twitter
    For Quick Alerts
    ALLOW NOTIFICATIONS  
    For Daily Alerts

    ಉಳುವ ಯೋಗಿಯ ದಿರಿಸಿನಲ್ಲಿ ಡಾ.ರಾಜ್

    By Staff
    |

    ಚಿತ್ರ: ಕಾಮನಬಿಲ್ಲು(1983) -
    ಸಾಹಿತ್ಯ: ಕುವೆಂಪು
    ಸಂಗೀತ :ಉಪೇಂದ್ರಕುಮಾರ್
    ಧ್ವನಿ ; ಸಿ. ಅಶ್ವಥ್

    ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರಚಿಸಿದ 'ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ' ಎಂಬ ರೈತ ಗೀತೆಗೆ ಬಿಜೆಪಿ ಸರ್ಕಾರ ನಾಡಗೀತೆಯ ಮಾನ್ಯತೆ ನೀಡಲು ನಿರ್ಧರಿಸಿದೆ. ಕುವೆಂಪು ಸಾಹಿತ್ಯದ ಈ ಹಾಡನ್ನು 'ಕಾಮನಬಿಲ್ಲು' ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಮೇರು ನಟ ಡಾ. ರಾಜ್ ಕುಮಾರ್, ಅನಂತ್ ನಾಗ್ ನಟಿಸಿದ ಈ ಹಾಡಿಗೆ ಸಿ. ಅಶ್ವಥ್ ದನಿಗೂಡಿಸಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಈ ಹಾಡು ಅಜರಾಮರವಾಗಿಲಿ. ಈ ಹಾಡಿನ ಪೂರ್ಣ ಚರಣ ಇಲ್ಲಿದೆ.

    ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ
    ಫಲವನು ಬಯಸದೆ ಸೇವೆಯೆ ಪೂಜೆಯು ಕರ್ಮವೆ ಇಹಪರ ಸಾಧನವು
    ಕಷ್ಟದೊಳನ್ನವ ದುಡಿವನೆ ತ್ಯಾಗಿ ಸೃಷ್ಟಿನಿಯಮದೊಳಗವನೇ ಭೋಗೀ
    ಉಳುವಾ ಯೋಗಿಯ ನೋಡಲ್ಲಿ ||

    ಲೋಕದೊಳೇನೇ ನಡೆಯುತಲಿರಲಿ ತನ್ನೀ ಕಾರ್ಯವ ಬಿಡನೆಂದೂ
    ರಾಜ್ಯಗಳುಳಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮುಕುಟಗಳು
    ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತುಳುವುದನವ ಬಿಡುವುದೆ ಇಲ್ಲ ||
    ಉಳುವಾ ಯೋಗಿಯ ನೋಡಲ್ಲಿ ||

    ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನು
    ಹೆಸರನು ಬಯಸದೆ ಅತಿಸುಖ ಗಳಿಸದೆ ದುಡಿವನು ಗೌರವಕಾಶಿಸದೆ
    ನೇಗಿಲ ಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ||
    ಉಳುವಾ ಯೋಗಿಯ ನೋಡಲ್ಲಿ ||

    Thursday, July 23, 2009, 15:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X