»   » ಸ್ಯಾಂಡಲ್ವುಡ್ನಲ್ಲಿ ಬಾಲಿವುಡ್ ಹಕ್ಕಿಗಳ ಕಲರವ

ಸ್ಯಾಂಡಲ್ವುಡ್ನಲ್ಲಿ ಬಾಲಿವುಡ್ ಹಕ್ಕಿಗಳ ಕಲರವ

Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ್ದ ಯಶಸ್ವಿ 'ಹುಡುಗಾಟ' ಚಿತ್ರ ನಿರ್ದೆಶಿಸಿದ್ದ ಸಂಜಯ್ ಈಗ 'ಪರಿಚಯ' ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರೇಖಾ ಹಾಗೂ ತರುಣ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರ ಜೊತೆಗೆ ಸಂಗೀತ ನಿರ್ದೇಶಕರಾಗಿ ಜೆಸ್ಸಿಗಿಫ್ಟ್ ಇರುತ್ತಾರೆ.

ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ವಿಭಿನ್ನ ಮತ್ತು ಅದ್ದೂರಿಯಾಗಿ ನಡೆಸಲು ಚಿತ್ರತಂಡ ನಿರ್ಧರಿಸಿದೆ. ನಿರ್ದೇಶಕರ ಪ್ರಕಾರ , ಈ ಚಿತ್ರಕ್ಕೆ ಹಾಡಿರುವ ಬಾಲಿವುಡ್ ಘಟಾನುಘಟಿಗಳಾದ ಶಾನ್, ಅಲಿಷಾ ಚಿನಾಯ್, ಬಾಬಾ ಸೈಗಲ್, ಕೈಲಾಶ್ ಖೇರ್, ಜುಬಿನ್ ಮತ್ತು ಶ್ರೇಯಾ ಘೋಶಾಲ್ ರಾಕ್ ಶೋದಲ್ಲಿ ಭಾಗವಹಿಸಲಿದ್ದಾರಂತೆ.

ಬಾಬಾ ಸೈಗಲ್ ಹಾಗೂ ಬ್ಲೇಜ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ್ದರೆ, ಶ್ರೇಯಾ ಘೋಶಾಲ್ ಅಂತೂ ಕನ್ನಡದ ಗಾಯಕಿಯರಿಗಿಂತ ಜಾಸ್ತಿ ಕನ್ನಡದಲ್ಲಿ ಹಾಡಿದ್ದರೇನೋ? ರಾಕ್ ಶೋ ನಲ್ಲಿ ಕನ್ನಡದ ಗಾಯಕರೂ ಕೂಡಾ ಇರುತ್ತಾರಂತೆ. ಇದೇ ತಿಂಗಳಲ್ಲಿ ಕಾರ್ಯಕ್ರಮ ನಡೆಸಲು ಸಂಜಯ್ ಯೋಚಿಸಿದ್ದಾರೆ.

ಕನ್ನಡದ ಗಾಯಕ, ಗಾಯಕಿಯರು ಮತ್ತೆ ರಸ್ತೆಗಿಳಿತ್ತಾರೋ ಕಾದು ನೋಡೋಣ?

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada