»   » ಜಾಲಿ ಡೇಸ್ ಕಾರ್ಯಕ್ರಮದಲ್ಲಿ ಶ್ರೀಶಾಂತ್

ಜಾಲಿ ಡೇಸ್ ಕಾರ್ಯಕ್ರಮದಲ್ಲಿ ಶ್ರೀಶಾಂತ್

Subscribe to Filmibeat Kannada
Srishanth at Jolly Days audio release
'ಜಾಲಿ ಡೇಸ್' ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತ ಕ್ರಿಕೆಟ್ ತಂಡದ ಆರಂಭಿಕ ವೇಗಿ ಶ್ರೀಶಾಂತ್ ತಮ್ಮ ಮೊದಲ ಇನ್ನಿಂಗ್ಸ್ ಕನ್ನಡ ಚಿತ್ರರಂಗದಲ್ಲಿ ಪ್ರಾರಂಭಿಸಿದರು.ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ ಶನಿವಾರ ಅದ್ದೂರಿಯಾಗಿ ನಡೆದ 'ಜಾಲಿ ಡೇಸ್' ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಯಿತು.

ಶ್ರೀಶಾಂತ್ ಹಾಗೂ ಬಣ್ಣದ ಲೋಕದ ಸಂಬಂಧ ಇದೇ ಮೊದಲಲ್ಲ.ಅವರು ಈಗಾಗಲೇ 'ಕಲರ್' ಚಾನೆಲ್ ನ 'ಏಕ ಕಿಲಾಡಿ ಏಕ್ ಹಸೀನಾ' ಎಂಬ ಕಾರ್ಯಕ್ರಮದಲ್ಲಿ ತಾನೊಬ್ಬ ಉತ್ತಮ ನೃತ್ಯ ಪಟು ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ಜಾಲಿ ಡೇಸ್ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅರ್ಧ ಗಂಟೆಗೂ ಹೆಚ್ಚಿನ ಕಾಲ ಕಳೆದದ್ದ್ದು ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದಿತ್ತು.

'ನೀವೆಲ್ಲಾ ಚೆನ್ನಾಗಿದ್ದೀರಾ?' ಎಂದು ಕನ್ನಡದಲ್ಲಿ ಕೇಳುವ ಮೂಲಕ ತುಂಬಿದ ಸಭೆಯನ್ನು ಅಚ್ಚರಿಯ ಕಡಲಲ್ಲಿ ತೇಲಿಸಿ ಮುಳುಗಿಸಿದರು. ಜಾಲಿ ಡೇಸ್ ಚಿತ್ರದ ಹಾಡುಗಳನ್ನು ತಾನು ಈಗಾಗಲೇ ಕೇಳಿದ್ದೇನೆ, ಇಂಪಾಗಿವೆ ಎಂದು ಪ್ರಮಾಣ ಪತ್ರ ನೀಡಿದರು. ಪುನೀತ್ ರಾಜ್ ಕುಮಾರ್ ಅವರ ನಟನೆಯನ್ನು ಮೆಚ್ಚಿಕೊಂಡರು. ನಂತರ ಜಾಲಿ ಡೇಸ್ ನ ಹೊಸಬರನ್ನು ಹಾರೈಸಿದರು.

ತೆಲುಗಿನ 'ಹ್ಯಾಪಿ ಡೇಸ್' ಚಿತ್ರದ ರೀಮೇಕ್ 'ಜಾಲಿ ಡೇಸ್'. ಈ ಚಿತ್ರವನ್ನು ಫ್ರೆಂಡ್ಸ್, ಚೆಲ್ಲಾಟ, ಕೃಷ್ಣ, ದೇವರು ವರವನು ಕೊಟ್ರೆ ಚಿತ್ರಗಳ ನಿರ್ದೇಶಕ ಎಂ.ಡಿ.ಶ್ರೀಧರ್ ನಿರ್ದೇಶಿಸುತ್ತಿದ್ದಾರೆ. ತೆಲುಗಿನ ಮಾದಿರೆಡ್ಡಿ ಪರಮ್ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿರುವ ಆರು ಹಾಡುಗಳಿಗೆ ಕವಿರಾಜ್ ಸಾಹಿತ್ಯ ವಿದೆ. ವರ್ಣರಂಜಿತ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಆನಂದ್ ಆಡಿಯೋದ ಮೋಹನ್, ಕೆ ಎಫ್ ಸಿಸಿ ಮಾಜಿ ಅಧ್ಯಕ್ಷ ಗಂಗರಾಜು, ಛಾಯಾಗ್ರಾಹಕ ಕೃಷ್ಣಕುಮಾರ್ ಹಾಗೂ 'ಜಾಲಿ ಡೇಸ್' ಚಿತ್ರತಂಡವರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada