ಸಿದ್ಲಿಂಗುಗೆ ಪುನೀತ್ ರಾಜ್ ಕುಮಾರ್ ಸಿಂಗಿಂಗು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಿನ್ನೆಲೆ ಗಾಯಕರಾಗಿ ಈಗಾಗಲೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಈಗ ಲೂಸ್ ಮಾದ ಯೋಗೀಶ್ ಅಭಿನಯಿಸುತ್ತಿರುವ 'ಸಿದ್ಲಿಂಗು' ಚಿತ್ರಕ್ಕೂ ತಮ್ಮ ಗಾನಸುಧೆಯನ್ನು ಹರಿಸಿದ್ದಾರೆ.
ಯೋಗೀಶ್ ಜೊತೆ ಗೋಲ್ಡನ್ ಗರ್ಲ್ ರಮ್ಯಾ ಅಭಿನಯಿಸುತ್ತಿರುವ 'ಸಿದ್ಲಿಂಗು' ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಈ ಹಿಂದೆ ಪುನೀತ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಶೈಲೂ ಸೇರಿದಂತೆ ಶಿವಣ್ಣನ ಮೈಲಾರಿ ಚಿತ್ರದಲ್ಲಿ ಹಾಡಿ ಸೈ ಎನ್ನಿಸಿಕೊಂಡಿದ್ದಾರೆ.
ತಮ್ಮದೇ ಚಿತ್ರಗಳಾದ ವಂಶಿ (ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ), ರಾಮ್ (ಹೊಸ ಗಾನ ಬಜಾನಾ) ಚಿತ್ರಗಳಲ್ಲೂ ಪುನೀತ್ ಹಾಡಿ ರಂಜಿಸಿದ್ದರು. ಪುನೀತ್ ಅಭಿನಯದ ಪರಮಾತ್ಮ ಚಿತ್ರದ ಆಡಿಯೋ ಈಗಾಗಲೆ ಸೂಪರ್ ಹಿಟ್ ಆಗಿದೆ. ಪುನೀತ್ ಕಂಠವೂ ಈಗೀಗ ಫೇಮಸ್ ಆಗುತ್ತಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
English summary
Power Star Puneet Raj Kumar to render play back for a song in Yogesh's new film Siddalingu. Earlier he sung a song in films like Mylari, Vamshi, Raam and Shyloo.


Click it and Unblock the Notifications