twitter
    For Quick Alerts
    ALLOW NOTIFICATIONS  
    For Daily Alerts

    ಸಿಲಿಕಾನ್ ಸಿಟಿಯಲ್ಲಿ ಜೀ ಕನ್ನಡದ ಹಾಡು ಹಬ್ಬ

    By Rajendra
    |

    ಮೆರಿಕ್ರಿಸ್‌ಮಸ್ ಹಾಗೂ ವರ್ಷದ ಕೊನೆಯ ವಿಶೇಷವಾಗಿ ನಾಡಿನ ಜನಪ್ರಿಯ ಕಿರುತೆರೆ ವಾಹಿನಿ ಜೀ ಕನ್ನಡ ಬೆಂಗಳೂರಿನಲ್ಲಿ 'ಹಾಡು ಹಬ್ಬ' ಎಂಬ ವಿಶಿಷ್ಠ ಸಂಗೀತ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಡಿಸೆಂಬರ್ 25ರ ಮಧ್ಯಾಹ್ನ ಹಾಗೂ ಸಂಜೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸುಮಾರು 15 ಗಾಯಕ, ಗಾಯಕಿಯರು ಕನ್ನಡ ಚಲನಚಿತ್ರರಂಗದ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ.

    ಎಪ್ಪತ್ತರ ದಶಕದ ಆರಂಭದಿಂದ ಇಂದಿನ ವರೆಗೂ ಮೂಡಿ ಬಂದಿರುವ ವಿವಿಧ ಚಲನಚಿತ್ರಗಳ ಗೀತೆಗಳನ್ನು ಈ ಕಾರ್ಯಕ್ರಮದಲ್ಲಿ ಹಾಡಲು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜೀ ಸಮೂಹ ಸಂಸ್ಥೆಯ ದಕ್ಷಿಣ ಭಾರತದ ಮುಖ್ಯಸ್ಥರಾದ ಡಾ. ಗೌತಮ್ ಮಾಚಯ್ಯ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜೀ ಕನ್ನಡದ ವೀಕ್ಷಕರು ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

    ಆದರೆ ಇಲ್ಲಿ ಪಾಲ್ಗೊಳ್ಳಲು ಪಾಸ್ ಕಡ್ಡಾಯವಾಗಿದ್ದು ಇದನ್ನು ಜೀ ಕನ್ನಡ ಕಛೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. ದಿನಾಂಕ 21.12.2010ರ ಮಂಗಳವಾರದಿಂದ ಪಾಸ್‌ಗಳನ್ನು ವಿತರಿಸಲಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.

    ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

    ದಿನಾಂಕ 25.12.2010ರಂದು ಮಧ್ಯಾಹ್ನ 2.30 ಗಂಟೆಗೆ ಹಾಗೂ ಸಂಜೆ 6.30 ಗಂಟೆಗೆ ಎರಡು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಕಾರ್ಯಕ್ರಮ ನಿಮಾನ್ಸ್ ಕನ್ವೆನ್ಷನ್ ಸೆಂಟರ್, ನಿಮಾನ್ಸ್ ಆವರಣ, ಹೊಸೂರು ರಸ್ತೆ, ಇಲ್ಲಿ ನಡೆಯಲಿದೆ. ಎರಡೂ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಪ್ರವೇಶವಿದ್ದು ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

    ಹಾಡು ಹಬ್ಬ ಏನು? ಹೇಗೆ? : ನಾಡಿನ ಬಹುತೇಕ ಹೆಸರಾಂತ ಗಾಯಕ, ಗಾಯಕಿಯರು ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ಇಲ್ಲಿನ ವಿಶೇಷ ಈ ಎಲ್ಲಾ ಗಾಯಕ, ಗಾಯಕಿಯರು ಹಳೆಯ ಹಾಗೂ ಹೊಸ ಹಾಡುಗಳನ್ನು ನಿರಂತರವಾಗಿ ಹಾಡಲಿದ್ದಾರೆ.

    ಯಾರ‍್ಯಾರು ಹಾಡಲಿದ್ದಾರೆ? : ಬಿ. ಜಯಶ್ರಿ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಎಂ.ಡಿ. ಪಲ್ಲವಿ, ನಂದಿತಾ, ಆನೂರು ಅನಂತಕೃಷ್ಣಶರ್ಮ, ಅರ್ಚನಾ ಉಡುಪ, ಶಮಿತಾ ಮಲ್ನಾಡ್, ಸುನೀತಾ, ಮಂಗಳಾ, ಮಾಧುರಿ, ಫಯಾಜ್ ಖಾನ್, ಚೇತನ್, ವ್ಯಾಸರಾಜ್ ಹಾಗೂ ದೀಪಕ್ ಈ ಎಲ್ಲಾ ಗಾಯಕ, ಗಾಯಕಿಯರು ಹಾಡು ಹಬ್ಬದಲ್ಲಿ ಹಾಡಲಿದ್ದಾರೆ. ಇವರ ಜೊತೆಗೆ ಕನ್ನಡ ಚಿತ್ರರಂಗದ ನಟ, ನಟಿಯರೂ ಸಹ ಪಾಲ್ಗೊಳ್ಳಲಿದ್ದು ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. [ಜೀ ಕನ್ನಡ]

    English summary
    Zee Kannada"s Special Event "Haadu Habba" which will be organised on 25th December 2010. B Jayashree, Vijay Prakash, M D Pallavi, Nanditha, Archana Udupa and other singers to be singing Kannada songs in this event.
    Wednesday, December 22, 2010, 11:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X