ಹೊಸ ಪ್ರತಿಭೆ ರಾಂ ಪ್ರಸಾದ್ ರ ಬಣ್ಣಬಣ್ಣದ ಲೋಕ

ಪ್ರಸಾದ್ ರಚಿಸಿರುವ 'ನಿಂತೇ ನೀ ನನ್ನಮನದಲ್ಲಿ - ನೀನೀರುವೆ ಕ್ಷಣಕ್ಷಣದಲ್ಲಿ, ಕೀರ್ತಿ ರಚಿಸಿರುವ 'ಒಲವು ಮಾತ್ರ ಲವ್ವೇನಾ?-ಬಯಕೆ ಅಂದ್ರೆ ಲವ್ವೇನಾ? ಹಾಗೂ ಗಿರಿ ರಚನೆಯ 'ಈ ಲೋಕ ಈ ಲೋಕ ಬಣ್ಣ ಬಣ್ಣದ ಲೋಕ - ನೂರಾರು ಕನಸುಗಳ ಹೊತ್ತು ತಿರುಗೋ ಲೋಕ ಗೀತೆ ಸೇರಿದಂತೆ ಚಿತ್ರದ ಏಳು ಗೀತೆಗಳು ಈ ಸಮಯದಲ್ಲಿ ಧ್ವನಿಮುದ್ರಣಗೊಂಡವು ಎಂದು ಸಂಗೀತ ನಿರ್ದೇಶಕ ಡಿ.ಥಾಮಸ್ ತಿಳಿಸಿದ್ದಾರೆ.
ಚಿತ್ರಕ್ಕೆ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಏಪ್ರಿಲ್ ತಿಂಗಳಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರಾದ ಶಶಿಕಲಾ ಹಾಗೂ ನರಸಿಂಹ ಮೂರ್ತಿ ತಿಳಿಸಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ರಾಂಪ್ರಸಾದ್ ನೂತನ ಪ್ರತಿಭೆ. ನಟನೆಗಷ್ಟೇ ಸೀಮಿತರಾಗದ ಪ್ರಸಾದ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ವಿ.ಚಂದ್ರಶೇಖರ್ ಛಾಯಾಗ್ರಹಣ, ಡಿ.ಥಾಮಸ್ ಸಂಗೀತ, ಬಸವರಾಜ್ ಸಂಕಲನ, ಅಶೋಕ್ ಸಾಹಸ, ಅನಿಲ್‌ಕೃಷ್ಣ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಂಪ್ರಸಾದ್, ಶ್ರಾವಣಿ, ರೂಪ, ವಿನುಷ, ಬ್ಯಾಂಕ್ ಜನಾರ್ಧನ್, ಸಂತೋಷ್ ಉಪ್ಪಿನ್, ರೇಖಾ ವಿ ಕುಮಾರ್, ಪೂರ್ವ ವಸಂತಕುಮಾರ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ ಓದಿ
ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಾಪ್ಲಿನ್ ಪ್ರತಿಮೆ
ಬಳ್ಳಾರಿಯಲ್ಲಿ ವೀರಮದಕರಿ ಭಿತ್ತಿಪತ್ರಗಳಿಗೆ ಕೊಕ್
ಐಪಿಎಲ್ ಪಂದ್ಯಗಳಿಗೆ ಕನ್ನಡ ತಾರೆಗಳ ಚಿಯರ್ಸ್!
ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಂಡಾಂತರವಂತೆ!


Click it and Unblock the Notifications











