕಿ ಪಾತ್ರದಲ್ಲಿ ಬರುತ್ತಿರುವ ಆಫರ್ ಗಳನ್ನೇ ಒಪ್ಪಿಕೊಳ್ಳುವುದಕ್ಕೆ ಸಮಯ ಇಲ್ಲ. ಇನ್ನು ಐಟಂ ಸಾಂಗ್ ದೂರದ ಮಾತು. ಅಂಥ ಅಗತ್ಯ, ಅನಿವಾರ್ಯತೆ ನನಗಿಲ್ಲ" ಎಂದು ಕಡ್ಡಿಮುರಿದಂತೆ ಹೇಳಿ ಮೌನವಾಗಿದ್ದಾರೆ ರಮ್ಯಾ. (ಒನ್ ಇಂಡಿಯಾ ಕನ್ನಡ)


Click it and Unblock the Notifications











