»   » ಹೇ ಮನುಜ, ನಿನ್ನಾಶಾ ತೀರ ಗಾಳಿ ಗೋಪುರ!

ಹೇ ಮನುಜ, ನಿನ್ನಾಶಾ ತೀರ ಗಾಳಿ ಗೋಪುರ!

Subscribe to Filmibeat Kannada

1963ರಲ್ಲಿ ತೆರೆಕಂಡ ಕಪ್ಪು ಬಿಳುಪು ಚಿತ್ರ 'ನಂದಾ ದೀಪ'ದ ಭೈರವಿ ರಾಗದಲ್ಲಿರುವ ಈ ಹಾಡನ್ನು ಕೇಳುತ್ತಾ ಕೇಳುತ್ತಾ ಹೋದಂತೆ ನಿಮ್ಮನ್ನು ತೇಲಿಸಿ ತೇಲಿಸಿ ಅರವತ್ತರ ದಶಕಕ್ಕಲ್ಲ ಮತ್ತೆ ವರ್ತಮಾನಕ್ಕೆ ಎಳೆದು ತರುತ್ತದೆ. ಈ ಹಾಡಿನಲ್ಲಿರುವ ಶಕ್ತಿಯೇ ಅಂಥದು. ಎಲ್ಲಕಾಲಕ್ಕೂ ಸಲ್ಲುವಂತಹುದು. ಪ್ರಸ್ತುತ ರಾಜಕೀಯ ವಿದ್ಯಮಾನವನ್ನು ಗಮನದಲ್ಲಿಟ್ಟುಕೊಂಡು ಅಂದೇ ರಚಿಸಿದಂತೆ ನಿಮಗೆ ಅನ್ನಿಸುವುದಿಲ್ಲವೆ? ಅಥವ ಮುಂಬರುವ ರಾಜಕೀಯ ಚಿತ್ರಣವನ್ನು ಬಿಂಬಿಸಿಕೊಂಡು ಅಂದೇ ರಚಿತವಾಯಿತೇ? ಅಥವಾ ಮರೀಚಿಕೆಯ ಬೆನ್ನುಹಿಂದೆ ಓಡುವ ಮನುಜನ ಪಾಡನ್ನು ಅಣಕಿಸುವ ತತ್ವಪದವೆ ? ಇರಲಿ. ಅಧಿಕಾರದ ಗಾಳಿಗೋಪುರ ಕಟ್ಟಿ 'ನಂಬಿಗಸ್ತರ' ನಗುವಿನ ಬಲೆಗೆ ಬಿದ್ದು ಶೋಕವನ್ನು ಕಾಣಿಕೆಯಾಗಿ ಪಡೆದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ Gone with the wind ಕಾಣಿಕೆಯಾಗಿ ಈ ಹಾಡು!

ಸಂಗೀತ : ವೆಂಕಟರಾಜು ಎಮ್
ರಚನೆ : ಸೋರಟ್ ಅಶ್ವತ್ಥ್
ಗಾಯಕಿ : ಎಸ್ ಜಾನಕಿ

ಗಾಳಿ ಗೋಪುರ
ನಿನ್ನಾಶಾ ತೀರ
ಗಾಳಿ ಗೋಪುರ
ನಿನ್ನಾಶಾ ತೀರ
ನಾಳೆ ಕಾಣುವ
ಸುಖದ ವಿಚಾರ

ಪ್ರೇಮವೆ ದೈವ ಎನುವೆ ಜೀವ
ಮರೆವೆ ನೀ ಲೋಕವ
ಪ್ರೇಮವೆ ದೈವ ಎನುವೆ ಜೀವ
ಮರೆವೆ ನೀ ಲೋಕವ
ಅಗಲಿಕೆ ತಂದ ಕಣ್ಣೀರಿನಿಂದ
ವ್ಯಥೆಯೆ ತುಂಬಿದ
ಗಾಳಿ ಗೋಪುರ

ಮಾನವ ನೀನು ಮಮತ ಪಾಶಕೆ
ಕುಣಿಯುವ ಕೈ ಬೊಂಬೆಯೋ
ಮಾನವ ನೀನು ಮಮತ ಪಾಷಕೆ
ಕುಣಿಯುವ ಕೈ ಬೊಂಬೆಯೋ
ನಗುವಿನ ಬಲೆಗೆ
ಆಳಾಗಿ ಸಿಲುಕೆ
ಶೋಕವೆ ಕಾಣಿಕೆ
ಗಾಳಿ ಗೋಪುರ

ಆಟದ ಬಾಳು ದಿನವು ಸೋಲು
ಗೆಲುವನೆ ನೀ ಕಾಣದೇ
ಆಟದ ಬಾಳು ದಿನವು ಸೋಲು
ಗೆಲುವನೆ ನೀ ಕಾಣದೇ
ಕನಸಿನ ಸುಖಕೆ
ಈಡಾಗೆ ಬಯಕೆ
ತಾಪದ ತೀರಿಕೆ
ಗಾಳಿ ಗೋಪುರ
ನಿನ್ನಾಶಾ ತೀರ
ನಾಳೆ ಕಾಣುವ
ಸುಖದ ವಿಚಾರ
ಗಾಳಿ ಗೋಪುರ
ಗಾಳಿ ಗೋಪುರ
ಗಾಳಿ ಗೋಪುರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada