»   » ಇಳಯರಾಜ ಸಂಭಾವನೆ ಬರೋಬ್ಬರಿ ರು.70 ಲಕ್ಷ!!

ಇಳಯರಾಜ ಸಂಭಾವನೆ ಬರೋಬ್ಬರಿ ರು.70 ಲಕ್ಷ!!

Subscribe to Filmibeat Kannada

'ತಾಜ್ ಮಹಲ್' ಚಿತ್ರದ ಯಶಸ್ಸಿನಿಂದ ಬೀಗುತ್ತಿರುವ ನಿರ್ದೇಶಕ ಚಂದ್ರು ಇನ್ನೊಂದು ಭಾರಿ ಬಜೆಟ್ಟಿನ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ. ಸುಮಾರು 4 ಕೋಟಿ ರುಪಾಯಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಹೆಸರು 'ಪ್ರೇಮ್ ಕಹಾನಿ'. ತಾಜ್ ಮಹಲ್ ಚಿತ್ರದ ಹೀರೋ ಅಜಯ್ ನಾಯಕನಾದರೆ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿರುವ ಶೀಬಾ ನಾಯಕಿ. ಪ್ರಮುಖ ಪಾತ್ರಕ್ಕೆ ಪ್ರಕಾಶ್ ರೈ ಜೊತೆ ಮಾತುಕತೆ ನಡೆಯುತ್ತಿದೆ. ನವೆಂಬರ್ 10 ರಂದು ಮಹೂರ್ತ ನಡೆಯಲಿದೆ.

ವಿಷಯ ಏನೆಂದರೆ ಕನ್ನಡದ ಮಟ್ಟಿಗೆ 'ಆಲ್ ಟೈಮ್ ರೆಕಾರ್ಡ್' ಎನ್ನಬಹುದಾದ ಬರೋಬ್ಬರಿ ರು. 70 ಲಕ್ಷವನ್ನು ನೀಡಿ ಈ ಚಿತ್ರದ ಸಂಗೀತ ನಿರ್ದೇಶನದ ಹೊಣೆಯನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ವಹಿಸಿರುವ ಬಗ್ಗೆ ಗಾಂಧಿ ನಗರದಲ್ಲಿ ಗುಲ್ಲೆದ್ದಿದೆ. ಹಿನ್ನಲೆ ಸಂಗೀತ ಕೂಡ ಅವರದೇ!! ಸಾಮನ್ಯವಾಗಿ ಚೆನ್ನೈ ನಲ್ಲೇ ಟ್ಯೂನ್ ಹೊಸೆಯವ ಇಳಯರಾಜ ಈ ಚಿತ್ರಕ್ಕಾಗಿ ಬೆಂಗಳೂರಿನ ಲೀಲಾ ಪ್ಯಾಲೇಸ್ ನಲ್ಲಿ 8 ಹಾಡುಗಳಿಗೆ ರಾಗ ಜೋಡಿಸುತ್ತ ಕುಳಿತ್ತಿದ್ದಾರೆ.

"ಈ ಹಿಂದೆ ಗೀತಾ, ಜನ್ಮ ಜನ್ಮದ ಅನುಬಂಧ, ನೀ ನನ್ನ ಗೆಲ್ಲಲಾರೆ ಹಾಗೂ ಇತ್ತೀಚಿನ ಆ ದಿನಗಳು ಚಿತ್ರಕ್ಕೆ ಇಳಯರಾಜ ಅದ್ಭುತ ಸಂಗೀತ ನೀಡಿದ್ದರು. ಪ್ರೇಮ್ ಕಹಾನಿ ಚಿತ್ರಕ್ಕೆ ನೀಡಿರುವ ಎಲ್ಲಾ 8 ಹಾಡುಗಳು ಸದಾ ಕಾಡುವಂತಿದೆ. ಇದು ಇಳಯರಾಜ ಅವರ ತಾಕತ್ತು" ಎನ್ನುತ್ತಾರೆ ಚಿತ್ರದ ನಿರ್ದೇಶಕ ಚಂದ್ರು. 'ಪ್ರೇಮ್ ಕಹಾನಿ' ಕನ್ನಡ ಚಿತ್ರರಂಗದ ಮತ್ತೊಂದು ಪ್ರೇಮ ಲೋಕವನ್ನು ಸೃಷ್ಟಿ ಮಾಡುತ್ತಾ ಎನ್ನುವುದು ಈಗಿನ ಪ್ರಶ್ನೆ?

(ದಟ್ಸ್ ಕನ್ನಡ ಸಿನಿವಾರ್ತೆ)

ಕನ್ನಡ ಬೆಳ್ಳಿಪರದೆ ಮೇಲೆ ಪೂಜಾ'ಗಾಂಧಿ'ಗಿರಿ!
ಯಾಕೋ ಏನೋ ಪೂಜಾಗಾಂಧಿ ಸ್ವಲ್ಪ ಕಿರಿಕ್ ಅಂತೆ!
ಪೂಜಾಗಾಂಧಿ, ಅಜಯ್ ಅವರ ತಾಜ್ ಮಹಲ್ ಟ್ರೈಲರ್
ಚಿತ್ರವಿಮರ್ಶೆ: ತಾಜ್ ಮಹಲ್.ಎಂಥಾ ಸ್ವಾದ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada