ವೈ ದಿಸ್ ಕೊಲವೆರಿ ಡಿ ಎಂದರೆ ಮೀನಿಂಗ್ ಏನು?
ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಚರ್ಚೆಗೆ ನಾಂದಿ ಹಾಡಿ ಖಂಡಾಂತರಗಳನ್ನು ದಾಟಿದ ಹಾಡು ಧನುಷ್ ಹಾಡಿರುವ "ವೈ ದಿಸ್ ಕೊಲವೆರಿ ಡಿ". ಈ ಹಾಡಿನ ಕಾಪಿರೈಟ್ಸ್ ಬಗ್ಗೆ ಈಗಾಗಲೆ ಬಾಲಿವುಡ್‌ನಲ್ಲಿ ತೀವ್ರ ಸ್ಪರ್ಧೆ ಎದುರಾಗಿದೆ. ಇಷ್ಟಕ್ಕೂ ಕೊಲವೆರಿ ಡಿ ಎಂದರೆ ಮೀನಿಂಗ್ ಏನು?
ಒಬ್ಬ ಸಾದಾಸೀದಾ ಹುಡುಗ. ಲವ್ವಲ್ಲಿ ಬೀಳ್ತಾನೆ. ಕೆಲವು ಕಾರಣಗಳಿಂದ ಪ್ರೇಮ ವಿಫಲವಾಗುತ್ತದೆ. ಇದೇ ನೋವಿನಲ್ಲಿ ಒಂದು ಹಾಡು ಹಾಡುತ್ತಾನೆ. ಅದೂ ತಂಗ್ಲಿಷ್ (ತಮಿಳು + ಇಂಗ್ಲಿಷ್). "ಯೋ ಬಾಯಿಸ್ ಅಯಾಮ್ ಸಿಂಗಿಂಗ್ ಎ ಸಾಂಗ್. ಸೂಪ್ ಸಾಂಗ್..ಪ್ಲಾಪ್ ಸಾಂಗ್...ವೈ ದಿಸ್ ಕೊಲವೆರಿ ಡಿ...." ಎಂದು ಹಾಡುತ್ತಾನೆ.
"ವೈಟು ಸ್ಕಿನ್ನು ಗರಲು (ಗರ್ಲ್). ಗರಲು ಹಾರ್ಟು ಬ್ಲಾಕು...ಐಸು ಐಸು ಮೀಟು...ಮೈ ಫ್ಯೂಚರು ಡಾರ್ಕು...ವೈ ದಿಸ್ ಕೊಲವೆರಿ ಡಿ..." ಎಂದು ಒಂಥರಾ ರತ್ನನ ಪದಗಳ ಶೈಲಿಯಲ್ಲಿ ಹಾಡು ಸಾಗುತ್ತದೆ. ಲವ್ ಫೈಲೂರ್ ನೋವು, ಸಂಕಟಗಳು ಹಾಡಾಗಿ ಹೊರಹೊಮ್ಮುತ್ತವೆ.
ಈ ಹಾಡು ಯುವ ಜನತೆಯನ್ನಷ್ಟೇ ಅಲ್ಲ, ಅಮಿತಾಬ್‌ರಂತಹವನ್ನು ಆಕರ್ಷಿಸಿರುವುದು ವಿಶೇಷ. ಯೂಟ್ಯೂಬ್ ಫೇಸ್‌ಬುಕ್‌ಗಳಂತಹ ಸಾಮಾಜಿಕ ತಾಣಗಳಲ್ಲಿ ಕೋಲಾಹಲ ಸೃಷ್ಟಿಸಿದೆ. ಇನ್ನು ವೈ ದಿಸ್ ಕೊಲವೆರಿ ಡಿ ಎಂದರೆ ಅರ್ಥ..."ಕೊಲ್ಲಬೇಕೆಂಬಷ್ಟು ದ್ವೇಷ ಯಾಕೆ, ಹುಡುಗಿ?" ಎಂದು. (ಏಜೆನ್ಸೀಸ್)


Click it and Unblock the Notifications











