Just In
Don't Miss!
- News
ಗೂಳಿಗೆ ಕೆಂಪು ಬಟ್ಟೆ ತೋರಿಸಿದಂತಾಗಿದೆ "ಜೈಶ್ರೀರಾಮ್" ಘೋಷಣೆ; ಹರಿಯಾಣ ಸಚಿವ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುನೀತ್ ಹುಡುಗರು ಆಡಿಯೋ ಸೂಪರ್ ಹಿಟ್ ಗುರು!
ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಹುಡುಗರು' ಆಡಿಯೋ ಮಾರುಕಟ್ಟೆಗೆ ಬಂದು ಇನ್ನೂ ಮೂರು ದಿನ ಆಗಿಲ್ಲ ಆಗಲೇ ಸೂಪರ್ ಹಿಟ್ ಆಗಿದೆ.ಈಗ ಚಿತ್ರದ ಹಾಡುಗಳು ಎಲ್ಲೆಲ್ಲೂ ಹರಿದಾಡುತ್ತಿವೆ. "ಶಂಭೋ ಶಿವ ಶಂಭೋ.." ಎಂಬ ಹಾಡನ್ನು ಹೊರತುಪಡಿಸಿದರೆ ಉಳಿದೆಲ್ಲಾ ಹಾಡುಗಳನ್ನು ಹರಿಕೃಷ್ಣ ಅವರ ಸ್ವಂತಿಕೆಯಲ್ಲಿ ಮೂಡಿಬಂದಿವೆ.
ಫೇಸ್ ಬುಕ್‌ನಲ್ಲೂ ಹುಡುಗರು ಆಡಿಯೋ ಬಗ್ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಆಡಿಯೋ ಲಭ್ಯವಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ನೀರಲ್ಲಿ...ಹಾಗೂ ಶಂಭೋ ಶಿವ ಶಂಭೋ ಎಂಬ ಎರಡು ಹಾಡುಗಳಂತೂ ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಉಳಿದ ಹಾಡುಗಳು ಜನಪ್ರಿಯವಾಗುತ್ತ್ತಿವೆ.
ಹುಡುಗರು ಚಿತ್ರಕ್ಕಾಗಿ ಪ್ರತ್ಯೇಕ ವೆಬ್ ಸೈಟ್, ಫೇಸ್ ಬುಕ್, ಯೂಟ್ಯೂಬ್ ವಾಹಿನಿ ಮೂಲಕ ವಿನೂತನವಾಗಿ ಪ್ರಚಾರಕ್ಕಿಳಿದಿರುವ ವಜ್ರೇಶ್ವರಿ ಸಂಸ್ಥೆ ಈ ರಿಮೇಕ್ ಚಿತ್ರವನ್ನು ಕನ್ನಡದ ಸದಭಿರುಚಿ ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದೆ. ಜನ ಏನು ಕೇಳ್ತಾರೋ ಅದನ್ನು ನಾವು ಕೊಡಬೇಕು. ಹುಡುಗರು ಹೆಸರೇ ಹೇಳುವಂತೆ ಯುವ ಜನಾಂಗಕ್ಕೆ ಒಂದು ಒಳ್ಳೆ ಮೇಸೆಜ್ ಇರುವಂಥ ಚಿತ್ರ ಹಾಗಾಗಿ ಫೇಸ್ ಬುಕ್ ಯೂಟ್ಯೂಬ್ ಅನ್ನು ಬಳಸಿಕೊಂಡು ಯುವಕರನ್ನು ಹೆಚ್ಚು ತಲುಪಲು ಉದ್ದೇಶಿಸಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.